Advertisement

ಮಂಗಳೂರು ಮುಸ್ಲಿಂ ಫೇಸ್‌ಬುಕ್ ಪೇಜ್ ವಿರುದ್ಧ ಸಿಐಡಿ ತನಿಖೆ ಆರಂಭ

07:21 PM Mar 05, 2022 | Team Udayavani |

ಮಂಗಳೂರು: ಶಿವಮೊಗ್ಗದ ಬಜರಂಗದಳ ಕಾರ್ಯಕರ್ತ ಹರ್ಷ ಅವರ ಬರ್ಬರ ಹತ್ಯೆಯ ಕುರಿತು ಅವಹೇಳನಕಾರಿ ಪೋಸ್ಟ್ ಮಾಡಿರುವ ಆರೋಪದ ಮೇಲೆ ‘ಮಂಗಳೂರು ಮುಸ್ಲಿಂ’ ಫೇಸ್‌ಬುಕ್ ಪೇಜ್ ವಿರುದ್ಧ ಸಿಐಡಿ (ಅಪರಾಧ ತನಿಖಾ ದಳ) ತನಿಖೆ ಆರಂಭಿಸಿದೆ.

Advertisement

ಬೆಂಗಳೂರು ದಕ್ಷಿಣ ವಿಭಾಗದ ಸೈಬರ್ ಕ್ರೈಂ ವಿಭಾಗವು ಬೆಂಗಳೂರಿನ ಅತೀಕ್ ಷರೀಫ್ ಮತ್ತು ‘ಮಂಗಳೂರು ಮುಸ್ಲಿಮ್ಸ್’ ನ ನಿರ್ವಾಹಕರ ವಿರುದ್ಧ ಫೆಬ್ರವರಿ 23 ರಂದು ಸ್ವಯಂಪ್ರೇರಿತ ಎಫ್‌ಐಆರ್ ದಾಖಲಿಸಿದ್ದು, ಫೇಸ್ ಬುಕ್ ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು.

‘ಮಂಗಳೂರು ಮುಸ್ಲಿಮ್ಸ್’ ಫೇಸ್‌ಬುಕ್ ಪುಟ ಈ ಹಿಂದೆಯೂ ಹಿಂದೂ ಪರ ಸಂಘಟನೆಗಳು ಮತ್ತು ರಾಜಕೀಯ ನಾಯಕರ ವಿರುದ್ಧ ಪ್ರಚೋದನಕಾರಿ ಪೋಸ್ಟ್‌ಗಳನ್ನು ಮಾಡಿತ್ತು. 2016 ರಲ್ಲಿ, ಕಟೀಲು ದೇವಿ ದುರ್ಗಾಪರಮೇಶ್ವರಿಯ ಪೋಸ್ಟ್‌ ಮಾಡಿದ ಬಳಿಕ ಖಾತೆಯನ್ನು ನಿರ್ಬಂಧಿಸಲಾಗಿತ್ತಾದರೂ, ಹೊಸ ಪ್ರೊಫೈಲ್ ಹೆಸರಿನೊಂದಿಗೆ ಇನ್ನೊಂದು ಪುಟವನ್ನು ತೆರೆಯಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next