ನಿರ್ವಹಿಸುವ ಪೌರ ಕಾರ್ಮಿಕರನ್ನು ಗುರುತಿಸಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಲಾಗುವುದು ಎಂದು ಶಾಸಕ ಕೆ.ರಘುಪತಿ ಭಟ್ ಹೇಳಿದರು.
Advertisement
ನಗರಸಭೆಯ ವತಿಯಿಂದ ಸೋಮವಾರ ಅಜ್ಜರಕಾಡು ಪುರಭವನ ದಲ್ಲಿ ನಡೆದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅವರನ್ನು ಗುರುತಿಸುವ ಕೆಲಸ ಆಗ ಬೇಕು. 2014ಕ್ಕೆ ಪ್ರಧಾನಿ ನರೇಂದ್ರ ಮೋದಿ
ಯವರು ಸ್ವತ್ಛ ಭಾರತ ಯೋಜನೆ ಯನ್ನು ಜಾರಿಗೆ ತಂದಿದ್ದು, ಅನಂತರ ಸಾಕಷ್ಟು ಬದಲಾವಣೆಗಳಾಗಿವೆ. ಪರಿಸರ, ನಗರ ಸ್ವತ್ಛವಾಗಿರಬೇಕು ಎಂಬ ಕಲ್ಪನೆ ಪ್ರತೀ ಜನರಲ್ಲಿ ಮೂಡಿದಾಗ ಮಾತ್ರ ಸ್ವತ್ಛಭಾರತದ ಕಲ್ಪನೆ ಸಾಕಾರಗೊಳ್ಳಲು ಸಾಧ್ಯ ಎಂದರು. ಇದೇ ಸಂದರ್ಭದಲ್ಲಿ ಅವರು ಡಾ| ವಿ.ಎಸ್.ಆಚಾರ್ಯ ಅವರ ಸ್ವತ್ಛತೆ ಕಾಳಜಿಯನ್ನು ನೆನಪಿಸಿಕೊಂಡರು.
Related Articles
ಪ್ರಸ್ತುತ 700 ಮಂದಿಗೆ ಓರ್ವ ಪೌರ ಕಾರ್ಮಿಕ ಎಂಬುವುದು ಅವೈಜ್ಞಾನಿಕ ಕಲ್ಪನೆಯಾಗಿದೆ. ಸ್ಥಳೀಯ ನಾಗರಿಕರ ಜತೆಗೆ ಪ್ರವಾಸಿಗರಿಂದ ತುಂಬಿ ತುಳುಕು
ತ್ತಿರುವ ಉಡುಪಿಯಂತಹ ನಗರದಲ್ಲಿ ಜನಸಂಖ್ಯಾ ಆಧಾರದಲ್ಲಿ ಪೌರಕಾರ್ಮಿ ಕರ ನೇಮಕಾತಿ ಮಾಡಿರುವುದು ಸಮಂಜಸವಲ್ಲ. ನಿವೃತ್ತಿ, ಅರೆಕಾಲಿಕ ಮರಣ ಮುಂತಾದ ಕಾರಣಗಳಿಂದ ಪೌರ ಕಾರ್ಮಿಕರ ಕೊರತೆ ಸಮಸ್ಯೆ ಉಂಟಾಗಿದೆ. ಪೌರ ಕಾರ್ಮಿಕರ ನೇಮಕಾತಿಯ ನಿಯಮಗಳಲ್ಲಿ ಕೆಲವೊಂದು ತೊಡಕಿರುವುದರಿಂದ ನಗರದಲ್ಲಿ 60 ಪೌರ ಕಾರ್ಮಿಕರ ಕೊರತೆ ಉಂಟಾಗಿದೆ. ಸದ್ಯ ಉಡುಪಿಯಲ್ಲಿ 180 ಪೌರ ಕಾರ್ಮಿಕರಿದ್ದು, ಬಾಕಿ ಕೊರತೆ ಇರುವ ಪೌರ ಕಾರ್ಮಿಕರ ನೇಮಕ ಮಾಡುವ ಕುರಿತು ಜಿÇÉಾಧಿಕಾರಿ ಭರವಸೆ ನೀಡಿರುವುದಾಗಿ ತಿಳಿಸಿದರು.
Advertisement
ಈ ಸಂದರ್ಭ 8 ಪೌರಕಾರ್ಮಿಕರನ್ನು ಸಮ್ಮಾನಿಸಲಾಯಿತು.
ಸ್ಪಷ್ಟ ನಿಯಮ ಅಗತ್ಯನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಕರುಣಾಕರ ಪ್ರಸ್ತಾವನೆಗೈದು, ಉಡುಪಿ ನಗರಸಭೆಗೆ ಸುಮಾರು 60 ಮಂದಿಯಷ್ಟು ಪೌರಕಾರ್ಮಿಕರ ಕೊರತೆ ಕಾಡುತ್ತಿದೆ. ಅವರ ನೇಮಕಾತಿಗೆ ಸ್ಪಷ್ಟ ನಿಯಮ ರೂಪಿಸಬೇಕು. ಏಕಕಾಲದಲ್ಲಿ ನಗರದ ಸ್ವತ್ಛತೆ ಮಾಡಲಾಗುತ್ತಿಲ್ಲ. ಇದರಿಂದ
ಪಾಲಿಕೆಗೆ ನೆಮ್ಮದಿ ಇಲ್ಲದಂತಾಗಿದೆ. ಪ್ರಸ್ತುತ ಇರುವ ಪೌರಕಾರ್ಮಿಕರು ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ನಗರಸಭೆಗೆ ಸ್ವತ್ಛತೆಯಲ್ಲಿ ಹಲವಾರು ಬಾರಿ ಪ್ರಶಸ್ತಿ ಬರಲು ಕಾರಣವಾಗಿದೆ ಎಂದರು. ಪೌರಾಯುಕ್ತ ಆನಂದ್ ಕಲ್ಲೋಳಿಕರ್, ಪರಿಸರ ಅಭಿಯಂತರ ರಾಘವೇಂದ್ರ, ಸಹಾಯಕ ಕಾರ್ಯಪಾಲ ಅಭಿಯಂತರ ಗಣೇಶ್, ಕೆಎಂಸಿಯ ವೈದ್ಯ ಡಾ| ಶ್ಯಾಮಸುಂದರ, ಉದ್ಯಮಿ ಮನೋಹರ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮುನ್ನ ಅ.2ರವರೆಗೆ ನಡೆಯಲಿರುವ ಸ್ವತ್ಛತಾ ಸೇವಾ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಪೌರಕಾರ್ಮಿಕರ ಕೊರತೆ
ಪೌರಕಾರ್ಮಿಕರ ಕೊರತೆಯಿಂದಾಗಿ ಉಡುಪಿ ನಗರಸಭೆವ್ಯಾಪ್ತಿಯಲ್ಲಿ ಸ್ವತ್ಛತೆ ಇಲ್ಲದಂತಾಗಿದೆ. ಈ ಕೊರತೆ ನಿವಾರಿಸಿ ಪೌರಕಾರ್ಮಿಕರ ನೇಮಕಾತಿಗೆ ನಗರಸಭೆ ಕ್ರಮಕೈಗೊಳ್ಳಬೇಕು. ಪೌರ ಕಾರ್ಮಿಕರಿಗೆ ವಿಶೇಷವಾದ ಗೌರವ ಇದ್ದು, ಕೆಲಸದಲ್ಲಿ ಕೀಳರಿಮೆ ಇರಬಾರದು. ನೀವು ಮಾಡುವ ಕೆಲಸಕ್ಕೆ ಗೌರವ ನೀಡಿದರೆ ಕೆಲಸ ನಿಮಗೆ ಗೌರವ ನೀಡುತ್ತದೆ ಎಂದು ರಘುಪತಿ ಭಟ್ ತಿಳಿಸಿದರು.