Advertisement
ಭ್ರಷ್ಟಾಚಾರ ಮತ್ತು ಆದಾಯ ಮೀರಿದ ಆಸ್ತಿ ಗಳಿಕೆ ಹಿನ್ನಲೆಯಲ್ಲಿ ಗುರುವಾರ ಮಧ್ಯ ಪ್ರದೇಶ ಪೊಲೀಸ್ ವಸತಿ ನಿಗಮದ ಸಹಾಯಕ ಇಂಜಿನಿಯರ್ ಹೇಮಾ ಮೀನಾ ಅವರ ಮೇಲೆ ದಾಳಿ ಮಾಡಿದ ಲೋಕಾಯುಕ್ತ ಅಧಿಕಾರಿಗಳು ಅವರ ಮನೆಯಲ್ಲಿ 30 ಲಕ್ಷದ ಟಿ.ವಿ, ವಿದೇಶಿ ತಳಿಯ ನಾಯಿಗಳು, 10 ಕ್ಕೂ ಹೆಚ್ಚು ಐಶಾರಾಮಿ ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.
Related Articles
Advertisement
ಏನೇನು ವಶಕ್ಕೆ?
ಭೋಪಾಲ್ ಬಳಿಯಲ್ಲಿರುವ ಹೇಮಾ ಮೀನಾ ಅವರ ಬಂಗಲೆಯ ಮೇಲೆ ದಾಳಿ ಮಾಡಿದ ಲೋಕಾಯುಕ್ತ ಅಧಿಕಾರಿಗಳು ತಮ್ಮ ತಂದೆಯ ಹೆಸರಿನಲ್ಲಿರುವ 20,000 ಚದರ ಅಡಿಯ 40 ಕೋಣೆಗಳ ಬಂಗಲೆಯನ್ನು ವಶ ಪಡಿಸಿಕೊಂಡಿದ್ಧಾರೆ. ಅದೂ ಅಲ್ಲದೇ ಸುಮಾರು 50 ಕ್ಕೂ ಹೆಚ್ಚು ವಿದೇಶಿ ನಾಯಿಗಳನ್ನು ವಶಕ್ಕೆ ಪಡೆದಿದ್ದಾರೆ. ಅದರಲ್ಲಿ ಹಲವು ಪಿಟ್‌ಬುಲ್, ಡಾಬರ್‌ಮನ್ ನಾಯಿಗಳು ಹೆಚ್ಚಾಗಿದ್ದವು ಎಂದು ಪೊಲಿಸರು ಮಾಹಿತಿ ನೀಡಿದ್ದರು. ಅದರ ಜೊತೆಗೆ ಸುಮಾರು 70 ಕ್ಕೂ ಹೆಚ್ಚು ವಿವಿಧ ತಳಿಯ ಹಸುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಗಲೆಯ ಕೆಲಸದವರನ್ನು ಸಂಪರ್ಕಿಸಲು ಹೇಮಾ ವಾಕಿ-ಟಾಕಿ ಬಳಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
2.50 ಲಕ್ಷ ರೂ. ಮೌಲ್ಯದ ರೋಟಿ ಮೇಕಿಂಗ್ ಮೆಷಿನ್:
ನಾಯಿಗಳಿಗೆ ಆಹಾರವನ್ನು ಪೂರೈಸುವ ಉದ್ದೇಶದಿಂದ ಹೇಮಾ ತಮ್ಮ ಮನೆಯಲ್ಲಿ 2.50 ಲಕ್ಷ ಮೌಲ್ಯದ ರೋಟಿ ತಯಾರಿಕಾ ಯಂತ್ರವನ್ನು ಇಟ್ಟುಕೊಂಡಿದ್ದರು. ಅದನ್ನೂ ವಶ ಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಅದೂ ಅಲ್ಲದೇ, ಹೇಮಾ ಅವರ ಫಾರ್ಮ್ ಹೌಸ್‌ಗೆ ದಾಳಿ ಮಾಡಿದ ಲೋಕಾಯುಕ್ತ ತಂಡ ಲಕ್ಷಾಂತರ ರೂ. ಮೌಲ್ಯದ ಕೃಷಿ ಯಂತ್ರಗಳನ್ನು ಜಪ್ತಿ ಮಾಡಿದ್ದಾರೆ. ವಿದೇಶಿ ಮದ್ಯ, ಸಿಗರೇಟುಗಳನ್ನೂ ವಶ ಪಡಿಸಿಕೊಂಡಿದ್ದಾರೆ.
ಈ ಪ್ರಕರಣದಲ್ಲಿ ಇನ್ನೂ ಹಲವು ಅಧಿಕಾರಿಗಳು ಭಾಗಿಯಾಗಿರುವ ಸಾಧ್ಯತೆಗಳಿದ್ದು, ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಶಾರುಖ್ ಪುತ್ರನ ಕೇಸ್; 25 ಕೋಟಿ ರೂ.ಲಂಚ: ಸಮೀರ್ ವಿರುದ್ಧ ಎಫ್‌ಐಆರ್