Advertisement

ದಾಲ್ಚಿನ್ನಿ ದರ್ಬಾರ್‌

06:59 PM Oct 24, 2019 | mahesh |

ಪ್ರಾಚೀನ ಕಾಲದಿಂದಲೂ ದಾಲ್ಚಿನ್ನಿಯನ್ನು ಮಸಾಲೆ ಪದಾರ್ಥವನ್ನಾಗಿ ಉಪಯೋಗಿಸುತ್ತಿದ್ದೇವೆ. 20-40 ಅಡಿ ಎತ್ತರ ಬೆಳೆಯುವ ಈ ಮರದ ತವರೂರು ಕೇರಳ ಮತ್ತು ಶ್ರೀಲಂಕಾ ಎನ್ನುತ್ತಾರೆ. ಎಲೆಯನ್ನು ಪಲಾವ್‌ ಎಲೆ ಎಂದೂ, ಮರದ ತೊಗಟೆಯನ್ನು ಚಕ್ಕೆ ಎಂದೂ ಉಪಯೋಗಿಸುವ ಅನೇಕರಿಗೆ, ದಾಲಿcನ್ನಿ ಚಕ್ಕೆಯ ಔಷಧೀಯ ಗುಣಗಳು ತಿಳಿದಿಲ್ಲ. ಈ ಮಸಾಲಾ ಪದಾರ್ಥಕ್ಕೆ ಕಾಯಿಲೆಗಳನ್ನು ದೂರ ಮಾಡುವ ಶಕ್ತಿಯೂ ಇದೆ.

Advertisement

ಒಂದು ಬಟ್ಟಲು ನೀರಿಗೆ, ಅರ್ಧ ಚಮಚ ದಾಲಿcನ್ನಿ ಚಕ್ಕೆಪುಡಿ, ಕಾಳುಮೆಣಸಿನ ಪುಡಿ ಬೆರೆಸಿ ಕುದಿಸಿ, ನಂತರ ಜೇನು ಬೆರೆಸಿ ದಿನಕ್ಕೆ ಮೂರು ಬಾರಿ ಕುಡಿದರೆ- .ಶೀತ, ಕೆಮ್ಮು, ನೆಗಡಿ ಗುಣವಾಗುತ್ತದೆ.
.ಹೊಟ್ಟೆಹುಣ್ಣಿಗೆ ರಾಮಬಾಣ.
.ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
.ಮೂತ್ರಕೋಶದ ಸೋಂಕು ಕಡಿಮೆಯಾಗುತ್ತದೆ.
ದಾಲಿcನ್ನಿ ಚಕ್ಕೆಯನ್ನು ಲಿಂಬೆರಸದಲ್ಲಿ ತೇಯ್ದು-
.ಗಂಟಲಿನ ಹೊರಭಾಗಕ್ಕೆ ಹಚ್ಚಿದರೆ ಟಾನ್ಸಿಲ್‌, ಗಂಟಲುನೋವು ಕಡಿಮೆ ಯಾಗುತ್ತದೆ.
.ಮುಖಕ್ಕೆ ಹಚ್ಚಿದರೆ ಮೊಡವೆ ಮತ್ತು ಕಲೆ ಮಾಯ ವಾಗುತ್ತದೆ.
ಒಂದು ಲೋಟ ಹಾಲಿಗೆ ಅರ್ಧ ಚಮಚ ದಾಲಿcನ್ನಿ ಪುಡಿ ಹಾಕಿ, ಕುದಿಸಿ ಕುಡಿದರೆ-
.ಜೀರ್ಣಶಕ್ತಿ ವೃದ್ಧಿಸುತ್ತದೆ.
.ವಾಯು ಪ್ರಕೋಪವನ್ನು ತಡೆಯುತ್ತದೆ.
.ತೂಕವಿಳಿಸಲು, ಕೊಬ್ಬು ಕರಗಿಸಲು ಸಹಕಾರಿ.
.ಚರ್ಮದ ಸೋಂಕು ನಿವಾರಿಸುತ್ತದೆ.
.ರಾತ್ರಿ ಮಲಗುವುದಕ್ಕೆ ಮುನ್ನ ಕುಡಿದರೆ ಚೆನ್ನಾಗಿ ನಿದ್ರೆ ಬರುತ್ತದೆ.
ದಾಲಿcನ್ನಿ ಪುಡಿ ಮತ್ತು ಜೇನುತುಪ್ಪವನ್ನು ಸಮಪ್ರಮಾಣದಲ್ಲಿ ಬೆರೆಸಿ ಸೇವಿಸಿದರೆ-
.ಉಬ್ಬಸ ರೋಗಿಗಳು ಪ್ರತಿನಿತ್ಯ ಮೂರು ಬಾರಿ ಸೇವಿಸುವುದರಿಂದ ಅಸ್ತಮಾ ಕಡಿಮೆಯಾಗುತ್ತದೆ.
ದಾಲಿcನ್ನಿ ತೈಲವನ್ನು-
.ವಸಡಿಗೆ ಹಚ್ಚಿದರೆ ಹಲ್ಲುನೋವು ಕಡಿಮೆಯಾಗುತ್ತದೆ.
.ಕ್ಷಯದ ಗಾಯಗಳಿಗೆ ಲೇಪಿಸಿದರೆ, ಶೀಘ್ರವಾಗಿ ಉಪಶಮನ ವಾಗುತ್ತದೆ.

ಗೀತಾ ಎಸ್‌. ಭಟ್ಕಳ

Advertisement

Udayavani is now on Telegram. Click here to join our channel and stay updated with the latest news.

Next