Advertisement
ಪ್ರಕರಣದಲ್ಲಿ ಬಿ.ಎಸ್.ಯಡಿಯೂರಪ್ಪ ಮೊದಲ ಆರೋಪಿ, ಅವರ ಸಹಚರ 2ನೇ ಆರೋಪಿ ವೈ.ಎಂ. ಅರುಣ್, 3ನೇ ಆರೋಪಿ ಎಂ.ರುದ್ರೇಶ್ ಮತ್ತು 4ನೇ ಆರೋಪಿ ಜಿ.ಮರಿಸ್ವಾಮಿ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ.
Related Articles
Advertisement
ಕೇಸ್‌ನಲ್ಲಿ ಇತರೆ ಮೂವರ ಪಾತ್ರವೇನು?:
ಯಡಿಯೂರಪ್ಪ ಸೂಚನೆ ಮೇರೆಗೆ ಇತರೆ ಆರೋಪಿಗಳಾದ ಅರುಣ್, ರುದ್ರೇಶ್, ಮರಿಸ್ವಾಮಿ, ಸಂತ್ರಸ್ತೆ ತಾಯಿಯನ್ನು ಪತ್ತೆ ಹಚ್ಚಿ, ಬಿಎಸ್‌ವೈ ಮನೆಗೆ ಕರೆತಂದಿದ್ದರು. ಬಳಿಕ ಆಕೆ ಫೇಸ್‌ಬುಕ್‌ನಲ್ಲಿ ಆಕೆ ಪೋಸ್ಟ್ ಮಾಡಿದ್ದ ವಿಡಿಯೋ ಡಿಲೀಟ್ ಮಾಡಿಸಿದ್ದಾರೆ. ಅಲ್ಲದೆ, ಆಕೆಯ ಫೋನ್‌ನಲ್ಲಿದ್ದ ವಿಡಿಯೋವನ್ನು ಡಿಲೀಟ್ ಮಾಡಿಸಿದ್ದರು. ಆ ನಂತರ ಆಕೆಗೆ ರುದ್ರೇಶ್ 2 ಲಕ್ಷ ರೂ. ಕೊಟ್ಟು ಈ ವಿಚಾರ ಹೊರಗಡೆ ಬಾಯಿಬಿಡದಂತೆ ಹೇಳಿ ಕಳುಹಿಸಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿ ತನಿಖಾಧಿಕಾರಿಗಳು ಉಲ್ಲೇಖೀಸಿದ್ದಾರೆ. ಈ ಮೂವರ ವಿರುದ್ಧ ಸಾಕ್ಷ್ಯ ನಾಶ ಮತ್ತು ಅರೋಪ ಮರೆ ಮಾಚಲು ಹಣದ ಆಮಿಷವೊಡ್ಡಿದ್ದ ಆರೋಪದಡಿ ಕೇಸ್ ದಾಖಲಿಸಲಾಗಿದೆ.
750 ಪುಟಗಳ ಆರೋಪಪಟ್ಟಿ ಸಲ್ಲಿಕೆ:
ಸಿಐಡಿ ತನಿಖಾಧಿಕಾರಿಗಳು ಕೋರ್ಟ್‌ಗೆ ಬಿಎಸ್‌ವೈ ಸೇರಿ ನಾಲ್ವರು ಆರೋಪಿಗಳ ವಿರುದ್ಧ 750 ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದಾರೆ. ಜತೆಗೆ ಪ್ರಕರಣದಲ್ಲಿ 75 ಸಾಕ್ಷ್ಯಗಳ ಹೇಳಿಕೆ ಹಾಗೂ ಘಟನಾ ಸ್ಥಳದ ಮಹಜರು ಪ್ರಮಾಣ ಪತ್ರ, ಸಂತ್ರಸ್ತೆ ಹಾಗೂ ಆಕೆಯ ತಾಯಿ ಹೇಳಿಕೆಯನ್ನು ಆರೋಪಪಟ್ಟಿಯಲ್ಲಿ ಉಲ್ಲೇಖೀಸಲಾಗಿದೆ.
ಪ್ರಕರಣ ಹಿನ್ನೆಲೆ?
ಸಂತ್ರಸ್ತೆ ತಾಯಿ ನೀಡಿದ್ದ ದೂರು ಆಧರಿಸಿ ಯಡಿಯೂರಪ್ಪ ವಿರುದ್ಧ ಮಾ.14ರಂದು ಸದಾಶಿವನಗರ ಠಾಣೆ ಪೊಲೀಸರು ಪೋಕೊÕà ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ನಂತರ ತಮಗೆ ಜೀವ ಬೆದರಿಕೆ ಇರುವುದಾಗಿ ದೂರುದಾರ ಮಹಿಳೆ ಆರೋಪಿಸಿದ್ದರು. ಈ ಪ್ರಕರಣವನ್ನು ಸರ್ಕಾರ ಸಿಐಡಿಗೆ ವರ್ಗಾವಣೆ ಮಾಡಿತ್ತು. ಬಳಿಕ ಪ್ರಕರಣದ ಪ್ರಮುಖ ಆರೋಪಿ ಬಿಎಸ್‌ವೈ ಸೇರಿ ನಾಲ್ವರು ಆರೋಪಿಗಳ ವಿಚಾರಣೆ ನಡೆಸಿ ಇದೀಗ ಆರೋಪಪಟ್ಟಿ ಸಲ್ಲಿಸಿದೆ. ಅದಕ್ಕೂ ಮೊದಲು ಬಿಎಸ್‌ವೈ 2 ಬಾರಿ ಸಿಐಡಿ ವಿಚಾರಣೆಗೆ ಹಾಜರಾಗಿದ್ದರು. ಮೇ 26ರಂದು ಸಂತ್ರಸ್ತೆ ತಾಯಿ ಅನಾರೋಗ್ಯಕ್ಕೊಳಗಾಗಿ ಮೃತಪಟ್ಟಿದ್ದರು.