Advertisement

ಪೌರತ್ವ ಕಾಯ್ದೆ ತಿದ್ದುಪಡಿ ಬೆಂಬಲಿಸಿ ಜನಜಾಗೃತಿ ಅಭಿಯಾನ

01:08 PM Jan 20, 2020 | Suhan S |

ಬಾದಾಮಿ: ಭಾರತೀಯ ಸಂಸ್ಕೃತಿ ಉಳಿಸಿ-ಬೆಳೆಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಪೌರತ್ವ ಕಾಯ್ದೆ ಜಾರಿಗೆ ತಂದಿದೆ ಎಂದು ಬಿಜೆಪಿ ಯುವ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಯಂಕಂಚಿ ಹೇಳಿದರು.

Advertisement

ರವಿವಾರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಪೌರತ್ವ ಕಾಯ್ದೆ ತಿದ್ದುಪಡಿ ಬೆಂಬಲಿಸಿ ಜನಜಾಗೃತಿ ಅಭಿಯಾನದಲ್ಲಿ ಮಾತನಾಡಿದ ಅವರು, ಪೌರತ್ವ ಕಾಯ್ದೆ ಯಾವುದೇ ಧರ್ಮ, ಜಾತಿಯವರ ಪೌರತ್ವ ಕಿತ್ತುಕೊಳ್ಳುವುದಿಲ್ಲ. ಪೌರತ್ವ ನೀಡುವುದಾಗಿದೆ. ಸಿಎಎ ಮುಸ್ಲಿಮ್‌ ವಿರೋಧಿ  ಕಾನೂನು ಅಲ್ಲ. ಈ ಕಾನೂನನ್ನು ವಿರೋಧ ಮಾಡುವವರು ಮೊದಲು ಕಾನೂನು ಓದಿ ಅರ್ಥ ಮಾಡಿಕೊಳ್ಳಲಿ. ಈ ದೇಶದ 130 ಕೋಟಿ ಜನರಿಗೆ ಈ ಕಾಯ್ದೆಯಿಂದ ಯಾವುದೇ ತೊಂದರೆಯಿಲ್ಲ ಎಂದರು.

ಬಾದಾಮಿ ನವಗೃಹಮಠದ ಶಿವಪೂಜಾ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಮಾಜಿ ಬಿಜೆಪಿ ಅಧ್ಯಕ್ಷ ಶಾಂತಗೌಡ ಪಾಟೀಲ ಹಾಜರಿದ್ದರು. ಇದೇ ಸಂದರ್ಭದಲ್ಲಿ ಪೌರತ್ವ ಕಾಯ್ದೆ ಬೆಂಬಲಿಸಿ ತಹಶೀಲ್ದಾರ್‌ ಸುಹಾಸ ಇಂಗಳೆ ಅವರಿಗೆ ಮನವಿ ಸಲ್ಲಿಸಿದರು.

ಗಮನ ಸೆಳೆದ ತಿರಂಗ ಧ್ವಜ ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ಪೌರತ್ವ ಕಾಯ್ದೆ ಬೆಂಬಲಿಸಿ ಮೆರವಣಿಗೆ ಪಟ್ಟಣದ ಅಕ್ಕಮಹಾದೇವಿ ಕಲ್ಯಾಣ ಮಂಟಪದಿಂದ ನಡೆದ ಜನಜಾಗೃತಿ ಜಾಥಾದಲ್ಲಿ 200 ಮೀಟರ್‌ ಉದ್ದದ ತಿರಂಗಾ ಧ್ವಜದ ಮೆರವಣಿಗೆ ನಡೆಯಿತು.

ಇಷ್ಟಲಿಂಗ್‌ ನರೇಗಲ್‌, ಶಹಜಿ ಪವಾರ, ಮಹಾಂತೇಶ ವಡ್ಡರ, ಕುಮಾರ ಗಾಣಿಗೇರ, ರವಿ ಪೂಜಾರ, ಸೋಮಣ್ಣ ಬಿಂಗೇರಿ, ಆನಂದ ಕಾಟ್ವಾ, ಮಹೇಶ ಬರಗಿ, ಪ್ರವೀಣ ಹಿರೆಯಂಡಿಗೇರಿ, ಪ್ರವೀಣ ಹೋಳಿ, ರಾಘು ದಯಾಪುಲೆ, ಕುಮಾರ ಪವಾಡಶೆಟ್ಟಿ, ವಿಜಯ ಲಮಾಣಿ, ಮುದಕನಗೌಡ್ರ, ಬಸವರಾಜ ಭೂತಾಳಿ, ಹೊನ್ನಯ್ಯ ಹಿರೇಮಠ, ನಾಗರಾಜ ಕಾಚೆಟ್ಟಿ, ಬಸವರಾಜ ತೀರ್ಥಪ್ಪನವರ, ವಸಂತಕುಮಾರ ದೊಡ್ಡಪತ್ತಾರ, ಜೆ.ಆರ್‌.ಜೋಶಿ, ಪುಲಿಕೇಶಿ ಸೂಳಿಕೇರಿ ಸೇರಿದಂತೆ ಇತರರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next