-ಇದು “ಡಿಂಗ’ ಚಿತ್ರತಂಡದ ಉದ್ಘಾರ. ಜೊತೆಗೆ ಅವರ ಮೊಗದಲ್ಲಿ ಹರ್ಷವೂ ಉಂಟು. ಹೊಸಬರ ಚಿತ್ರವೊಂದು ಈ ಪರಿ ಸುದ್ದಿಯಾಗಿದೆ ಅಂದರೆ, ಅದಕ್ಕೆ ಕಾರಣ, ಚಿತ್ರದ ಗುಣಮಟ್ಟ. ಸಾಂಗು ಹಾಗೂ ಆ ಡಿಂಗನ ಸ್ಟೆಪ್ಪು. ಹೌದು, ಇದು ಐಫೋನ್‌ನಲ್ಲಿ ತಯಾರಾದ ಚಿತ್ರ. ಈ ವಾರ ತೆರೆಗೆ ಬರುತ್ತಿರುವ ಚಿತ್ರದ ಕುರಿತು ಹೇಳಿಕೊಂಡ ನಿರ್ದೇಶಕ ಅಭಿಷೇಕ್, “ನಾನು ಈ ಚಿತ್ರದ ಕಥೆಯನ್ನು ಸಾಕಷ್ಟು ಜನರಿಗೆ ಹೇಳಿದೆ. ಯಾರೂ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಯಾಕೆಂದರೆ, ಐಫೋನ್‌ನಲ್ಲಿ ಸಿನಿಮಾ ಮಾಡ್ತೀನಿ ಅಂದಿದ್ದಕ್ಕೆ. ಕೊನೆಗೆ ನನ್ನ ಮಾತನ್ನು ಗಂಭೀರವಾಗಿ ತೆಗೆದುಕೊಂಡಿದ್ದು ಗುರುಗಳು. ಇವತ್ತಿನ ಕಾಲದಲ್ಲಿ ಸುಮ್ಮನೆ ನೂರು ರುಪಾಯಿ ಸಿಗೋದಿಲ್ಲ. ಅಂತಹದರಲ್ಲಿ ನನ್ನ ನಂಬಿ ಕೋಟಿ ಹಣ ಹಾಕಿ ಸಿನಿಮಾ ಮಾಡಿದ್ದಾರೆ. ಐಫೋನ್ ಸಿನಿಮಾ ಸುಮ್ಮನೆ ಅಲ್ಲ. ರಿಸ್ಕ್ ಜಾಸ್ತಿ ಇತ್ತು. ಫೋನೋಗ್ರಫಿ ಮೆಥೆಡ್ ವರ್ಕ್ ಆಗಿದೆ. ಏಷ್ಯಾದಲ್ಲೇ ಮೊದಲ ಪ್ರಯತ್ನವಿದು. ಎಲ್ಲರೂ ಚಿತ್ರ ನೋಡಿ ಹರಸಿ’ ಎಂದರು ನಿರ್ದೇಶಕ ಅಭಿಷೇಕ್.
Advertisement
ಮಾಯಕಾರ ಪ್ರೊಡಕ್ಷನ್ಸ್‌ನಲ್ಲಿ 11 ಜನ ನಿರ್ಮಾಪಕರು ಚಿತ್ರಕ್ಕೆ ಹಣ ಹಾಕಿದ್ದಾರೆ. ಅವರ ಪೈಕಿ ಮಧು ದೀಕ್ಷಿತ್ ಮಾತನಾಡಿ, “ಚಿತ್ರ ಮಾಡೋದು ಸುಲಭ. ಆದರೆ, ರಿಲೀಸ್ ಮಾಡೋದು ಕಷ್ಟ. ಆದರೆ ಮಾದೇಶ್ವರನ ಅನುಗ್ರಹ ಎಲ್ಲವೂ ಒಳ್ಳೆಯದಾಗಿದೆ. ಧೀರಜ್ ಫಿಲಂಸ್‌ನ ಮೋಹನ್‌ದಾಸ್ ಪೈ ವಿತರಣೆ ಮಾಡುತ್ತಿದ್ದಾರೆ. ಹೊಸಬರ ಪ್ರಯತ್ನಕ್ಕೆ ಬೆಂಬಲ ಸಿಕ್ಕಿದೆ. ನಿರ್ದೇಶಕರು ಹೇಗೆ ಕಥೆ ಹೇಳಿದ್ದರೋ, ಹಾಗೆಯೇ ಚಿತ್ರ ಮಾಡಿದ್ದಾರೆ. ಆರವ್ ಹಾಗು ಅನೂಷಾ ಈ ಚಿತ್ರ ಆಗೋಕೆ ಕಾರಣ. ಇನ್ನು, ದೊಡ್ಡ ಪರದೆ ಮೇಲೆ ಐಫೋನ್ ಚಿತ್ರ ನೋಡೋಕೆ ಆಗುತ್ತಾ ಎಂಬ ಪ್ರಶ್ನೆ ಇತ್ತು. ಛಾಯಾಗ್ರಾಹಕ ಮಂಜುನಾಥ್ ಅದಕ್ಕೆ ತಕ್ಕ ಉತ್ತರ ಕೊಟ್ಟಿದ್ದಾರೆ. ಇನ್ನು, ಸಂಗೀತ ನಿರ್ದೇಶಕ ಶುದೊœàರಾಯ್ ಅದ್ಭುತ ಹಾಡು ಕೊಟ್ಟಿದ್ದಾರೆ. ಇದು ಕೌಟುಂಬಿಕ ಸಿನಿಮಾ. ಎಲ್ಲರೂ ನೋಡಬೇಕು’ ಎಂಬ ಮನವಿ ಇಟ್ಟರು.
Related Articles
Advertisement