ಬೆಂಗಳೂರು: ಪ್ರತಿ ಯೂನಿಟ್‌ಗೆ 70 ಪೈಸೆ ವಿದ್ಯುತ್ ದರ ಪರಿಷ್ಕರಣೆ ಜತೆಗೆ ಗೃಹ ಬಳಕೆದಾರರ ಎರಡು ಹಂತಗಳ ಶುಲ್ಕ ನಿಗದಿಯಲ್ಲೂ ಮಾರ್ಪಾಡು ಮಾಡಿ ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಆದೇಶ ಹೊರಡಿಸಿದೆ.
ಇದರಿಂದ ಜೂನ್‌ನಲ್ಲಿಯ ಬಿಲ್‌ನಲ್ಲಿ ಗ್ರಾಹಕರಿಗೆ ದರ ಹೆಚ್ಚಳ ಆಗುತ್ತಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಸಮಜಾಯಿಷಿ ನೀಡಿದೆ.
ಮಾರ್ಚ್-ಏಪ್ರಿಲ್‌ನಲ್ಲಿ ಜಾರಿಗೆ ಬರಬೇಕಿದ್ದ ದರ ಪರಿಷ್ಕರಣೆ ಆದೇಶವನ್ನು ಮಾರ್ಚ್ 29, 2023ರಂದು ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದ ಹಿನ್ನೆಲೆಯಲ್ಲಿ ಕೆಇಆರ್‌ಸಿ ತಡೆ ಹಿಡಿದಿತ್ತು, ಚುನಾವಣೆ ಮುಗಿದ ತಕ್ಷಣ, ಮೇ 12ರಂದು ದರ ಪರಿಷ್ಕರಣೆ ಮಾಡಿ ಏಪ್ರಿಲ್‌ನಿಂದ ಪೂರ್ವನ್ವ ಯವಾಗುವಂತೆ ಮೇ 12ರಂದು ಕೆಇಆರ್‌ಸಿ ಆದೇಶ ಹೊರಡಿಸಿದೆ. ಅದರಂತೆ ಹಿಂಬಾಕಿ ಯನ್ನು ಬಿಲ್‌ನಲ್ಲಿ ನೀಡಲಾಗುತ್ತಿದೆ.
ಮೂರು ಹಂತಗಳಲ್ಲಿ ದರ ನಿಗದಿ ಇತ್ತು: ಅಲ್ಲದೆ, 0-100 ಯೂನಿಟ್‌ವರೆಗೆ ಪ್ರತಿ ಯೂನಿಟ್‌ಗೆ 4.75 ರೂ. ಇದೆ. ಒಂದು ವೇಳೆ 100 ಯೂನಿಟ್ ಮೀರಿದರೆ, ಬಳ ಸಿದ ಅಷ್ಟೂ ಯೂನಿಟ್‌ಗೆ ಪ್ರತಿ ಯೂನಿಟ್‌ಗೆ 7 ರೂ. ದರ ಅನ್ವಯ ಆಗಲಿದೆ. ಈ ಮೊದಲು ಮೂರು ಹಂತಗಳಲ್ಲಿ ದರ ವಿಧಿಸಲಾಗುತ್ತಿತ್ತು. 0-50 ಯೂನಿಟ್‌ಗೆ ತಲಾ 4.15 ರೂ., 51-100 ಯೂನಿಟ್‌ಗೆ ತಲಾ 4.75 ರೂ. ಹಾಗೂ 100 ಯೂನಿಟ್ ಮೀರಿ ದರೆ ತಲಾ 7 ರೂ. ನಿಗದಿಪಡಿಸಲಾಗಿತ್ತು. ಈಗ ಇದನ್ನು ಎರಡು ಹಂತಕ್ಕೆ ಇಳಿಸಿದ್ದು, 100 ಯೂನಿಟ್ ದಾಟಿದರೆ ಪ್ರತಿ ಯೂನಿಟ್‌ಗೆ 7 ರೂ. ದರ ವಿಧಿಸಲು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.
ಎಸ್ಕಾಂಗಳಿಗೆ ಅನುಮತಿ: ಇನ್ನು ಕಾಲ- ಕಾಲಕ್ಕೆ ಕೆಇಆರ್‌ಸಿ ಜಾರಿಗೊಳಿಸುವ ವಿದ್ಯುತ್ ದರ ಪರಿಷ್ಕರಣೆಗೂ ಮತ್ತು ಎಸ್ಕಾಂ ಗಳು ಜನರೇಟರ್‌ಗಳಿಂದ ಖರೀದಿ ಸುವ ವಿದ್ಯುತ್ ಮೇಲಿನ ಇಂಧನ ವೆಚ್ಚದಲ್ಲಿನ ಬೆಲೆಯಲ್ಲಿ ವ್ಯತ್ಯಾಸ ಉಂಟಾಗುವುದರಿಂದ “ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚ ಹೊಂದಾಣಿಕೆ ಶುಲ್ಕ’ವನ್ನು ವಿಧಿಸಲು ಕೆಇಆರ್‌ಸಿ ಎಸ್ಕಾಂಗಳಿಗೆ ಅನುಮತಿ ನೀಡುತ್ತದೆ. ಅದರಂತೆ ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚವನ್ನು ಪ್ರತಿ ತಿಂಗಳು ಗ್ರಾಹಕರಿಂದ ಸಂಗ್ರಹಿಸಲು ಕೆಇಆರ್‌ಸಿ 2023ರ ಫೆಬ್ರವರಿ 23ರಂದು ಅಧಿಸೂಚನೆ ಹೊರಡಿಸಿತ್ತು. ಹಾಗಾಗಿ ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚವನ್ನು ಬೆಸ್ಕಾಂ ಗ್ರಾಹ ಕರಿಗೆ ಪ್ರತಿ ಯೂನಿಟ್‌ಗೆ 59 ಪೈಸೆಯಷ್ಟು ವಿಧಿಸಲು ಆಯೋಗ ಅನುಮತಿ ನೀಡಿದೆ. ಈ ಮೊತ್ತ ವನ್ನು ಜೂನ್ ತಿಂಗಳಲ್ಲಿ ಗ್ರಾಹಕರಿಂದ ಸಂಗ್ರಹಿಸಲಾಗುತ್ತಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ