Advertisement

ಕೋವಿಡ್ 19 ಲಾಕ್‌ಡೌನ್‌ ನಡುವೆಯೇ ಸದ್ದಿಲ್ಲದೆ ನಡೆದ ಸಿನಿಮಾ ಕೆಲಸ

01:47 PM May 11, 2020 | Suhan S |

ಕೋವಿಡ್ 19  ಲಾಕ್‌ಡೌನ್‌ ನಡುವೆಯೇ ನಿರ್ದೇಶಕ ವೆಂಕಟ್‌ ಭಾರದ್ವಾಜ್‌ ತಮ್ಮ ಮುಂದಿನ ಚಿತ್ರ ದಿ ಪೇಂಟರ್‌ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹಿಂದೆ ಎ ಡೇ ಇನ್‌ ದಿ ಸಿಟಿ, ಕೆಂಪಿರ್ವೆ, ಆಮ್ಲೆಟ್‌ ಎಂಬ ಸದಭಿರುಚಿ ಚಿತ್ರಗಳ ನಿರ್ದೇಶನ ಮಾಡಿದ್ದ ವೆಂಕಟ್‌ ಭಾರದ್ವಾಜ್‌, ಸದ್ಯ ಎ ಲ್ಯಾಬ್‌ 19 ಇನ್ನೊವೇಶನ್‌, ಅಮುರ್ಥ ಫಿಲ್ಮ್ ಸೆಂಟರ್‌ ಮತ್ತು ಶೇಖರ್‌ ಜಯರಾಮ್‌ ಅವರ ಜಂಟಿ ನಿರ್ಮಾಣದಲ್ಲಿ ಮೂಡಿಬರುತ್ತಿರುವ ದಿ ಪೇಂಟರ್‌ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

Advertisement

ಈಗಾಗಲೆ ದಿ ಪೇಂಟರ್‌ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಲಾಗಿದೆ. ಚಿತ್ರ ಈಗ ಪೋಸ್ಟ್‌-ಪ್ರೊಡಕ್ಷನ್‌ ಹಂತದಲ್ಲಿದ್ದು, ಇದೇ ವೇಳೆ ಚಿತ್ರತಂಡ ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್‌ ಅನ್ನು ಬಿಡುಗಡೆ ಮಾಡಿದೆ. ವಿಶೇಷವೆಂದರೆ, ವೆಂಕಟ್‌ ತಮ್ಮ ಐಟಿ ಅನುಭವವನ್ನು ಈ ಚಿತ್ರಕ್ಕಾಗಿ ಬಳಸಿದ್ದಾರೆ. ಅಲ್ಲದೆ ದಿ ಪೇಂಟರ್‌ನಲ್ಲಿ ಪ್ರಮುಖ ಪಾತ್ರ ಕೂಡ ವಹಿಸಿದ್ದಾರೆ. ಉಳಿದಂತೆ ಇನ್ನು ಹಲವು ಕಲಾವಿದರ ತಾರಾಬಳಗ ಈ ಚಿತ್ರದಲ್ಲಿದೆ. ಬೆಂಗಳೂರು, ಚೆನ್ನೈ, ತುಮಕೂರು, ಕನಕಪುರ, ಹೆಬ್ಟಾಳ ಮೊದಲಾದ ಕಡೆಗಳಲ್ಲಿ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಕೇವಲ 17 ಜನರ ತಂಡವನ್ನು ಇಟ್ಟುಕೊಂಡು ಈ ಚಿತ್ರ ನಿರ್ಮಿಸಲಾಗುತ್ತಿದೆ.

ಈ ಬಗ್ಗೆ ಮಾತನಾಡುವ ವೆಂಕಟ್‌ ಭಾರದ್ವಾಜ್‌, ಇದೊಂದು ಕೊಲೆ ಮತ್ತು ಕ್ರೈಂ ಬೆಸ್ಡ್ ಥ್ರಿಲ್ಲರ್‌ ಆಗಲಿದ್ದು ಚಿತ್ರದ ಬಗೆಗೆ ಹೆಚ್ಚಿನ ವಿವರವನ್ನು ಬಿಡುಗಡೆ ಮಾಡಿದ ನಂತರ ಜನರು ನೋಡಲಿದ್ದಾರೆ. ಏಪ್ರಿಲ್‌ ಮೊದಲ ವಾರದಲ್ಲಿ ಕೆಲಸ ಪ್ರಾರಂಭಿಸಿದ ಚಿತ್ರದ ಶೂಟಿಂಗ್‌ ಎರಡನೇ ವಾರದಿಂದ ಪ್ರಾರಂಭ ವಾ ಯಿತು. ಲಾಕ್‌ ಡೌನ್‌ ಅವಧಿ ಯಲ್ಲಿ 5 ವಿಭಿನ್ನ ಸ್ಥಳಗಳಲ್ಲಿ ಚಿತ್ರೀಕರಣ ಮಾಡುತ್ತಿದ್ದೆವು. ಪಾತ್ರವರ್ಗ ಮತ್ತು ಸಿಬ್ಬಂದಿ ಈ ಲಾಕ್‌ಡೌನ್‌ ಅನ್ನು ಬಹಳ ಪರಿಣಾಮಕಾರಿಯಾಗಿ ಬಳಸಿಕೊಂಡರು, ಪಾತ್ರಗಳ ಪಾತ್ರ ಮತ್ತು ತಾಂತ್ರಿಕತೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ನಾವು ಮನೆಯಲ್ಲಿ ಕೆಲವು ಲೆ„ಟ್‌ ಗಳನ್ನು ಹೊಂದಿದ್ದೆವು. ನಮಗೆ ಹೆಚ್ಚುವರಿ ಲೆ„ಟಿಂಗ್‌ ಅಗತ್ಯವಾಗಿದ್ದಾಗ ನಾವು ಬಿದಿರಿನ ಕೋಲುಗಳು, ಹಗ್ಗಗಳು, ವಿದ್ಯುತ್‌ ತಂತಿಗಳು ಮತ್ತು ಬಲ್ಬ್ ಗಳನ್ನು ಬಳಸಿದ್ದೇವೆ. ಎಲ್ಲವೂ ಹೆಚ್ಚಾಗಿ ನೈಸರ್ಗಿಕವಾಗಿ ಕಾಣುವಂತೆ ನಾವು ಹೆಚ್ಚಾಗಿ ಮನೆಬಳಕೆ ವಸ್ತುಗಳನ್ನೇ ಬಳಸಿದ್ದೇವೆ. ಇದೇ ತಿಂಗಳ ಅಂತ್ಯದ ವೇಳೆಗೆ ಪೇಂಟರ್‌ ಸಿದ್ಧವಾಗಲಿದೆ ಎಂದಿದ್ದಾರೆ. ­

Advertisement

Udayavani is now on Telegram. Click here to join our channel and stay updated with the latest news.

Next