Advertisement
ಪೂರ್ಣ ಸಾಮರ್ಥ್ಯದೊಂದಿಗೆ ಈ ಕೂಟಕ್ಕೆ ಅಣಿಯಾಗಿ ಬಂದಿದ್ದ ಬೋರ್ನ ಕೊರಿಕ್ ಗ್ರೀಕ್‌ನ ದೈತ್ಯ ಆಟ ಗಾರ ಸ್ಟೆಫನಸ್ ಸಿಸಿಪಸ್ ಅವರನ್ನು 7-6 (7-0), 6-2 ನೇರ ಸೆಟ್‌ಗಳಿಂದ ಹಿಮ್ಮೆಟ್ಟಿಸಿದರು.
ಭುಜದ ನೋವಿನಿಂದ 8 ತಿಂಗಳ ಕಾಲ ವಿಶ್ರಾಂತಿಯಲ್ಲಿದ್ದ ಬೋರ್ನ ಕೊರಿಕ್ ತಮ್ಮ ಪುನರಾಗಮನವನ್ನು ಭರ್ಜರಿಯಾಗಿ ಸಾರಿದರು. ಮುಂದಿನ “ಯುಎಸ್ ಓಪನ್’ನಲ್ಲಿ ಎದುರಾಳಿಗಳ ಪಾಲಿಗೆ ಎಚ್ಚರಿಕೆಯ ಗಂಟೆ ಬಾರಿಸಿದರು.
Related Articles
Advertisement
ದ್ವಿತೀಯ ಸುತ್ತಿನಲ್ಲಿ ದೈತ್ಯ ಆಟ ಗಾರ ರಫೆಲ್ ನಡಾಲ್ ಅವರನ್ನು ಮಣಿಸಿದಾಗಲೇ ಬೋರ್ನ ಕೊರಿಕ್ ಅಪಾಯಕಾರಿಯಾಗಿ ಗೋಚರಿಸಿದ್ದರು. ಇದು ನಿಜವಾಯಿತು. ಆದರೆ ತಾನಿಲ್ಲಿ ಚಾಂಪಿಯನ್ ಆಗಲಿದ್ದೇನೆಂದು ನಿರೀಕ್ಷಿ ಸಿರಲೇ ಇಲ್ಲ ಎಂಬುದು ಕೊರಿಕ್ ಪ್ರತಿಕ್ರಿಯೆ.
ಸೆಮಿಫೈನಲ್‌ನಲ್ಲಿ ನಂ.1 ಆಟಗಾರ ಡ್ಯಾನಿಲ್ ಮೆಡ್ವೆಡೇವ್ ಅವರನ್ನು ಮಣಿಸಿ ಬಂದಿದ್ದ ಸಿಸಿಪಸ್ ಆರಂಭದಲ್ಲಿ ಉತ್ತಮ ಲಯದಲ್ಲಿದ್ದರು. ಕೊರಿಕ್ ವಿರುದ್ಧ 4-1 ಮುನ್ನಡೆಯಲ್ಲಿದ್ದಾಗ ಮೊದಲ ಸೆಟ್ ಗೆಲ್ಲುವ ಉತ್ತಮ ಅವಕಾಶವಿತ್ತು. ಆದರೆ ಕೊರಿಕ್ ತಿರುಗಿ ಬಿದ್ದಾಗ ಸಿಸಿಪಸ್ ಆಟ ನಡೆಯಲಿಲ್ಲ.
ಗಾರ್ಸಿಯಾ ದಾಖಲೆಕ್ಯಾರೋಲಿನ್ ಗಾರ್ಸಿಯಾ ಅವರದು ಅಮೋಘ ಸಾಧನೆ. ಅವರು ಅರ್ಹತಾ ಸುತ್ತಿನಿಂದ ಬಂದು ಡಬ್ಲ್ಯುಟಿಎ ಟೂರ್-1000 ಪ್ರಶಸ್ತಿ ಗೆದ್ದ ವಿಶ್ವದ ಮೊದಲ ಆಟಗಾರ್ತಿ. ಮರಿಯಾ ಸಕ್ಕರಿ, ಅರಿನಾ ಸಬಲೆಂಕಾ, ಜೆಸ್ಸಿಕಾ ಪೆಗುಲಾ-ಹೀಗೆ ಮೂರು ಮಂದಿ ಟಾಪ್-10 ಆಟಗಾರ್ತಿಯರನ್ನು ಮಣಿಸಿದ ಬಳಿಕ, ಫೈನಲ್‌ನಲ್ಲಿ ಎರಡು ಬಾರಿಯ ವಿಂಬಲ್ಡನ್ ಚಾಂಪಿಯನ್ ಪೆಟ್ರಾ ಕ್ವಿಟೋವಾ ಅವರನ್ನು ಹಿಮ್ಮೆಟ್ಟಿಸಿದ ಸಾಧನೆ ಗಾರ್ಸಿಯಾ ಅವರದು.