Advertisement

ಸಿಸ್ಕೋ-ಶರಣಬಸವ ವಿವಿ ಒಡಂಬಡಿಕ

11:01 AM Aug 03, 2018 | Team Udayavani |

ಕಲಬುರಗಿ: ಜಗತ್ತಿನ ನೆಟವರ್ಕಿಂಗ್‌ ಸಲ್ಯೂಶನ್‌ ಮತ್ತು ಮ್ಯಾನೆಜಮೆಂಟ್‌ ಕ್ಷೇತ್ರದ ದಿಗ್ಗಜ ಸಂಸ್ಥೆ ಸಿಸ್ಕೋ ಶರಣಬಸವ ವಿಶ್ವವಿದ್ಯಾಲಯದಲ್ಲಿ ತನ್ನ ಸೆಂಟರ್‌ ಫಾರ್‌ ಎಕ್ಸ್‌ಲೆನ್ಸ್‌ ಕೇಂದ್ರವನ್ನು ತೆರೆದಿದೆ. ಇದು ಐಟಿ ಕ್ಷೇತ್ರ, ಸೈಬರ್‌ ಭದ್ರತೆ, ಐಒಟಿ ಮತ್ತು ಸಾಮಾನ್ಯ ಭದ್ರತೆಗಳ ನೆಟವರ್ಕಿಂಗ್‌ ಕ್ಷೇತ್ರದಲ್ಲಿ ಅಲ್ಪಾವಧಿಯ ಕೋರ್ಸ್‌ಗಳನ್ನು ಪ್ರಾರಂಭಿಸಲಿದೆ.

Advertisement

ಈ ಕುರಿತು ಸಿಸ್ಕೋ ಸಂಸ್ಥೆ ಜೊತೆ ಒಡಂಬಡಿಕೆಗೆ ಸಹಿ ಮಾಡಿರುವ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ| ಶರಣಬಸವಪ್ಪ ಅಪ್ಪ ಅವರು, ಶರಣಬಸವ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಈ ಕೇಂದ್ರ ಸ್ಥಾಪನೆಯಿಂದ ಹೊಸ ಸೌಲಭ್ಯವೊಂದು ದೊರೆತಂತಾಗಿ ಜಗತ್ತಿನ ಪ್ರಮುಖ ಐಟಿ ಕಂಪನಿಗಳಲ್ಲಿ ಉದ್ಯೋಗ ಖಾತರಿ ಪಡಿಸುವ ಅವಕಾಶ ದೊರಕಲಿದೆ ಎಂದು ತಿಳಿಸಿದ್ದಾರೆ.

ವಿವಿ ಕುಲಪತಿ ಡಾ| ನಿರಂಜನ್‌ ನಿಷ್ಟಿ, ಕುಲಸಚಿವ ಡಾ| ಅನೀಲಕುಮಾರ ಬಿಡವೆ ನಗರದಲ್ಲಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ಸಿಸ್ಕೋ ಸಂಸ್ಥೆ ಪ್ರಾರಂಭಿಸಲು ಯೋಜಿಸಿರುವ ಸೆಂಟರ್‌ ಫಾರ್‌ ಎಕ್ಸಲೆನ್ಸ್‌ ಕೇಂದ್ರಕ್ಕೆ ಆಯ್ಕೆಯಾಗಿರುವ ಶರಣಬಸವ ವಿಶ್ವವಿದ್ಯಾಲಯವು ಉತ್ತರ ಕರ್ನಾಟಕದ ಪ್ರಥಮ ವಿಶ್ವವಿದ್ಯಾಲಯವಾಗಿದೆ ಎಂದು ಹೇಳಿದ್ದಾರೆ.
 
ವಿಶ್ವವಿದ್ಯಾಲಯದಲ್ಲಿ ಈ ಕೇಂದ್ರ ಆರಂಭವಾಗುವುದರ ಮುಖ್ಯ ಪ್ರಯೋಜನವೆಂದರೆ ವಿದ್ಯಾರ್ಥಿಗಳು ತಮ್ಮ ಕೋರ್ಸ್‌ ಅವಧಿಯಲ್ಲಿಯೇ ಒಂದು ತಿಂಗಳಿನಿಂದ ಆರು ತಿಂಗಳವರೆಗಿನ ಅಲ್ಪಾವಧಿಯ ಶಿಕ್ಷಣವನ್ನು ಉಚಿತವಾಗಿ ಪೂರೈಸಬಹುದು ಮತ್ತು ಸಿಸ್ಕೋ ಸಂಸ್ಥೆ ನಡೆಸುವ ಪರೀಕ್ಷೆಗಳಲ್ಲಿ ಪಾಲ್ಗೊಳ್ಳಬಹುದು ಎಂದು ವಿವರಿಸಿದ್ದಾರೆ.

ಸಾಮಾನ್ಯವಾಗಿ ಈ ಕೋರ್ಸಗಳಲ್ಲಿ ಇಂಜಿನಿಯರಿಂಗ್‌ ವಿದ್ಯಾರ್ಥಿಗಳು ಐಟಿ, ಗಣಕ ವಿಜ್ಞಾನ, ಎಲೆಕ್ಟ್ರಾನಿಕ್ಸ್‌, ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯುನಿಕೇಷನ್‌, ಎಲೆಕ್ಟ್ರಿಕಲ್ಸ್‌ ವಿದ್ಯಾರ್ಥಿಗಳು ಖಾಸಗಿ ಸಂಸ್ಥೆಗಳಲ್ಲಿ 30 ಸಾವಿರದಿಂದ 60 ಸಾವಿರ ರೂ.ಗಳ ವರೆಗೆ ಶುಲ್ಕ ಪಾವತಿಸಿ ಅಲ್ಪಾವ ಧಿ ಕೋರ್ಸ್‌ಗಳಿಗೆ ಸೇರಿ ಮತ್ತೆ ಪರೀಕ್ಷಾ ಶುಲ್ಕ 20 ಸಾವಿರ ರೂ. ಪಾವತಿಸಿ ಸಿಸ್ಕೋ ನಡೆಸುವ ಪರೀಕ್ಷೆಗಳಲ್ಲಿ  ಗವಹಿಸುತ್ತಾರೆ. ಆದರೆ ಶರಣಬಸವ ವಿಶ್ವವಿದ್ಯಾಲಯದಲ್ಲಿ ಈ ಕೇಂದ್ರ ಆರಂಭಿಸುವುದರಿಂದ ಈ ಕೋರ್ಸಗಳು ಉಚಿತವಾಗಿ ದೊರಕಲಿವೆ ಎಂದು ತಿಳಿಸಿದ್ದಾರೆ.

ಸಿಸ್ಕೋ ಸಂಸ್ಥೆ ವಿದ್ಯಾರ್ಥಿಗಳಿಂದ 10 ಸಾವಿರ ರೂ.ಗಳನ್ನು ಕೋರ್ಸ್‌ ಶುಲ್ಕ ಪಡೆಯಲು ಸಲಹೆ ನೀಡಿದ್ದರೂ ಶರಣಬಸವ ವಿಶ್ವವಿದ್ಯಾಲಯದ ಕುಲಾಪತಿ ಪೂಜ್ಯ ಡಾ| ಶರಣಬಸವಪ್ಪ ಅಪ್ಪ ಕೋರ್ಸಿನ ಮತ್ತು ಪರೀಕ್ಷಾ ವೆಚ್ಚವನ್ನು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತೆಗೆದುಕೊಳ್ಳದಿರಲು ನಿರ್ಧರಿಸಿದ್ದಾರೆ.

Advertisement

ಅಲ್ಪಾವಧಿಯ ಕೋರ್ಸ್‌ಗಳು ವಿದ್ಯಾರ್ಥಿಗಳಿಗೆ ಪ್ರಾರಂಭಿಕ ಹಂತದಿಂದ ತಜ್ಞ ಮಟ್ಟದ ವರೆಗೆ ಉತ್ತಮ ತರಬೇತಿ ನೀಡುತ್ತವೆ. ಸಿಸ್ಕೋ ರೂಟಿಂಗ್‌ ಮತ್ತು ಸ್ವಿಚ್‌ ನಾಲೇಜ್‌ ಕೌಶಲ್ಯವು ವೃತ್ತಿಪರರನ್ನು ನಿಯೋಜಿಸಲು ಮತ್ತು ಡಿಜಿಟಲ್‌ ರೆಡಿ ನೆಟವರ್ಕ್‌ ವಿನ್ಯಾಸಗೊಳಿಸಲು ಅದರ ಜೊತೆಗೆ ಈ ಕೋರ್ಸ್‌ ಇಂಜಿನಿಯರ್‌ ಆಗಿ ವೃತ್ತಿಜೀವನ ಆಯ್ದು ಕೊಳ್ಳುವವರಿಗೆ ನಿರಂತರವಾಗಿ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವಂತೆ ರೂಪಿಸಲಾಗಿದೆ ಎಂದು ಡಾ| ಬಿಡವೆ ತಿಳಿಸಿದ್ದಾರೆ. 

ಸೆಂಟರ್‌ ಫಾರ್‌ ಎಕ್ಸಲೆನ್ಸ್‌ ಕೇಂದ್ರದಲ್ಲಿ ನೀಡಲಾಗುವ ಎಲ್ಲ ಕೋರ್ಸ್‌ಗಳು ಪ್ರಾಯೋಗಿಕ, ಸಂಬಂಧಿತ ಮತ್ತು ಉದ್ಯೋಗ ಆಧಾರಿತ ಕೋರ್ಸ್‌ಗಳಾಗಿವೆ. ಪಠ್ಯಕ್ರಮವು ವೃತ್ತಿಪರರ ಬೇಡಿಕೆಯನ್ನು ಗಮನದಲ್ಲಿ ಇಟ್ಟುಕೊಂಡು ನಿರ್ದಿಷ್ಟ ಕಾರ್ಯಗಳೊಂದಿಗೆ ನಿಕಟವಾಗಿ ಹೊಂದಿಕೊಂಡಂತೆ ಇವೆ ಎಂದು ಡಾ| ನಿಷ್ಟಿ ತಿಳಿಸಿದ್ದಾರೆ. 

ವಿಶ್ವವಿದ್ಯಾಲಯವು ಪದವಿ ಹಂತದಲ್ಲಿ ಸೆಂಟರ್‌ ಫಾರ್‌ ಎಕ್ಸಲೆನ್ಸ್‌ ಕೇಂದ್ರದ ಪಠ್ಯಕ್ರಮದ ಭಾಗವಾಗಿ ಅಲ್ಪಾವ ಧಿಯ ಕೋರ್ಸ್‌ಗಳನ್ನು ಪರಿಚಯಿಸಲಿದೆ. ಇತ್ತೀಚೆಯ ಹಾರ್ಡವೇರ್‌ ಒಳಗೊಂಡಿರುವ ಪೂರ್ಣ ಪ್ರಮಾಣದ ಪ್ರಯೋಗಾಲಯವನ್ನು ಸಿಸ್ಕೋ ಸೆಂಟರ್‌ ಫಾರ್‌ ಎಕ್ಸಲೆನ್ಸ್‌ ಕೇಂದ್ರದಲ್ಲಿ ಸ್ಥಾಪಿಸಿದೆ. ಪ್ರಯೋಗಾಲಯದಲ್ಲಿ ಅಳವಡಿಸಿರುವ ಗ್ಯಾಜೆಟಗಳ ಒಟ್ಟು ವೆಚ್ಚ 16.50 ಲಕ್ಷ ರೂ., ಒಟ್ಟು ವೆಚ್ಚದಲ್ಲಿ ಶೇ. 50 ರಷ್ಟು ಮೊತ್ತವನ್ನು ವಿಶ್ವವಿದ್ಯಾಲಯವು ಉಳಿದ ಮೊತ್ತವನ್ನು ಸಿಸ್ಕೋ ಸಂಸ್ಥೆಯು ತನ್ನ ಕಾರ್ಪೋರೆಟ್‌ ಸಾಮಾಜಿಕ ಜವಾಬ್ದಾರಿ ಅಡಿಯಲ್ಲಿ ಹೂಡಿಕೆ ಮಾಡಿದೆ ಎಂದು ಡಾ| ಬಿಡವೆ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ತಮಿಳುನಾಡಿನ ಕೊಯಿಮತ್ತೂರಿನಲ್ಲಿ ಸಿಸ್ಕೋ ಸ್ಥಾಪಿಸಿರುವ ಸೆಂಟರ್‌ ಫಾರ್‌ ಎಕ್ಸಲೆನ್ಸ್‌ ಕೇಂದ್ರದಲ್ಲಿ ವಿವಿಯ ಇಬ್ಬರು ಪ್ರಾಧ್ಯಾಪಕರಿಗೆ 15 ದಿನಗಳ ತರಬೇತಿ ನೀಡಿದೆ. ಅದರಲ್ಲಿ ಗಣಕಯಂತ್ರ ವಿಭಾಗದ ಪ್ರೊ| ಗಜೇಂದ್ರನ್‌ ಮಲಶೆಟ್ಟಿ , ಪ್ರೊ| ಭೀಮರಾಯ ಪಾಟೀಲ ಸೇರಿದ್ದಾರೆ. ಈ ಇಬ್ಬರು ಪ್ರಾಧ್ಯಾಪಕರು ತಾವು ತರಬೇತಿ ಪಡೆದ ನಂತರ ಕಲಬುರಗಿಯ ಶರಣಬಸವ ವಿಶ್ವವಿದ್ಯಾಲಯದ ಸೆಂಟರ್‌ ಫಾರ್‌ ಎಕ್ಸಲೆನ್ಸ್‌ ಕೇಂದ್ರದ ಮೂಲಕ ಇಂಜಿನಿಯರಿಂಗ್‌ನ
ಬೇರೆ ಬೇರೆ ವಿಭಾಗದ 15 ಬೋಧಕ ಸದಸ್ಯರಿಗೆ ತರಬೇತಿ ನೀಡಿದ್ದಾರೆ.

ಸೆಂಟರ್‌ ಫಾರ್‌ ಎಕ್ಸಲೆನ್ಸ್‌ ಕೇಂದ್ರವು ಐಟಿ ವಿಭಾಗದಲ್ಲಿ ಪದವಿ ಹಂತದ ಇಂಜಿನಿಯರಿಂಗ್‌ ವಿಭಾಗದ ಮತ್ತು ಇಂಜಿನಿಯರಿಂಗ್‌ ವಿಭಾಗ ಇಲ್ಲದ ಅಲ್ಪಾವಧಿಯ ಕೋರ್ಸಗಳನ್ನು ಪರಿಚಯಿಸುತ್ತಿದ್ದು ಸಿಸಿಎನ್‌ಎ ರೂಟಿಂಗ್‌ ಮತ್ತು ಸ್ವಿಚಿಂಗ್‌, ಸಿಸ್ಕೋ ಸೆಕ್ಯೂರಿಟಿ, ಸಿಸ್ಕೋ ಸೆ„ಬರ್‌ ಸೆಕ್ಯೂರಿಟಿ, ಸಿಸಿಎನ್‌ಬಿ, ಐಒಟಿ ಕೋರ್ಸ್‌ಗಳನ್ನು ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಆರಂಭಿಸಲಾಗಿದೆ. ಕೋರ್ಸ್‌ನ ಕೊನೆಯಲ್ಲಿ ವಿದ್ಯಾರ್ಥಿಗಳು ಸಿಸ್ಕೋ ನಡೆಸುವ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ. ನಂತರ ಸಿಸ್ಕೋ ಅವರಿಗೆ ಪ್ರಮಾಣ ಪತ್ರ ಒದಗಿಸುತ್ತದೆ. ಸದ್ಯ ಈ ಕೋರ್ಸ್‌ಗಳು ಬೃಹತ್‌ ನಗರಗಳಾದ ಬೆಂಗಳೂರು, ಹೈದ್ರಾರಾಬಾದ್‌, ಮುಂಬೈ ಮತ್ತು ಇತರೆ ಕಾಸ್ಮೋಪಾಲಿಟಿನ್‌ ನಗರಗಳಲ್ಲಿ ಮಾತ್ರ ಲಭ್ಯವಿವೆ ಎಂದು ವಿವರಿಸಿದ್ದಾರೆ.

ಉದ್ಯೋಗ ಖಾತ್ರಿಗೆ ಮಗದೊಂದು ಅವಕಾಶ ಶರಣಬಸವ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಸೆಂಟರ್‌ ಫಾರ್‌ ಎಕ್ಸ್‌ಲೆನ್ಸ್‌ ಕೇಂದ್ರ ಸ್ಥಾಪನೆಯಿಂದ ಹೊಸ ಸೌಲಭ್ಯವೊಂದು ದೊರೆತಂತಾಗಿ ಅಲ್ಪಾವಧಿ ಕೋರ್ಸ್ಗಳು ಸಿಸ್ಕೋ ಮೂಲಕ ಪ್ರಾರಂಭ ಆಗುವುದರಿಂದ ಜಗತ್ತಿನ ಪ್ರಮುಖ ಐಟಿ ಕಂಪನಿಗಳಲ್ಲಿ ಉದ್ಯೋಗ ಖಾತರಿ ಪಡಿಸುವ ಅವಕಾಶ ದೊರಕಲಿದೆ. 
ಡಾ| ಶರಣಬಸವಪ್ಪ ಅಪ್ಪ, ಕುಲಾಧಿಪತಿ, ಶರಣಬಸವ ವಿವಿ

Advertisement

Udayavani is now on Telegram. Click here to join our channel and stay updated with the latest news.

Next