Advertisement

Sirsi: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜ.23ಕ್ಕೆ ಸಿಐಟಿಯು ಪ್ರತಿಭಟನೆ

02:42 PM Jan 13, 2024 | Team Udayavani |

ಶಿರಸಿ: ಹಲವು ಬೇಡಿಕೆ ಈಡೇರಿಕೆಗೆ ಜ.23ಕ್ಕೆ ರಾಜ್ಯದೆಲ್ಲಡೆ‌ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಸಂಸದರ ಕಚೇರಿ ಎದುರು ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಿಐಟಿಯು ರಾಜ್ಯ ಅಧ್ಯಕ್ಷೆ ವರಲಕ್ಷ್ಮೀ ಹೇಳಿದರು.

Advertisement

ಅವರು ನಗರದ ಕರ್ಜಗಿ ಕಲ್ಯಾಣ ಮಂಟಪದಲ್ಲಿ ಜ.13ರ ಶನಿವಾರ ಸುದ್ದಿಗೊಷ್ಠಿ‌ ನಡೆಸಿ, ಅಂಗನವಾಡಿ, ಬಿಸಿಯೂಟ ನೌಕರರು ಒಂದು ದಿನದ ಕೆಲಸ ನಿಲ್ಲಿಸಿ ಹೋರಾಟ ಮಾಡಲಿದ್ದಾರೆ. 2013 ರಿಂದ ಅಂಗನವಾಡಿಗೆ, 2000ದಿಂದ ಬಿಸಿಯೂಟದವರಿಗೆ ವೇತನ ಹೆಚ್ಚಳ‌ ಮಾಡಿಲ್ಲ. ಹೆಚ್ಚುವರಿ ಕೆಲಸ‌ ಮಾತ್ರ ಏರುತ್ತಿದೆ. ಅಂಗನವಾಡಿ, ಬಿಸಿಯೂಟದವರಿಗೆ ಬದುಕು ನಡೆಸುವುದೇ ಕಷ್ಟವಾಗಿದೆ. ಆಹಾರ, ಆರೋಗ್ಯ, ಉದ್ಯೋಗ ಭದ್ರತೆ ಆಗಬೇಕು. ಸೇವೆ ಸರಕಾಗಿಸಿದ್ದೇ ಸಮಸ್ಯೆ ಆಗಿದೆ ಎಂದರು.

ಕೇಂದ್ರ ಸರಕಾರ ಬಜೆಟ್ ನಲ್ಲಿ ಸೇರಿಸುವುದನ್ನೂ‌ ಕಡಿತ ಮಾಡಲಾಗಿದೆ.  ಅನುದಾನ‌ ನೀಡಲು ಬಜೆಟ್ ನಲ್ಲೇ ಕೊರತೆ ಮಾಡುತ್ತಿದೆ. ಬರಲಿರುವ ಬಜೆಟ್ ನಲ್ಲಿ ಆದರೂ ಅಂಗನವಾಡಿ ಬಿಸಿಯೂಟಕ್ಕೆ ಕನಿಷ್ಠ ವೇತನ ಕೊಡಬೇಕು. ಕಡಿತ ಮಾಡಿದ ಅನುದಾನ ವಾಪಸ್ ಕೊಡಬೇಕು ಎಂದರು.

ಈಚೆಗೆ ಅಂಗನವಾಡಿ ಮಕ್ಕಳು‌ ಕಡಿಮೆಯಾಗುತ್ತಿದ್ದಾರೆ. ಬೇರೆ ಬೇರೆ ಇಲಾಖೆಯಿಂದ ಈ ಮಕ್ಕಳಿಗೆ ಶಿಕ್ಷಣ ಕೊಡುವುದು ಹೆಚ್ಚುತ್ತಿದೆ. 3ರಿಂದ 6 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯಗೊಳಿಸಬೇಕು‌ ಎಂಬ ಹೊಸ ಬೇಡಿಕೆಗಳನ್ನು ಸರಕಾರದ ಮುಂದೆ ಇಟ್ಟಿದ್ದೇವೆ. ಕಾನೂನು ಜಾರಿಗೆ ತರಬೇಕು‌ ಎಂದರು.

ಕಾರ್ಮಿಕರ ಪರವಾದ ಕಾನೂನು ಬರಬೇಕು. 31 ಸಾವಿರ ರೂ. ಸಮಾನ ಕನಿಷ್ಠ ವೇತನ ಜಾರಿಗೆ ಮಾಡಬೇಕು. ಏಕ‌ ಧರ್ಮ, ಏಕ‌ ಸಂಸ್ಜೃತಿ ಎನ್ನುವ ಕೇಂದ್ರ ಸರಕಾರ ವೇತನದಲ್ಲೂ ಏಕತೆ ತರಬೇಕಾಗಿದೆ ಎಂದರು.

Advertisement

ಸಿ.ಆರ್.ಶಾನಭೋಗ‌ ಮಾತನಾಡಿ, ಜನರಿಂದ ಕೂಡ ಈ ಬೇಡಿಕೆಗಳ ಈಡೇರಿಕೆಗೆ ಸಹಿ ಸಂಗ್ರಹ ಕೂಡ ಮಾಡಲಾಗುತ್ತಿದೆ ಎಂದರು.

ಯಮುನಾ ಗಾಂವಕರ್ ಮಾತನಾಡಿ, ಪ್ರತಿ ತಾಲೂಕಿನಿಂದ ಸರಾಸರಿ 1 ಲಕ್ಷ ಸಹಿ ಸಂಗ್ರಹಿಸುವ ಆಂದೋಲನ‌ ಮಾಡಲಾಗುತ್ತದೆ. ಜಿಲ್ಲೆಯ ಬೇರೆ ಬೇರೆ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತದೆ ಎಂದರು.

ಈ ವೇಳೆ  ಗಂಗಾ ನಾಯ್ಕ, ಮುತ್ತಾ ಪೂಜಾರಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next