Advertisement

CID Show: 6 ವರ್ಷದ ಬಳಿಕ ಮತ್ತೆ ಶುರುವಾಗಲಿದೆ ಜನಪ್ರಿಯ ʼಸಿಐಡಿʼ ಶೋ

11:56 AM Oct 27, 2024 | Team Udayavani |

ಮುಂಬಯಿ: ಕಿರುತೆರೆ ಲೋಕದ ಜನಪ್ರಿಯ ಕಾರ್ಯಕ್ರಮ ʼಸಿಐಡಿʼ(CID) 6 ವರ್ಷದ ಬಳಿಕ ಮತ್ತೆ ಶುರುವಾಗಲಿದೆ.

Advertisement

ಸೋನಿ ಟೆಲಿವಿಷನ್‌ನಲ್ಲಿ 21 ಜನವರಿ 1998ರಲ್ಲಿ ಆರಂಭವಾದ ʼಸಿಐಡಿʼ ಸಿರೀಸ್ ಸತತ 20 ವರ್ಷಗಳ ಪ್ರಸಾರದ ಬಳಿಕ 2018ರ ಅಕ್ಟೋಬರ್‌ನಲ್ಲಿ ಮುಕ್ತಾಯ ಕಂಡಿತು. ಇದ್ದಕ್ಕಿದ್ದಂತೆ ಕಾರ್ಯಕ್ರಮ ಮುಕ್ತಾಯವಾದ ಕಾರಣ ಅನೇಕ ವೀಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದರು.

ʼಸಿಐಡಿʼ ಕಾರ್ಯಕ್ರಮಕ್ಕೆ ತಮ್ಮದೇ ಆದ ವೀಕ್ಷಕರ ಬಳಗವೇ ಇತ್ತು. ʼಸಿಐಡಿʼ ಇದುವರೆಗೆ ಸಾವಿರಾರು ಎಪಿಸೋಡ್‌ಗಳನ್ನು ಪೂರ್ತಿ ಮಾಡಿದೆ. ನೈಜ ಹಾಗೂ ಕಾಲ್ಪನಿಕ ಹೀಗೆ ಅನೇಕ ಕಥೆಗಳು ʼಸಿಐಡಿʼ ಯಲ್ಲಿ ಎಪಿಸೋಡ್‌ ಆಗಿ ಪ್ರಸಾರ ಕಂಡಿದೆ.

ಅಭಿಜಿತ್ , ದಯಾ, ಎಸಿಪಿ ಪ್ರದ್ಯುಮನ್ ಹೀಗೆ ʼಸಿಐಡಿʼ ತಂಡದಲ್ಲಿ ಗುರುತಿಸಿಕೊಂಡು ಕಿರುತೆರೆ ಲೋಕದಲ್ಲಿ ಜನಪ್ರಿಯತೆ ಪಡೆದುಕೊಂಡ ಈ ಕಲಾವಿದರು ಮತ್ತೆ ಜತೆಯಾಗುತ್ತಿದ್ದಾರೆ. ʼಸಿಐಡಿʼ ಹೊಸ ಸೀಸನ್‌ ಶೀಘ್ರದಲ್ಲಿ ಆರಂಭಗೊಳ್ಳಲಿದೆ. 6 ವರ್ಷದ ಬಳಿಕ ʼಸಿಐಡಿʼ ಸೋನಿಯಲ್ಲಿ ಮತ್ತೆ ಪ್ರಸಾರ ಕಾಣಲಿದೆ.

ಕಾರ್ಯಕ್ರಮದ ಪ್ರೋಮೊವನ್ನು ವಾಹಿನಿ ರಿಲೀಸ್‌ ಮಾಡಿದೆ. ಒಂದು ಕಾಲದಲ್ಲಿ ಸ್ನೇಹಿತರಾಗಿದ್ದ ಅಭಿಜಿತ್‌ ಹಾಗೂ ದಯಾ ಪರಸ್ಪರ ವೈರಿಗಳಾಗಿ ನಿಂತುಕೊಂಡಿದ್ದಾರೆ. ಅಭಿಜಿತ್ ದಯಾ ಎದೆಗೆ ಶೂಟ್‌ ಮಾಡಿದ್ದು, ದೂರದಲ್ಲಿದ್ದ ಎಸಿಪಿ ಪ್ರದ್ಯುಮನ್ ನಿಲ್ಲಿಸಿ.. ಎಂದು ಹೇಳುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.

Advertisement

ಇದನ್ನು ನೋಡಿದ ವೀಕ್ಷಕರು ʼಸಿಐಡಿʼ ಹೊಸ ಕಥೆಗಳನ್ನು ನೋಡಲು ಎಕ್ಸೈಟ್‌ ಆಗಿದ್ದಾರೆ. ಶೀಘ್ರದಲ್ಲಿ ʼಸಿಐಡಿʼ ಸೋನಿ ಟಿವಿಯಲ್ಲಿ ಶುರುವಾಗಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next