Advertisement

ಕೋವಿಡ್‌ ನಡುವೆ ಸಿನೆಮಾ ಬಿಡುಗಡೆ ಸವಾಲು

01:57 AM Nov 29, 2021 | Team Udayavani |

ಮಂಗಳೂರು: ಕೊರೊನಾ ಆತಂಕದ ನಡುವೆ ಚಲನಚಿತ್ರ ಬಿಡುಗಡೆ ಮಾಡುವುದು ದೊಡ್ಡ ಸವಾಲಾಗಿದೆ. ಕೊರೊನಾ ಹೊಡೆತಕ್ಕೆ ಸಿನೆಮಾ ಇಂಡಸ್ಟ್ರಿಯೂ ಹೊರತಾಗಿಲ್ಲ. ಆದರೆ, ಸದ್ಯಜನಜೀವನ ಚೇತರಿಕೆಯತ್ತ ಸಾಗುತ್ತಿದ್ದರೂ ಆತಂಕ ಮುಂದುವರಿದಿದೆ ಎಂದು ಬಾಲಿ ವುಡ್‌ ನಟ ಸುನಿಲ್‌ ಶೆಟ್ಟಿ ಹೇಳಿದ್ದಾರೆ.

Advertisement

ಪುತ್ರ ಅಹಾನ್‌ ಶೆಟ್ಟಿ ಅವರ “ತಡಪ್‌’ ಹಿಂದಿ ಚಲನಚಿತ್ರ ಡಿ. 3ರಂದು ಬಿಡುಗಡೆಯಾಗಲಿರುವ ಹಿನ್ನೆಲೆಯಲ್ಲಿ ನಗರದಲ್ಲಿ ರವಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ತಡಪ್‌’ ಚಲನಚಿತ್ರದ ನಿರ್ಮಾಣ ಕಳೆದ ಒಂದೂವರೆ ವರ್ಷಗಳ ಹಿಂದೆಯೇ ಪೂರ್ಣಗೊಂಡಿತ್ತು. ಆದರೆ, ಕೊರೊನಾ ಕಾರಣದಿಂದಾಗಿ ಚಲನಚಿತ್ರ ಬಿಡುಗಡೆ ದಿನಾಂಕ ಮುಂದೂಡಲಾಗಿತ್ತು. ಈಗ ಬಿಡುಗಡೆಗೆ ತಯಾರಿ ನಡೆಸಿದ್ದೇವೆ. ಪ್ರೇಕ್ಷಕರು ಆಶೀರ್ವದಿಸುತ್ತಾರೆ ಎಂಬ ನಂಬಿಕೆ ಇದೆ ಎಂದರು.

ತಡಪ್‌ ಚಲನಚಿತ್ರಕ್ಕೆ ಮಿಲನ್‌ ಲೂಥ್ರಿಯಾ ನಿರ್ದೇಶನ ನೀಡಿದ್ದಾರೆ. ತೆಲುಗಿನ “ಆರ್‌ಎಕ್ಸ್‌ 100′ ಸಿನೆಮಾದ ರಿಮೇಕ್‌ ಇದಾಗಿದ್ದು, ಅಹಾನ್‌ ಅವರ ಜೋಡಿಯಾಗಿ ತಾರಾ ಸುತಾರಿಯಾ ಅವರು ನಟಿಸುತ್ತಿದ್ದಾರೆ ಎಂದು ವಿವರಿಸಿದರು.

ಇದನ್ನೂ ಓದಿ:ಒಂದೇ ದಿನದಲ್ಲಿ ಕೇಸ್​​ ವಿಚಾರಣೆ, ಆದೇಶ: ನ್ಯಾಯಾಂಗ ಇತಿಹಾಸದಲ್ಲೇ ತ್ವರಿತ ತೀರ್ಪು

ನಟ ಅಹಾನ್‌ ಶೆಟ್ಟಿ ಅವರು ಮಾತನಾಡಿ, ತಡಪ್‌ ನನ್ನ ಮೊದಲ ಚಲನಚಿತ್ರ. ಅಪ್ಪನ ಮಾರ್ಗ ದರ್ಶನವೂ ನನಗಿತ್ತು. ಚಿತ್ರದ ಸ್ಕ್ರಿಪ್ಟ್ ತುಂಬಾ ಚೆನ್ನಾಗಿದೆ. ಇದೊಂದು ರೊಮ್ಯಾಂಟಿಕ್‌ ಚಲನಚಿತ್ರವಾಗಿದ್ದು, ಪ್ರೇಕ್ಷಕರು ಆಶೀರ್ವಾದ ನೀಡುತ್ತಾರೆ ಎಂಬ ನಂಬಿಕೆ ಇದೆ ಎಂದರು.

Advertisement

ನಿರ್ಮಾಪಕ ಎಸ್‌. ವಿ. ಬಾಬು ರಾಜೇಂದ್ರ ಸಿಂಗ್‌, ದೇವಾನಂದ ಶೆಟ್ಟಿ, ವಿಜಯಕುಮಾರ್‌ ಕೊಡಿಯಾಲ್‌ಬೈಲ್‌, ಸುಧೀರ್‌ ಶೆಟ್ಟಿ ಉಪಸ್ಥಿತರಿದ್ದರು.

“ತುಳುವ ಎನ್ನಲು ಹೆಮ್ಮೆ’
“ತುಳುವ ಎನ್ನಲು ಹೆಮ್ಮೆ ಯಾಗುತ್ತಿದ್ದು, ತುಳುವನಾಗಿಯೇ ಈ ಮಟ್ಟಕ್ಕೆ ಬೆಳೆದಿದ್ದೇನೆ. ಇಲ್ಲಿನ ಸಂಸ್ಕೃತಿಯೇ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದೆ. ನಾನು ಏಳುಬೀಳು ಕಂಡಾಗ ನನ್ನನ್ನು ಕಾಪಾಡಿದ್ದು ತುಳುನಾಡಿನ ದೈವ ದೇವರು. ದೇವರ ಆಶೀರ್ವಾದ ಆಗಾಗ‌ ಧರ್ಮಸ್ಥಳ, ಬಪ್ಪನಾಡು, ಸುಬ್ರಹ್ಮಣ್ಯ ಕ್ಷೇತ್ರಗಳಿಗೆ ಬರುತ್ತಿರುತ್ತೇನೆ. ಮಗನಿಗೆ ತುಳು ಮಾತನಾಡಲು ಬರದಿದ್ದರೂ, ಇಲ್ಲಿನ ಸಂಸ್ಕೃತಿಯ ಬಗ್ಗೆ ಗೌರವವಿದೆ’ ಎಂದು ನಟ ಸುನಿಲ್‌ ಶೆಟ್ಟಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next