Advertisement

ದಲಿತ ಹೋರಾಟಗಾರ ಡೀಕಯ್ಯ ಸಾವು ಪ್ರಕರಣ: ತನಿಖೆ ಚುರುಕುಗೊಳಿಸಿದ ಸಿಐಡಿ

01:11 AM Dec 24, 2022 | Team Udayavani |

ಬೆಳ್ತಂಗಡಿ: ಮೂಲತಃ ಕಣಿಯೂರು ಗ್ರಾಮದ ಪೊಯ್ಯ ನಿವಾಸಿ, ಕೊಳಲಪಲ್ಕೆ ಗರ್ಡಾಡಿಯಲ್ಲಿ ನೆಲೆಸಿದ್ದ ಬಹುಜನ ಚಳವಳಿಯ ಹಿರಿಯ ನಾಯಕ ಪಿ.ಡೀಕಯ್ಯ (63) ಅವರ ಸಾವಿನ ತನಿಖೆ ಆರಂಭಿಸಿರುವ ಸಿಐಡಿ ಅಧಿಕಾರಿಗಳು ಬೆಳ್ತಂಗಡಿ ಪೊಲೀಸ್‌ ಠಾಣೆಗೆ ಆಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ.

Advertisement

ಸಿಐಡಿ ಉಪನಿರೀಕ್ಷಕ ಶಿವರಾಜ್‌ ನೇತೃತ್ವದಲ್ಲಿ ಡಿ. 22ರಂದು ಬೆಳ್ತಂಗಡಿಗೆ ಬಂದಿರುವ ತಂಡವು ಡೀಕಯ್ಯ ಅವರ ಮನೆಗೆ ತೆರಳಿ ಸ್ಥಳ ಮಹಜರು ನಡೆಸಿದೆ. ಬಳಿಕ ಪತ್ನಿಯಿಂದ ಮಾಹಿತಿ ಪಡೆದಿದೆ ಎನ್ನಲಾಗಿದೆ.

ಡೀಕಯ್ಯ ಅವರು ಜುಲೈ 6ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಕುಸಿದು ಬಿದ್ದು ಗಾಯಗೊಂಡಿದ್ದು, ಜುಲೈ 8ರಂದು ಮಣಿಪಾಲದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಇವರ ಅಂತ್ಯಸಂಸ್ಕಾರವು ಪದು¾ಂಜದ ಮನೆಯಲ್ಲಿ ನಡೆದಿತ್ತು.

ಬಳಿಕ ಡೀಕಯ್ಯ ಅವರ ಸಹೋದರಿ ಯರು ಹಾಗೂ ಮನೆಯವರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಜು. 15ರಂದು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಜು. 18ರಂದು ಅವರ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಈ ನಡುವೆ ಮನೆ ಯವರು ಸಿಐಡಿ ತನಿಖೆಗೆ ಆಗ್ರಹಿಸಿ ಮನವಿ ಸಲ್ಲಿಸಿದ್ದರಿಂದ ಸರಕಾರವು ತನಿಖೆಯನ್ನು ಸಿಐಡಿಗೆ ವಹಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next