ಗುರುವಾರ ಬೆಳಗ್ಗೆ 5 ಗಂಟೆ ವೇಳೆಯಲ್ಲಿ ಕೆಲಸಕ್ಕೆ ಹಾಜರಾಗಿದ್ದ ಮುರುಗೇಶ್ ಗೆ ಎದೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಹುಣಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತಾದರೂ ಫಲಕಾರಿಯಾಗಲಿಲ್ಲ. ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕರೆದೊಯ್ಯುವ ವೇಳೆ ಮಾರ್ಗ ಮದ್ಯೆ ಮೃತರಾಗಿದ್ದಾರೆ.
Advertisement
ಇದನ್ನೂ ಓದಿ:- ಬೊಕ್ಕಸಕ್ಕೆ ಕೊರತೆಯಾದರೂ ಪೆಟ್ರೋಲ್-ಡೀಸಲ್ ತೆರಿಗೆ ಇಳಿಕೆ: ಸಿಎಂ ಬೊಮ್ಮಾಯಿಯಾವುದೇ ಸೇವಾ ಭದ್ರತೆ ಇಲ್ಲದೆ ನಗರಸಭೆಗಳಲ್ಲಿ ಪೌರ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದ ಮುರುಗೇಶ್ ಕುಡುಂಬಕ್ಕೆ 20 ಲಕ್ಷರೂ ಪರಿಹಾರ ನೀಡಬೇಕು ಎಂದು ಒತ್ತಾಯಿಸಿರುವ ಪೌರ ಕಾರ್ಮಿಕರು ಆತನ ಪತ್ನಿಗೆ ಕೆಲಸ ಕೊಡಬೇಕೆಂದು ಒತ್ತಾಯಿಸುತ್ತಿದ್ದಾರೆ.
ಆಡಳಿತ ವರ್ಗಕ್ಕೆ ತಮ್ಮ ಕಷ್ಟ ಮನವರಿಕೆ ಮಾಡಲು ಕೆಲಸ ಸ್ಥಗಿತ ಗೊಳಿಸಿರುವ ಪೌರ ಕಾರ್ಮಿಕರು ನಗರಸಭೆ ಎದುರು ಶವವಿಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ.