Advertisement
ಮೈಸೂರು ರಸ್ತೆ ಗಾಳಿ ಆಂಜನೇಯ ದೇವಸ್ಥಾನದ ಸಮೀಪದ ನಿವಾಸಿಗಳು ರಾಜಕಾಲುವೆ ಮತ್ತು ಒಳಚರಂಡಿ ನೀರು ಮನೆಗಳಿಗೆ ನುಗ್ಗುತ್ತಿರುವುದರ ಬಗ್ಗೆ ಖುದ್ದು ಮೇಯರ್ ಅವರನ್ನು ಕರೆದುಕೊಂಡು ಹೋಗಿ ತೋರಿಸಿದ ಪ್ರಸಂಗವೂ ನಡೆಯಿತು. ಗಾಳಿ ಆಂಜನೇಯಸ್ವಾಮಿ ದೇವಸ್ಥಾನದ ಸುತ್ತಮುತ್ತಲಿನ ಕಳಪೆ ಕಾಮಗಾರಿಯನ್ನು ಪರಿಶೀಲಿಸಿ ಮೇಯರ್ ಗುತ್ತಿಗೆದಾರರನ್ನು ಕೂಡಲೇ ಬದಲಾಯಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
Related Articles
Advertisement
ಗುತ್ತಿಗೆದಾರರನ್ನು ಬದಲಿಸಿ: ಗಾಳಿ ಆಂಜನೇಯಸ್ವಾಮಿ ರಸ್ತೆಯ ಪಾದಚಾರಿ ಮಾರ್ಗದ ಚರಂಡಿ ಕಾಮಗಾರಿ ಬಗ್ಗೆ ಮೇಯರ್‌ಗೆ ದೂರಿತ್ತ ಸಾರ್ವಜನಿಕರು, ಚರಂಡಿ ಮೇಲೆ ಅಳವಡಿಸಿರುವ ಸ್ಲಾಬ್‌ಗಳು ಕಳೆಪೆಯಿಂದ ಕೂಡಿದೆ ಎಂದರು. ಅಲ್ಲಲ್ಲಿ ಸ್ಲಾಬ್‌ಗಳನ್ನು ಅಳವಡಿಸದೇ ಇರವುದನ್ನು ಕಂಡ ಮೇಯರ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು ಈಗಿರುವ ಗುತ್ತಿಗೆದಾರರನ್ನು ಬದಲಿಸಿ ಬೇರೆಯವರಿಗೆ ಗುತ್ತಿಗೆ ನೀಡಿ ಎಂದು ತಾಕೀತು ಮಾಡಿದರು.
ಕಲ್ಲು ಬಂಡೆಯಿಂದ ಕಾಮಗಾರಿ ವಿಳಂಬ: ನಗರದ ಹೊಸಕೆರೆಹಳ್ಳಿಯ ಮುತ್ತುರಾಜ ಜಂಕ್ಷನ್ ಬಳಿ ನಿರ್ಮಾಣವಾಗುತ್ತಿರುವ ಕೇಳಸೇತುವೆ ಕಾಮಗಾರಿ ವಿಳಂಬವಾಗುತ್ತಿದ್ದ ಹಿನ್ನೆಲೆ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು, ಔಟರ್‌ರಿಂಗ್ ರಸ್ತೆಯಲ್ಲಾಗುತ್ತಿದ್ದ ಸಂಚಾರ ದಟ್ಟಣೆ ನಿವಾರಣೆ ಮಾಡುವ ಉದ್ದೇಶದಿಂದ ಮುತ್ತುರಾಜ ಜಂಕ್ಷನ್ ಬಳಿ 18.72 ಕೋಟಿ ರೂ. ವೆಚ್ಚದಲ್ಲಿ ಕೆಳ ಸೇತುವೆ ನಿರ್ಮಾಣ ಮಾಡಲು 2015 ಸೆಪ್ಟೆಂಬರ್‌ನಲ್ಲಿ ಕಾಮಗಾರಿಗೆ ಚಾಲನೆ ನೀಡಲಾಯಿತು. ಆದರೆ, ಆ ಜಾಗದಲ್ಲಿ ಕಲ್ಲುಬಂಡೆಯಿದ್ದ ಪರಿಣಾಮ ತೆರವು ಮಾಡುವುದು ತಡವಾಯಿತು ಜುಲೈ ತಿಂಗಳ ಅಂತ್ಯದೊಳಗಾಗಿ ಕಾಮಗಾರಿ ಪೂರ್ಣಗೊಳ್ಳಿದೆ ಎಂದು ತಿಳಿಸಿದರು.