Advertisement

ಗ್ರಾಮಸ್ಥರ ಮೇಲೆ ಸಿನಿ ತಂಡದಿಂದ ಹಲ್ಲೆ

02:31 PM Feb 20, 2023 | Team Udayavani |

ಸಕಲೇಶಪುರ: ಪಶ್ಚಿಮಘಟ್ಟದಲ್ಲಿ ಮತ್ತೂಂದು ಬೆಂಕಿ ಅವಘಡಕ್ಕೆ ಅವಕಾಶ ಮಾಡಿ ಕೊಡಬೇಡಿ ಎಂದು ಬುದ್ದಿ ಮಾತು ಹೇಳಲು ಹೋದ ಗ್ರಾಮಸ್ಥರ ಮೇಲೆ ಸಿನಿಮಾ ತಂಡವೊಂದು ಹಲ್ಲೆ ನಡೆಸಲು ಮುಂದಾದ ಘಟನೆ ತಾಲೂಕಿನ ಗಡಿಯಂಚಿನ ಪ್ರದೇಶ ಪಟ್ಲ ಬೆಟ್ಟದಲ್ಲಿ ನಡೆದಿದೆ.

Advertisement

ಘಟನೆ ವಿವರ : ಊರ ಜನರಿಗೆ ಪಟ್ಲಾ ಬೆಟ್ಟದ ಮೇಲೆ ಬೆಂಕಿ ಜ್ವಾಲೆ ಕಾಣಿಸಿ ಕೊಂಡಿ ದ್ದು ಇದರಿಂದ ತಳಮಳಗೊಂಡ ಗ್ರಾಮಸ್ಥರು ಕೂಡಲೆ ಕಂದಾಯ ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಗ್ರಾಮಸ್ಥರ ದೂರಿಗೆ ಸ್ಪಂದಿಸಿ ಸಿಬ್ಬಂದಿ ಬೆಂಕಿ ಕಾಣಿಸಿಕೊಂಡ ಸ್ಥಳಕ್ಕೆ ಗ್ರಾಮಸ್ಥರೊಂದಿಗೆ ಹೋಗಿ ನೋಡು ವಾಗ ಸಿನಿಮಾ ತಂಡವೊಂದು ಸಿನಿಮಾ ಚಿತ್ರೀಕರಣಕ್ಕೆ ತಮಗೆ ಬೇಕಾದ ರೀತಿಯಲ್ಲಿ ಲೋಕೆಷನ್‌ ಗುರುತಿಸಿ ಸೆಟ್‌ ನಿರ್ಮಿಸಲು ಯಂತ್ರೋಪಕರಣ ಗಳನ್ನು ಬಳಸಿ ವೆಲ್ಡಿಂಗ್‌ ಮಾಡಿಕೊಂಡು ¤ ಸುತ್ತಮುತ್ತ ಒಣಹುಲ್ಲಿಗೆ ಬೆಂಕಿ ಹಾಕಿದ್ದಾರೆ.

ಈ ಸಂದರ್ಭದಲ್ಲಿ ಪ್ರವಾಸಿಗರು ಬೆಂಕಿ ಮೇಲೆಯೇ ಪ್ಯಾರಾಗ್ಲೈಂಡಿಂಗ್‌ ಹಾರಾಟ ಮಾಡುತ್ತಿದ್ದರು. ಈ ಹಿನ್ನೆಲೆ ಸ್ಥಳಕ್ಕೆ ಬಂದ ಗ್ರಾಮಸ್ಥರು ಪಶ್ಚಿಮಘಟ್ಟದ ಕಾಡುಮನೆ ಅರಣ್ಯ ಪ್ರದೇಶದಲ್ಲಿ ಬೆಂಕಿ ಅನಾಹುತದಿಂದ ಅರಣ್ಯ ಇಲಾಖೆಯ ಮೂವರು ಗಾಯಗೊಂಡು ಒಬ್ಬರು ಮೃತಪಟ್ಟಿದ್ದಾರೆ. ಪಟ್ಲ ಬೆಟ್ಟ ಪ್ರದೇಶ ಗೋಮಾಳಕ್ಕೆ ಒಳಪಟ್ಟಿದೆ ಅದರ ಸುತ್ತಮುತ್ತ ಬಿಸ್ಲೆ ರಕ್ಷಿತ ಅರಣ್ಯ ಪ್ರದೇಶವಿದೆ ಹಾಗಾಗಿ ಬೆಂಕಿ ಹಾಕುವುದು ಅಷ್ಟೊಂದು ಸೂಕ್ತವಲ್ಲ. ಕೆಳಗಡೆ ಬೆಂಕಿ ಹೊತ್ತಿ ಉರಿವಾಗ ಪ್ಯಾರಾಗ್ಲೈಂಡಿಂಗ್‌ ಮಾಡುವುದು ಸೂಕ್ತವಲ್ಲ. ನೀವು ಹುಲ್ಲಿಗೆ ಬೆಂಕಿ ಹಚ್ಚಿದರೆ ಅದು ಕಾಡಿಗೂ ವ್ಯಾಪಿ ಸುವ ಸಾಧ್ಯತೆ ಇದ್ದು, ಜಾಗೃತರಾಗಿ ಕಾರ್ಯನಿರ್ವಹಿಸಿ ಎಂದು ಬುದ್ಧಿ ಮಾತು ಹೇಳಲು ಮುಂದಾಗಿದಕ್ಕೆ, ಅಲ್ಲಿ ದ್ದವರು ಗ್ರಾಮಸ್ಥರ ವಿರುದ್ಧ ಅವಾಚ್ಯ ಭಾಷೆ ಬಳಸಿ ನಿಂದಿಸಿ, ಹಲ್ಲೆಗೂ ಮುಂದಾಗಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಲಿಖಿತ ದೂರನ್ನು ಕಂದಾಯ ಇಲಾಖೆ ಅಧಿಕಾರಿ ಸುನಿಲ್‌ ಅವರು ಯಸಳೂರು ಠಾಣೆಗೆ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next