Advertisement

ಮೂಲ ಸೌಕರ್ಯಕ್ಕೆ ಸಿಐಟಿಯು ಒತ್ತಾಯ

10:49 AM Sep 18, 2017 | |

ಶಹಾಬಾದ: ಬಿಪಿಎಲ್‌ ಪಡಿತರ ಚೀಟಿ ವಿತರಣೆ, ರಸ್ತೆ ನಿರ್ಮಾಣ, ಶುದ್ಧ ಕುಡಿಯುವ ನೀರು ಸೇರಿದಂತೆ
ಮೂಲ ಸೌಕರ್ಯ ಒದಗಿಸಬೇಕೆಂದು ಒತ್ತಾಯಿಸಿ ಸಿಐಟಿಯು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Advertisement

ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಮಾತನಾಡಿ, ದೇಶದಲ್ಲಿ ಶೇ. 50
ಮಹಿಳೆಯರು, ಮಕ್ಕಳು ಪೌಷ್ಟಿಕಾಂಶದ ಕೊರತೆಯಿಂದ ನರಳುತ್ತಿದ್ದಾರೆ.

ಆಹಾರ ಹಕ್ಕಿನ ಕಾಯ್ದೆಯನ್ನು ಸಂಸತ್‌ ನಲ್ಲಿ ಪಾಸ್‌ ಮಾಡಿದರೂ ಈಗಿನ ಕೇಂದ್ರ ಸರ್ಕಾರ ಜಾರಿಗೆ ತರಲು
ಮುಂದಾಗುತ್ತಿಲ್ಲ. ಹಸಿವು ಮುಕ್ತ ಕರ್ನಾಟಕ ಎಂದು ಹೇಳಿಕೊಂಡರೂ ಪಡಿತರ ಚೀಟಿಗಾಗಿ ಜನರು ಕಚೇರಿಗಳಿಗೆ
ಅಲೆಯುವಂತೆ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈಗಾಗಲೇ ಬಹುತೇಕ ಫಲಾನುಭವಿಗಳು ಪಡಿತರ ಚೀಟಿಗಾಗಿ ಆನ್‌ಲೈನ್‌ ಅರ್ಜಿ ಸಲ್ಲಿಸಿದ್ದರೂ ಕುಂಟು
ನೆಪ ಹೇಳಿ ಫಲಾನುಭವಿಗಳನ್ನು ರೇಷನ್‌ ಕಾರ್ಡ್‌ದಿಂದ ವಂಚಿತರನ್ನಾಗಿ ಮಾಡಲಾಗಿದೆ. ಆಹಾರ ಇಲಾಖೆ,
ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಕೇಳಿದರೆ ಹಾರಿಕೆ ಉತ್ತರ ನೀಡುತ್ತಿದ್ದಾರೆ.

ಸಂಧ್ಯಾ ಸುರಕ್ಷಾ, ವಿಧವಾ ಮಾಶಾಸನ ಮಂಜೂರಾತಿ ಮಾಡಿಲ್ಲ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು
ಒತ್ತಾಯಿಸಿದರು. ನಗರದಲ್ಲಿ ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ತ್ಯಾಜ್ಯ ಎಸೆಯಲಾಗಿದೆ. ಚರಂಡಿ ನೀರು ರಸ್ತೆಯ
ಮೇಲೆ ಹರಿಯುತ್ತಿರುವುದರಿಂದ ದುರ್ವಾಸನೆ ಹರಡುತ್ತಿದೆ.

Advertisement

ಕೂಡಲೇ ನಗರದ ಸ್ವತ್ಛತೆ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ನಗರಸಭೆ ಅಧ್ಯಕ್ಷರಿಗೆ ಮನವಿ ಮಾಡಿದರು. ಅಲ್ಲದೇ 15
ದಿನಗಳಲ್ಲಿ ರೇಷನ್‌ ಕಾರ್ಡ್‌ ಹಾಗೂ ಮಾಸಾಶನ ಮಂಜೂರಾತಿ ಮಾಡದಿದ್ದರೆ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಲಾಗುವುದೆಂದು ಹೇಳಿದರು.

ನಂತರ ಉಪತಹಶೀಲ್ದಾರ ಮಲ್ಲಿಕಾರ್ಜುನ ಶಿವಪುರೆ ಅವರಿಗೆ ಮನವಿ ಪತ್ರ ಸಲ್ಲಿಸಿದರು. ನಗರಸಭೆ ಅಧ್ಯಕ್ಷ ಗೀತಾಸಾಹೇಬಘಡ ಬೋಗುಂಡಿ, ಜೆಇ ಸೋಮು ರಾಠೊಡ, ಜಿಲ್ಲಾ ಸಮಿತಿ ಸದಸ್ಯ ಅಶೋಕ ಮ್ಯಾಗೇರಿ, ಕರ್ನಾಟಕ ಪ್ರಾಂತ ರೈತ ಸಂಘದ ಚಿತ್ತಾಪುರ ತಾಲೂಕಾಧ್ಯಕ್ಷ ಸಾಯಿಬಣ್ಣ ಗುಡಬಾ, ಸಿಐಟಿಯು ತಾಲೂಕಾಧ್ಯಕ್ಷ
ಶೇಖಮ್ಮಾ ಸುಗ್ಗಾ, ಶರಣಮ್ಮ ಹಳ್ಳಿ, ಸಿಐತಿಯು ಜಿಲ್ಲಾ ಉಪಾಧ್ಯಕ್ಷೆ ಗಂಗಮ್ಮ ಬಿರಾದಾರ, ಜಿಲ್ಲಾ ಕಾರ್ಯದರ್ಶಿ
ದೇವಮ್ಮ ಅನ್ನದಾನಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next