ತೀವ್ರ ಅಸಹನೆಗೆ ತುತ್ತಾಗಿದ್ದರು. ತಮ್ಮ ಗ್ರಾಮದಲ್ಲಿ ಕಾಣಿಸಿಕೊಂಡಿರುವ ಕಸ, ಕೊಳಚೆ, ಕೊಚ್ಚೆಗಳಿಂದ ತಮ್ಮಲ್ಲಿಗೆ ಭೇಟಿ ನೀಡುವ ಜನರೆದುರು ತಮ್ಮ ಊರಿನ ಗೌರವ ನಷ್ಟವಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಅವರೇ ನಾವು ನಮ್ಮೂರು ಎಂಬ ಸಂಘಟನೆಯಡಿ ಸ್ವತ್ಛತೆಯ ಆಂದೋಲನವನ್ನು ಆರಂಭಿಸಿ ಗಮನ ಸೆಳೆದಿದ್ದಾರೆ.
Advertisement
ಅಂತಾರಾಷ್ಟ್ರೀಯವಾಗಿ ಹೆಸರುಗಳಿಸಿರುವ ಹೆಗ್ಗೊàಡನ್ನು ಕಣ್ತುಂಬಿಕೊಳ್ಳಲು ಅಪರಿಚಿತರು ಯಾರಾದರೂ ಬಂದರೆ ಬಹುಶಃ ಇಲ್ಲಿನ ವಾತಾವರಣವನ್ನು ನೋಡಿ ನಾವು ಕೇಳಿದ ಹೆಗ್ಗೊàಡು ಇದೇ ಇರಬಹುದೇ ಎಂದು ಒಂದು ಕ್ಷಣ ದಿಗಿಲುಗೊಳ್ಳಬಹುದು. ಗಬ್ಬುನಾರುತ್ತಿರುವ ಹೆಗ್ಗೊಡು ಬಸ್ ನಿಲ್ದಾಣ, ಸ್ವತ್ಛತೆಯನ್ನೇ ಕಾಣದ ಚರಂಡಿಗಳು, ರಸ್ತೆಯ ಇಕ್ಕೆಲಗಳಲ್ಲೂ ಬೆಳೆದು ನಿಂತ ಲಂಡನ್ ಗಿಡಗಳು, ಕಂಡಕಂಡಲ್ಲಿ ಅಗೆದುಗಿದು ಬಿಸಾಡಿದ ಪ್ಲಾಸ್ಟಿಕ್ ಪೊಟ್ಟಣಗಳು, ಹೆಂಡದ ಬಾಟಲಿಗಳು, ಹೊಂಡ ಗುಂಡಿಗಳಿಂದ ತುಂಬಿಕೊಂಡಿರುವ ಹೆಗ್ಗೊಡಿನ ಮುಖ್ಯ ರಸ್ತೆ ಚಿತ್ರಣಗಳನ್ನು ಹೆಗ್ಗೊಡು ಗ್ರಾಪಂ ಸುತ್ತಮುತ್ತಲೇ ಕಾಣಬಹುದು ಎಂದು ಕರಪತ್ರದ ಮೂಲಕ ಜನರನ್ನು ಜಾಗೃತಗೊಳಿಸುವ ಪ್ರಯತ್ನ ನಡೆಯಿತು.
ಸುಮಾರು 250 ಜನರು ವಿವಿಧ ತಂಡಗಳಲ್ಲಿ ಕಾರ್ಯ ನಡೆಸಿದರು. ಕಾರ್ಯಕ್ರಮದ ಮುಂದಿನ ಭಾಗವಾಗಿ ಹೆಗ್ಗೊàಡು ಕೇಂದ್ರದ ನಾಲ್ಕು ದಿಕ್ಕುಗಳ ರಸ್ತೆಗಳ ಆಜುಬಾಜಲ್ಲಿ ಸಾಲು ಗಿಡಗಳನ್ನು ನೆಡಲು ಯೋಜಿಸಲಾಗಿದೆ. ಈಗ ಸುರಿಯುತ್ತಿರುವ ಮಳೆ ಕಡಿಮೆ ಆದ ನಂತರ ಜಾನುವಾರುಗಳಿಂದ ರಕ್ಷಣೆ ವ್ಯವಸ್ಥೆ ಮಾಡಿಯೇ ಗಿಡಗಳನ್ನು ನೆಡುತ್ತೇವೆ. ಈ ಆಂದೋಲನ ಮುಕ್ತಾಯವಾಗುವುದಿಲ್ಲ. ಇದರ ಜೊತೆಗೆ ಪಶ್ಚಿಮ ಘಟ್ಟಗಳತ್ತ ದಿಟ್ಟ ಹೆಜ್ಜೆ, ದ್ಯಾವಾಸ ಪುನರುಜ್ಜೀವನ ಮಾದರಿಯ ಸಂಘಟನೆಗಳ ಮೂಲಕವೂ ಪರಿಸರದ ಸಂರಕ್ಷಣೆಯ ಹೊಣೆಯನ್ನು ಸರ್ಕಾರಿ ವ್ಯವಸ್ಥೆಯ
ಮೊರೆ ಹೋಗದೆ ನಡೆಸಲು ತೀರ್ಮಾನಿಸಿದ್ದೇವೆ ಎಂದು ಸಂಘಟನೆಯೊಳಗಿರುವ ನೀನಾಸಂನ ಶ್ರೀಪಾದ್ ಭಾಗವತ್ ತಿಳಿಸಿದರು.
Related Articles
Advertisement