Advertisement
ನಗರ ಪ್ರದೇಶದ ಬ್ಯುಸಿ ಜೀವನ ಕ್ರಮದಲ್ಲಿ ತಮ್ಮ ಕೆಲಸಕ್ಕೆ ಒತ್ತು ನೀಡುವುದನ್ನು ಬಿಟ್ಟರೆ ತಮ್ಮ ಆರೋಗ್ಯದ ಕುರಿತು ಮರೆತೇ ಬಿಡುತ್ತಾರೆ. ಅದಕ್ಕೆ ಅವರವರೇ ಸ್ವಯಂ ಪ್ರೇರಿತರಾಗಿ ಏನಾದರೂ ವ್ಯಾಯಾ ಮಗಳನ್ನು ಮಾಡಿಕೊಳ್ಳಬೇಕೆ ಹೊರತು ಬೇರೇನೂ ಮಾರ್ಗವಿಲ್ಲ. ಆದರೆ ಇಲ್ಲೊಂದು ನಗರ ಇಲ್ಲಿನ ಜನರ ಆರೋಗ್ಯದ ದೃಷ್ಟಿಯಿಂದ ನಗರದ ಫುಟ್ ಪಾತ್ ಗಳನ್ನು ‘ಸಿಟಿ ಫಿಟ್ ಪಾಥ್’ ಎನ್ನುವ ಕಾನ್ಸೆಪ್ಟ್ ನೊಂದಿಗೆ ಎಲ್ಲೆಡೆ ನಿರ್ಮಾಣಗೊಳಿಸಿದೆ.
ಇದು ಪಾದಚಾರಿಗಳನ್ನು ಕೇಂದ್ರೀಕರಿಸಿಕೊಂಡು ಮಾಡಲ್ಪಟ್ಟ ಕ್ರಿಯಾಶೀಲ ಯೋಜನೆಯಾಗಿದೆ. ದಿನನಿತ್ಯ ಸಂಚರಿಸುವ ಪಾದಚಾರಿ ಫುಟ್ ಪಾತ್ ಗಳಲ್ಲಿ ಈ ಸಿಟಿ ಫಿಟ್ ಪಾಥ್ ಮೊದಲು ಯೋಜನೆ ಜಾರಿಗೊಳಿಸಲಾಯಿತು. ಫುಟ್ ಪಾತ್ ಗಳನ್ನು ಆಕರ್ಷಕ ಬಣ್ಣಗಳಿಂದ ನಮ್ಮ ಹೆಜ್ಜೆಯ ಚಿತ್ರವನ್ನು ಚಿತ್ರಿಸಿ ಅದರ ಮೇಲೆ ನಡೆದುಕೊಂಡು ಹೋಗುವಂತೆ ಮಾಡಲಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಿನವರ ಹೆಜ್ಜೆ ಗುರುತುಗಳನ್ನು ಈ ಫುಟ್ ಪಾತ್ ನಲ್ಲಿ ರಚಿಸಿ ಅದರ ಮೇಲೆ ನಡೆದುಕೊಂಡು ಹೋಗುವಂತೆ ಮಾಡಿ ಆ ಮೂಲಕ ದೇಹಕ್ಕೆ ವ್ಯಾಯಾಮವನ್ನು ಮಾಡಿಸುವ ಹೊಸ ಯೋಜನೆಯನ್ನು ರೂಪಿಸಲಾಗಿದೆ. ಗ್ರಾಫಿಕ್ ವಿನ್ಯಾಸಗಳು, ಕಲರ್ ಫುಲ್ ಚಿತ್ರಗಳು, ವ್ಯಾಯಾಮದ ಕೆಲವು ಟ್ರಿಕ್ ಸ್ಪೆಪ್ ಗಳನ್ನು ಬಿಡಿಸಿ ಅದರ ಮೇಲೆ ನಡೆದುಕೊಂಡು ಹೋಗುವಂತೆ ಮಾಡಲಾಗಿದೆ. ನಗರದ ಜನರ ಕ್ಷೇಮವನ್ನು ಬಯಸುವುದರ ಜತೆಗೆ ಫುಟ್ ಪಾತ್ ಗಳನ್ನು ಅತ್ಯಂತ ಆಕರ್ಷಕವಾಗಿ ನಿರ್ಮಿಸಿ ಪಾದಚಾರಿಗಳನ್ನು ಪ್ರೋತ್ಸಾಹಿಸುವ ಕೆಲಸವನ್ನು ಮಾಡಲಾಗುತ್ತಿದೆ. ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಅನೇಕ ನಗರಗಳಲ್ಲಿ ಈ ರೀತಿಯ ಸಿಟಿ ಫಿಟ್ ಪಾಥ್‌ಗಳು ಕಾಣಸಿಗುತ್ತವೆ. ಇವು ಕೇವಲ ಪಾದಚಾರಿ ವಲಯದಲ್ಲಿ ಇರದೆ ಬಸ್ ನಿಲ್ದಾಣಗಳು, ಮೆಟ್ಟಿಲುಗಳು, ಕಾಲುದಾರಿಗಳಲ್ಲಿ ಈ ಸಿಟಿ ಫಿಟ್ ಪಾಥ್‌ಗಳು ಕಾಣ ಸಿಗುತ್ತವೆ.
Related Articles
ಈ ರಂಗು ರಂಗಿನ ಫುಟ್ ಪಾತ್ ಗಳು ಒಂದೆಡೆ ದೇಹಕ್ಕೆ ವ್ಯಾಯಾಮ ನೀಡಿದರೆ ಮಕ್ಕಳಿಗೆ ಆಟ, ಮನೋರಂಜನೆಯಾಗಿವೆ. ಈ ರೀತಿಯ ಸಿಟಿ ಫಿಟ್ ಪಾಥ್‌ನಂತಹ ಕೇಂದ್ರಗಳು ಹೊಸ ಕಲ್ಪನೆಗಳ ಜತೆಗೆ ನಮ್ಮ ನಗರಗಳಿಗೆ ಬಂದರೆ ನಗರದ ಅಭಿವೃದ್ಧಿ, ಸೌಂದರ್ಯ ಎತ್ತರಕ್ಕೇರುವುದರೊಂದಿಗೆ ನಗರದ ಜನ ತೆಯ ಆರೋಗ್ಯ ಕಾಪಾಡಲು ಇದು ಸಹಕಾರಿಯಾಗಿದೆ.
Advertisement
ವಿಶ್ವಾಸ್ ಅಡ್ಯಾರ್