Advertisement

ನಕ್ಸಲರ ಸ್ಫೋಟಕದಿಂದ ನಾಗರಿಕ ಸಾವು

12:26 AM May 26, 2023 | Team Udayavani |

ರಾಂಚಿ: ಛತ್ತೀಸ್‌ಗಢದ ಪಶ್ಚಿಮ ಸಿಂಗಭೂಮ್‌ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ನಕ್ಸಲರು ಹುದುಗಿಸಿದ್ದ ಐಇಡಿ (ಸುಧಾರಿತ ಸ್ಫೋಟಕ ಸಾಧನ) ಸ್ಫೋಟಗೊಂಡಿದ್ದು, ಘಟನೆಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿರುವ ಹಾಗೂ ಮತ್ತೂಬ್ಬರು ಗಾಯಗೊಂಡಿದ್ದಾರೆ. ಲುಯಿಯಾ ಗ್ರಾಮದ ನಿವಾಸಿಗಳಾದ 50 ವರ್ಷದ ಖಂಡೆ ಲಗೂರಿ ಹಾಗೂ ಅವರ ಪತ್ನಿ ಇಬ್ಬರೂ ಯಾವುದೋ ಎಲೆಗಳ ಸಂಗ್ರಹಕ್ಕೆಂದು ಬುಧವಾರ ಅರಣ್ಯಕ್ಕೆ ತೆರಳಿದ್ದರು. ಈ ವೇಳೆ ಐಇಡಿ ಸ್ಫೋಟಗೊಂಡಿದೆ. ಮರುದಿನ ಅಂದರೆ ಗುರುವಾರ ವಿಚಾರ ಗ್ರಾಮಸ್ಥರಿಗೆ ತಿಳಿದ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಬಾಂಬ್‌ ನಿಷ್ಕ್ರಿಯ ದಳ ಹಾಗೂ ಸಿಆರ್‌ಪಿಎಫ್ ಸಿಬಂದಿ ಸ್ಥಳಕ್ಕೆ ಧಾವಿಸಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ತೀವ್ರವಾಗಿ ಗಾಯಗೊಂಡಿದ್ದ ಹಿನ್ನೆಲೆಯಲ್ಲಿ ಖಂಡೆ ಮೃತಪಟ್ಟಿದ್ದಾರೆ. ಅವರ ಪತ್ನಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next