Advertisement

ರಜೆ ಜಗಳ: ಸಿಐಎಸ್‌ಎಫ್ ಪೇದೆಯಿಂದ ನಾಲ್ವರು ಸಹೋದ್ಯೋಗಿಗಳ ಹತ್ಯೆ

03:45 AM Jan 13, 2017 | Team Udayavani |

ಔರಂಗಾಬಾದ್‌: ರಜೆ ವಿಷಯದಲ್ಲಿ ಏರ್ಪಟ್ಟ ವಿವಾದದಿಂದ ಸಿಟ್ಟಿಗೆದ್ದ ಸಿಐಎಸ್‌ಎಫ್ (ಕೇಂದ್ರೀಯ ಕೈಗಾರಿಕಾ ರಕ್ಷಣಾ ಪಡೆ) ಪೇದೆಯೊಬ್ಬರು ತಮ್ಮ ನಾಲ್ವರು ಸಹೋದ್ಯೋಗಿಗಳನ್ನು ಗುಂಡಿಟ್ಟು ಹತ್ಯೆಗೈದಿದ್ದಾರೆ. ಬಿಹಾರದ ಔರಂಗಾಬಾದ್‌ ಜಿಲ್ಲೆಯಲ್ಲಿರುವ ನವಿನಗರ್‌ ವಿದ್ಯುತ್‌ ಉತ್ಪಾದನೆ ಕಂಪನಿ ಆವರಣದಲ್ಲಿ ಗುರುವಾರ  ಈ ಸಾಮೂಹಿಕ ಹತ್ಯೆ ನಡೆದಿದೆ. 

Advertisement

ಕೊಲೆ ಆರೋಪಿ, ನಿರ್ಮಾಣ ಹಂತದಲ್ಲಿದ್ದ ಉಷ್ಣ ವಿದ್ಯುತ್‌ ಸ್ಥಾವರದ ರಕ್ಷಣೆ ಕೆಲಸಕ್ಕೆ ನಿಯೋಜಿಸಲಾಗಿದ್ದ ಉತ್ತರ ಪ್ರದೇಶದ ಅಲೀಘಡ ಮೂಲದ ಬಲವೀರ್‌ನನ್ನು ಬಂಧಿಸಲಾಗಿದೆ. ಯೋಗ ತರಬೇತಿ ಪಡೆದು ವಾಪಸ್ಸಾಗಿದ್ದ ಬಲವೀರ್‌ ರಜೆ ವಿಷಯದಲ್ಲಿ ಸಹೋದ್ಯೋಗಿಗಳೊಂದಿಗೆ ಮುನಿಸಿಕೊಂಡಿದ್ದರು. ಇದೇ ಸಿಟ್ಟಿನಿಂದ ತನ್ನ ಸರ್ವೀಸ್‌ ರೈಫ‌ಲ್‌ನಿಂದ ಬಚ್ಚಾ ಶರ್ಮಾ, ಎನ್‌ ಮಿಶ್ರಾ, ಅರವಿಂದ ಕುಮಾರ್‌ ಹಾಗೂ ಜಿ.ಎಸ್‌.ರಾಮ್‌ ಎಂಬುವರ ಮೇಲೆ ಗುಂಡು ಹಾರಿಸಿದರು.

ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇನ್ನಿಬ್ಬರು ಆಸ್ಪತ್ರೆಗೆ ಒಯ್ಯುವಾಗ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಸತ್ಯಪ್ರಕಾಶ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next