Advertisement
ಸುಬ್ರಹ್ಮಣ್ಯ: ರಾಜ್ಯದ ನಂ.1 ಆದಾಯವುಳ್ಳ ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಸೂಕ್ತ ವೈದ್ಯಕೀಯ ಸೌಲಭ್ಯಗಳನ್ನು ಆಗ್ರಹಿಸುವಂತೆ ವಿವಿಧ ಸಂಘಸಂಸ್ಥೆಗಳ ನೇತೃತ್ವದಲ್ಲಿ ಗುರುವಾರ ಸುಬ್ರಹ್ಮಣ್ಯದಲ್ಲಿ ಬೃಹತ್ ಪ್ರತಿಭಟನೆ ಜರಗಿತು. ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಸಮಾಜ ಸೇವಕ,ಉದ್ಯಮಿ ಯಜ್ಞೆಶ್ ಆಚಾರ್, ಸುಬ್ರಹ್ಮಣ್ಯ ಕ್ಷೇತ್ರ ಶೀಘ್ರಗತಿಯಲ್ಲಿ ಪ್ರಗತಿಹೊಂದುತ್ತಿದೆ. ದೇಶವಿದೇಶಗಳಿಂದ ನಿತ್ಯ ಸಾವಿರಾರು ಮಂದಿ ಆಗಮಿಸುತ್ತಿದ್ದಾರೆ. ಆದರೆ ಸುಬ್ರಹ್ಮಣ್ಯದ ಆರೋಗ್ಯ ಕೇಂದ್ರದ ಅಗತ್ಯ ಮೂಲ ಸೌಕರ್ಯ, ವೈದ್ಯರ ಕೊರತೆ ಅಲ್ಲದೆ 108 ಆರೋಗ್ಯ ಕವಚದ ಅವ್ಯವಸ್ಥೆಯಿದೆ ಎಂದು ದೂರಿದರು.
Related Articles
Advertisement
ಬೇಡಿಕೆಗಳುಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಪರಿವರ್ತನೆಗೊಳಿಸುವುದು. ವೈದ್ಯಾಧಿಕಾರಿಗಳು ಒಬ್ಬರೇ ಇರುವುದರಿಂದ ದಿನದ 24ಗಂಟೆ ಕಾರ್ಯ ನಿರ್ವಹಿಸಲು ಹೆಚ್ಚುವರಿ ವೈದ್ಯರ ನೇಮಕ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸಮೀಪದಲ್ಲಿ ತುರ್ತುಚಿಕಿತ್ಸಾ ಕೇಂದ್ರ ಪ್ರಾರಂಭಿಸುವುದು. ತುರ್ತು ಚಿಕಿತ್ಸಾ ವಾಹನದ ಸಮಸ್ಯೆ ನೀಗಿಸುವಂತೆ ಪ್ರತಿಭಟನಕಾರರು ಮನವಿ ಸಲ್ಲಿಸಿದರು. ನೂರೆಂಟು ಸಮಸ್ಯೆ
ತಾಲೂಕಿಗೆ 2 ತುರ್ತು ಚಿಕಿತ್ಸಾ ವಾಹನ 108ನ್ನು ಸರಕಾರ ಒದಗಿಸಿತ್ತು. ಒಂದು ಸುಳ್ಯ ಮತ್ತೂಂದು ಸುಬ್ರಹ್ಮಣ್ಯ ಕೇಂದ್ರವಾಗಿ ವಿಂಗಡಿಸಲಾಗಿದೆ. ಈ ಪೈಕಿ ಸುಬ್ರಹ್ಮಣ್ಯದ 108 ವಾಹನ ಕಳೆದ ಕೆಲವು ಸಮಯಗಳಿಂದ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ತುರ್ತಾಗಿ ಸ್ಪಂದಿಸಲು ಸಂಚಾರಕ್ಕಾಗಿ ಚಕ್ರಗಳೇ ಸ್ಪಂದಿಸುತ್ತಿಲ್ಲವಂತೆ. ವಾಹನದಲ್ಲಿ ಸಿಬಂದಿ ಇದ್ದರೂ ಸರಕಾರದಿಂದ ಅವರಿಗೆ ಸರಿಯಾಗಿ ಸಂಬಳ ಸಿಗುತ್ತಿಲ್ಲ ಎಂಬ ಆರೋಪ ಇದೆ.