Advertisement
ಅಂತಹವರ ಮೇಲೆ ಕಳೆದೊಂದು ವರ್ಷದಿಂದ ನಿಗಾ ಇಟ್ಟಿದ್ದ ಸಿಐಡಿ ಸಮಗ್ರ ಮಾಹಿತಿಯನ್ನು ಸ್ಥಳೀಯ ಪೊಲೀಸರಿಗೆ ನೀಡಿದೆ. ಅದರಂತೆ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ. ವಿಶೇಷವೆಂದರೆ ಅನೇಕ ಮಂದಿಗೆ ತಪ್ಪಿನ ಅರಿವೇ ಇಲ್ಲ. ಮನೆ ಬಾಗಿಲಲ್ಲಿ ಪೊಲೀಸರನ್ನು ಕಂಡು ದಂಗಾಗುತ್ತಿದ್ದಾರೆ.
Related Articles
Advertisement
ಮಕ್ಕಳಿಂದ ವೀಕ್ಷಣೆ; ಹೆತ್ತವರಿಗೆ ಗೋಳು! ಈಗ ಗುರುತಿಸಿರುವ, ಬಂಧಿಸಿರುವ ಆರೋಪಿಗಳ ಪೈಕಿ ಹಲವರು ಕಾರ್ಮಿಕರು. ಇನ್ನು ಕೆಲವು ಪ್ರಕರಣಗಳಲ್ಲಿ ಮನೆಯಲ್ಲಿ ಮಕ್ಕಳು, ಯುವಕರು ತಮ್ಮ ಹೆತ್ತವರ ಮೊಬೈಲ್‌ನಲ್ಲಿ ವೀಕ್ಷಣೆ, ಹಂಚಿಕೆ ಮಾಡಿದ್ದಾರೆ. ಆದರೆ ಸಿಮ್‌ಯಾರ ಹೆಸರಿನಲ್ಲಿದೆಯೋ ಅವರ ವಿರುದ್ಧವೇ ಪ್ರಕರಣ ದಾಖಲಾಗುತ್ತದೆ ಎನ್ನುತ್ತಾರೆ ಸೈಬರ್ ಪೊಲೀಸರು.
ಇದನ್ನೂ ಓದಿ:ರೇಖಾ ಕೊಲೆಗೆ 2-3 ತಿಂಗಳ ಸ್ಕೆಚ್: ಕದಿರೇಶ್ ಸಹೋದರಿ ಮಾಲಾ, ಆಕೆಯ ಪುತ್ರನ ಸೆರೆ
ಅಶ್ಲೀಲ ಸೈಟ್‌ಗಳನ್ನು ಸರಕಾರ ನಿಷೇಧಿಸಿದ್ದರೂ ಬೇರೆ ಬೇರೆ ರೂಪದಲ್ಲಿ ಲಭ್ಯವಾಗುತ್ತಿವೆ. ಯಾವುದೇ ಅಶ್ಲೀಲ ವೀಡಿಯೋಗಳ ವೀಕ್ಷಣೆ, ಹಂಚುವಿಕೆ ಅಪರಾಧ. ಇದನ್ನು ತಡೆಯುವುದಕ್ಕಾಗಿ ನಿಗಾ ವಹಿಸಲಾಗುತ್ತಿದೆ. ಮೊಬೈಲನ್ನು ಇತರರಿಗೆ ನೀಡುವುದು ಕೂಡ ಅಪಾಯಕಾರಿ.
– ಹೃಷಿಕೇಶ್ ಸೋನಾವಣೆ, ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಶಿಕ್ಷೆ ಏನು?
ಮಕ್ಕಳ ಅಶ್ಲೀಲ ಚಿತ್ರ / ವೀಡಿಯೋ ಪ್ರಕರಣ: 5 ವರ್ಷ ಜೈಲು, 10 ಲ.ರೂ. ದಂಡ
ಎರಡನೇ ಬಾರಿ ಎಸಗುವ ತಪ್ಪಿಗೆ 7 ವರ್ಷ ಜೈಲು, 10 ಲ.ರೂ. ದಂಡ
ಹಿರಿಯರಿಗೆ ಸಂಬಂಧಿಸಿದ ಚಿತ್ರ / ವೀಡಿಯೋ ಪ್ರಕರಣ: 3 ವರ್ಷ ಜೈಲು, 10 ಲ.ರೂ. ದಂಡ
ಎರಡನೇ ಬಾರಿ ಎಸಗುವ ತಪ್ಪಿಗೆ 7 ವರ್ಷ ಜೈಲು, 10 ಲ.ರೂ. ದಂಡ
ಎಲ್ಲಿ ಎಷ್ಟು ಪ್ರಕರಣ
ಮಂಗಳೂರು ಕಮಿಷನರೆಟ್ ವ್ಯಾಪ್ತಿ- 11
ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿ -15
ಉಡುಪಿ ಜಿಲ್ಲಾ ಪೊಲೀಸ್ ವ್ಯಾಪ್ತಿ- 15
ವರದಿ: ಸಂತೋಷ್ ಬೊಳ್ಳೊಟ್ಟು