Advertisement
ಹುಣಸೂರು ನಗರಸಭೆಯ ಹೊರ ಗುತ್ತಿಗೆ ಪೌರಕಾರ್ಮಿಕರು 15 ದಿನಗಳಿಂದ ಸಂಬಳ ಬಾಕಿಗಾಗಿ ಮುಷ್ಕರ ನಡೆಸುತ್ತಿರುವ ಪರಿಣಾಮ ಕಸ ವಿಲೇವಾರಿಯಾಗದೆ ಇಡೀ ನಗರವೀಗ ಗಬ್ಬೆದ್ದು ನಾರುತ್ತಿದೆ !.
Related Articles
Advertisement
ಸರಕಾರದ ನಿರ್ದೇಶನದಂತೆ ಹೊರಗುತ್ತಿಗೆ 2017 ಜುಲೈ ಅಂತ್ಯಕ್ಕೆ ರದ್ದಾದರೂ ಅನಿವಾರ್ಯವಾಗಿ ಮುಂದುವರಿಸಲಾಗಿತ್ತು. ಆದರೆ ಕಳೆದ ಐದು ತಿಂಗಳಿನಿಂದ ಇವರಿಗೆ ಸುಮಾರು 50 ಲಕ್ಷ ರೂ. ಸಂಬಳ ಬಾಕಿ ಇದ್ದರೂ ಕೆಲಸ ಮುಂದುವರಿಸಿದ್ದರು. ಆದರೆ ಸಂಬಳಕ್ಕೇ ಕಾನೂನು ತೊಡಕಿನಿಂದ ತಕ್ಷಣಕ್ಕೆ ಸಿಗುವುದಿಲ್ಲ ಎಂಬುದನ್ನು ಅರಿತು ಸಂಸಾರ ನಿರ್ವಹಣೆ ಮಾಡಲಾಗದೆ ಪರಿತಪಿಸುತ್ತಿದ್ದ 71 ಮಂದಿ ಪೌರಕಾರ್ಮಿಕರು ಸಂಬಳಕ್ಕಾಗಿ ನಗರಸಭೆ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಿದ್ದರು.
ಆಗ ಶಾಸಕ ಮಂಜುನಾಥ್ ಸಂಬಳ ಕೊಡಿಸುವ ಭರವಸೆ ನೀಡಿದ್ದರಿಂದ ಪ್ರತಿಭಟನೆ ಕೈಬಿಟ್ಟು, ಕೆಲದಿನ ಕಾರ್ಯ ನಿರ್ವಹಿಸಿದರು. ಆದರೆ ಮತ್ತೆ ಸಂಬಳ ಸಿಕ್ಕಿಲ್ಲವೆಂದು ಕಾರ್ಯ ಸ್ಥಗಿತಗೊಳಿಸಿದ ಕಾರಣ ಕಸದ ರಾಶಿಯೇ ಬಿದ್ದಿದ್ದು, ಇಡೀನಗರ ವಾಸನೆಯಿಂದ ನಾರುತ್ತಿದೆ.
ಕಸ ಸಂಗ್ರಹಣೆಯೂ ಸ್ಥಗಿತ: ಹೊರಗುತ್ತಿಗೆ ಪೌರಕಾರ್ಮಿಕರೊಂದಿಗೆ ತಳ್ಳುವ ಗಾಡಿಗಳ ಮೂಲಕ ಮನೆ ಮನೆ ಕಸ ಸಂಗ್ರಹಿಸುತ್ತಿದ್ದ ಸ್ವಸಹಾಯ ಸಂಘದ ಮಹಿಳೆಯರೂ ಸಂಬಳ ಬಂದಿಲ್ಲವೆಂದು ಕಳೆದ ತಿಂಗಳಿಂದ ಮುಷ್ಕರ ಕೈಗೊಂಡಿದ್ದಾರೆ. ಇದರಿಂದ ಮುಖ್ಯರಸ್ತೆಗಳಲ್ಲದೆ ನಗರದ ಪ್ರತಿ ಗಲ್ಲಿ, ಮನೆ ಮುಂದೆಯೂ ಸಹ ಕಸದ ರಾಶಿಯೇ ಸಂಗ್ರಹವಾಗಿದೆ.
ಪೌರಕಾರ್ಮಿಕರ ಸಂಬಳ ಬಿಡುಗಡೆಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗುತ್ತಿದ್ದು, ಶೀಘ್ರ ಆದೇಶ ಹೊರಬೀಳಲಿದೆ.-ಶಿವಕುಮಾರ್, ನಗರಸಭೆ ಅಧ್ಯಕ್ಷ ಕೆಲವೆಡೆ ಕಸಕ್ಕೆ ಬೆಂಕಿ ಹಾಕಿ ಪರಿಸರವನ್ನು ಹಾಳು ಮಾಡುತ್ತಿದ್ದಾರೆ. ಪೌರಕಾರ್ಮಿಕರ ಸಮಸ್ಯೆಯನ್ನು ಸರಕಾರ ನಿಭಾಯಿಸುವಲ್ಲಿ ವಿಫಲವಾಗಿದೆ. ತಕ್ಷಣವೇ ನಗರಸಭೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಿ.
-ಸಂಜಯ್, ಸೇವ್ ಅವರ್ ಅರ್ಥ್ ಕ್ಲಬ್ ಅಧ್ಯಕ್ಷ ಶಾಸಕರು ಹಾಗೂ ನಗರಸಭೆ ವತಿಯಿಂದ ಸರ್ಕಾರದೊಡನೆ ವ್ಯವಹರಿಸಲಾಗಿದೆ. ಪೌರಾಡಳಿತ ನಿರ್ದೇಶಕರಿಂದ ನಗರಸಭೆ ವತಿಯಿಂದಲೇ ಪೌರಕಾರ್ಮಿಕರಿಗೆ ಸಂಬಳ ವಿತರಿಸಲು ನಿರ್ದೇಶನ ನೀಡಿದ್ದು, ಇನ್ನೆರಡು ದಿನದೊಳಗೆ ಸಂಬಳ ದೊರೆಯಲಿದೆ.
-ಶಿವಪ್ಪ ನಾಯ್ಕ, ಪೌರಾಯುಕ್ತ * ಸಂಪತ್‌ಕುಮಾರ್ ಹುಣಸೂರು