Advertisement

ಚಿತ್ರಮಂದಿರಗಳಲ್ಲಿ ಶೇ. 50 ರಷ್ಟು ಪ್ರೇಕ್ಷಕರಿಗೆ ಅವಕಾಶ: ಗೋವಾ ಸರ್ಕಾರ

05:56 PM Aug 23, 2021 | Team Udayavani |

ಪಣಜಿ: ಕಳೆದ ವರ್ಷ ಮಾರ್ಚ್ ನಲ್ಲಿ  ಕೋವಿಡ್ ಸೋಂಕು ರಾಜ್ಯದಲ್ಲಿ ಹರಡಲಾರಂಭಿಸಿದ ಸಂದರ್ಭದಲ್ಲಿ ಲಾಕ್‍ಡೌನ್ ಜಾರಿಯಾದ ನಂತರ ಚಿತ್ರಮಂದಿರಗಳನ್ನು ಬಂದ್ ಮಾಡಲಾಗಿತ್ತು. ಇದೀಗ ರಾಜ್ಯದಲ್ಲಿ ಕಫ್ರ್ಯೂ ಸಡಿಲಿಕೆಯ ನಂತರ ಸಿನೆಮಾ ಥಿಯೇಟರ್‍ಗಳನ್ನು ಶೇ 50 ರಷ್ಟು ಪ್ರೇಕ್ಷಕರಿಗೆ ಪ್ರವೇಶಾವಕಾಶ ನೀಡಿ ಆರಂಭಿಸಲು ಸರ್ಕಾರ ಅನುಮತಿ ನೀಡಿದೆ. ಆದರೆ ಕೆಲ ಕೋವಿಡ್ ನಿಯಮಗಳನ್ನು ಖಡ್ಡಾಯವಾಗಿ ಪಾಲಿಸುವಂತೆ ಸರ್ಕಾರ ಸೂಚಿಸಿದೆ.

Advertisement

ಸಿನೆಮಾ ಥಿಯೇಟರ್ ತೆರೆಯಲು ಪ್ರವೇಶದ್ವಾರದಲ್ಲಿ ಖಡ್ಡಾಯವಾಗಿ ಸ್ಯಾನಿಟೈಜರ್ ವ್ಯವಸ್ಥೆ, ಮಾಸ್ಕ್‌  ಕಡ್ಡಾಯ, ಸಿನೆಮಾ ವೀಕ್ಷಣೆಗೆ ಸಾಮಾಜಿಕ ಅಂತರ ಪಾಲನೆ, ಥರ್ಮಲ್‍ಗನ್ ಮೂಲಕ ಪ್ರತಿಯೊಬ್ಬರ ತಪಾಸಣೆ, ಒಂದು ಪ್ರದರ್ಶನದ ನಂತರ ಚಿತ್ರಮಂದಿರದ ಒಳಭಾಗದಲ್ಲಿ ಸ್ಯಾನಿಟೈಜ್ ಮಾಡುವುದು, ಹೀಗೆ ಹಲವು ನಿಯಮಗಳನ್ನು ಜಾರಿಗೊಳಿಸುವ ಮೂಲಕ ಸರ್ಕಾರವು ರಾಜ್ಯದಲ್ಲಿ ಸಿನೆಮಾ ಥಿಯೇಟರ್ ಆರಂಭಿಸಲು ಪರವಾನಗಿ ನೀಡಿದೆ.

ಇದನ್ನೂ ಓದಿ:ಒಂದೂವರೆ ವರ್ಷಗಳ ಬಳಿಕ ಶಾಲಾರಂಭ ; ವಿದ್ಯಾರ್ಥಿಗಳು, ಪೋಷಕರಲ್ಲಿ ಹರ್ಷ:  ತೇಜಸ್ವೀ ಸೂರ್ಯ

ರಾಜ್ಯದಲ್ಲಿ ಸರ್ಕಾರವು ಸಿನೆಮಾ ಥಿಯೇಟರ್ ಆರಂಭಕ್ಕೆ ಪರವಾನಗಿ ನೀಡಿರುವ ಹಿನ್ನೆಲೆಯಲ್ಲಿ ಸಿನೆಮಾ ಪ್ರಿಯರಲ್ಲಿ ಸಂತಸ ಮನೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next