Advertisement
ಯೋಜನೆಗಳನ್ನು ರೂಪಿಸಿ: ಕೋವಿಡ್ ಸುಳ್ಳು ಎಂದು ವಾದ ಮಾಡಿದವರೂ ಕೋವಿಡ್ ಆರ್ಭಟಕ್ಕೆ ಹೆದರುತ್ತಿದ್ದಾರೆ. ಜನರ ಜತೆ ಸಂಪರ್ಕ ಕಡಿದುಕೊಳ್ಳುತ್ತಿರುವ, ಇಂತಹ ಸಂದರ್ಭದಲ್ಲಿ ಪೌರ ಕಾರ್ಮಿಕರು, ಆ್ಯಂಬುಲೆನ್ಸ್ ಚಾಲಕರು ಕೊರೊನಾದಿಂದ ಬಳಲುತ್ತಿರುವ ಹಾಗೂ ಕೋವಿಡ್ ದಿಂದ ಸಾವಿಗೀಡಾದವರ ಜತೆ ಸಂಪರ್ಕದಲ್ಲಿ ಇರುವಂತಾಗಿದೆ. ಇವರ ಕಾರ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಸರ್ಕಾರ ಮೊದಲು ಇಂತಹವರ ಯೋಗಕ್ಷೇಮಕ್ಕೆ ಯೋಜನೆಗಳನ್ನು ರೂಪಿಸಬೇಕಿದೆ.
Related Articles
Advertisement
ಇವರೇ ನಿಜವಾದ ಕೋವಿಡ್ ವಾರಿಯರ್ಸ್ :
ಸಂಬಂಧಿಕರೇ ಕೋವಿಡ್ ದಿಂದ ಮೃತಪಟ್ಟ ವ್ಯಕ್ತಿ ಬಳಿಗೆ ಬರಲು ಹೆದರುತ್ತಾರೆ. ಇಂತಹ ಸಂದರ್ಭದಲ್ಲಿ ಪೌರ ಕಾರ್ಮಿಕರು ಗೌರವಯುತವಾಗಿ ಶವ ಸಂಸ್ಕಾರ ನಡೆಸಿಕೊಡುತ್ತಿರುವುದು ಹೆಮ್ಮೆಯ ವಿಷಯ. ಇವರೇ ನಿಜವಾದ ಕೋವಿಡ್ ವಾರಿಯರ್ಸ್ ಎಂದು ಪರಿಸರ ಎಂಜಿನಿಯರ್ ಆದ ಜ್ಯೋತಿಶ್ವರಿ ತಿಳಿಸಿದ್ದಾರೆ.
ಶವ ಸಂಸ್ಕಾರ ಮಾಡಿ ಮಾನವೀಯತೆ : ಅಧಿಕಾರಿಗಳು ದೂರದಲ್ಲಿ ನಿಂತು ಹೇಳಿದ್ದನ್ನು ಚಾಚೂ ತಪ್ಪದೇ ಕೆಲಸ ನಿರ್ವಹಿಸುತ್ತಿದ್ದಾರೆ. ಬುಧವಾರಪಟ್ಟಣದಲ್ಲಿ ಕೋವಿಡ್-19ಗೆ 62 ವರ್ಷದ ವೃದ್ಧೆ ಸಾವನ್ನಪ್ಪಿದರು. ಮಹಿಳೆ ಶವ ಸಾಗಿಸಲು ಯಾರೂ ಇರಲಿಲ್ಲ. ಅಧಿಕಾರಿಗಳು ಕೊಟ್ಟ ಪಿಪಿಇ ಕಿಟ್ ಧರಿಸಿದ ಚಿಕ್ಕನಾಯಕನಹಳ್ಳಿ ಪುರಸಭೆಯ 6 ಪೌರಕಾರ್ಮಿಕರು ಹಾಗೂ ಆ್ಯಂಬುಲೆನ್ಸ್ ಚಾಲಕ, ಶವಾಗಾರದಲ್ಲಿದ್ದ ಶವವನ್ನು ಆ್ಯಂಬುಲೆನ್ಸ್ ಗೆ ಹಾಕಿಕೊಂಡು ಶವಸಂಸ್ಕಾರ ಮಾಡಿ ಮಾನವೀಯತೆ ಮೆರೆದರು.
–ಚೇತನ್