Advertisement

ಎಸ್‌ಐ ಸೇರಿ 6 ಸೆರೆ: ಚಡಚಣ ಹತ್ಯೆ ತನಿಖೆ ಅಖಾಡಕ್ಕೆ ಸಿಐಡಿ

06:00 AM Jun 20, 2018 | |

ವಿಜಯಪುರ: ಕ್ರೈಂ ವಿಷಯಾಧಾರಿತ ಸಿನಿಮಾದಂತೆ ರೋಚಕತೆ ಪಡೆದಿರುವ ಗಂಗಾಧರ ಚಡಚಣ ಹತ್ಯೆ ಪ್ರಕರಣದ ಸಿಐಡಿ ತನಿಖೆ ಮಂಗಳವಾರ ಮತ್ತಷ್ಟು ಚುರುಕು ಪಡೆದಿದೆ. ಖುದ್ದು ಎಡಿಜಿಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮತ್ತೂಂದೆಡೆ ಬಂಧಿತ
ಎಸ್‌ಐ, ಮೂವರು ಪೇದೆಗಳು ಹಾಗೂ ಹತ್ಯೆ ಆರೋಪಿಗಳಲ್ಲಿ ಇಬ್ಬರು ಸೇರಿ ಎಲ್ಲ ಆರು ಆರೋಪಿಗಳನ್ನು ನ್ಯಾಯಾಲಯ ವಿಚಾರಣೆಗಾಗಿ ಸಿಐಡಿ ವಶಕ್ಕೆ ಒಪ್ಪಿಸಿದೆ. ಮಂಗಳವಾರ ವಿಜಯಪುರಕ್ಕೆ ಆಗಮಿಸಿದ ಸಿಐಡಿ ಎಡಿಜಿಪಿ ಚರಣರಡ್ಡಿ ಅವರು, ತನಿಖೆ ನಡೆಸುತ್ತಿರುವ ತಮ್ಮ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿ ನೇರವಾಗಿ ಚಡಚಣದತ್ತ ಪ್ರಯಾಣ ಬೆಳೆಸಿದ್ದಾರೆ.

Advertisement

2017, ಅ.30ರಂದು ಧರ್ಮರಾಜ್‌ ಚಡಚಣ ಎನ್‌ ಕೌಂಟರ್‌ ನಡೆದ ಕೊಂಕಣಗಾಂವ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಅದೇ ಸ್ಥಳದಿಂದ ಗಂಗಾಧರ ಚಡಚಣನನ್ನು ತಮ್ಮ ವಶಕ್ಕೆ ಪಡೆದಿದ್ದ ಪೊಲೀಸರು, ಬಳಿಕ ಹಂತಕರಾದ ಮಹಾದೇವ ಭೈರಗೊಂಡ ಬಂಟರ ವಶಕ್ಕೆ ನೀಡಿದ್ದ ಚಡಚಣ- ಕೊಂಕಣಗಾಂವ ಮಧ್ಯೆ ಇರುವ ಅಂಬಾಭವಾನಿ ಗುಡಿ ಪರಿಶೀಲನೆ ನಡೆಸಿದರು. ಇದೇ ವೇಳೆ ಬಂಧಿತ ಎಲ್ಲ ಆರೋಪಿಗಳನ್ನು ಮಂಗಳವಾರ ಇಂಡಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.

ಬಂಧಿತ ಆರೋಪಿಗಳನ್ನು ಪ್ರಕರಣದ ಹೆಚ್ಚಿನ ತನಿಖೆಗಾಗಿ ತಮ್ಮ ವಶಕ್ಕೆ ನೀಡುವಂತೆ ಸಿಐಡಿ ಪೊಲೀಸರ ಕೋರಿಕೆ ಹಿನ್ನೆಲೆಯಲ್ಲಿ ಇಂಡಿ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾ ಧೀಶ ಅರವಿಂದ ಹಾವರಗಿ ಎಲ್ಲ ಆರೋಪಿಗಳನ್ನು ಸಿಐಡಿ ವಶಕ್ಕೆ ನೀಡಲು
ಆದೇಶಿಸಿದರು. ಹೀಗಾಗಿ ಬಂಧಿತ ಎಸ್‌ಐ ಗೋಪಾಲ ಹಳ್ಳೂರ, ಪೇದೆಗಳಾದ ಚಂದ್ರಶೇಖರ ಜಾಧವ, ಗದ್ದೆಪ್ಪ ನಾಯ್ಕೋಡಿ ಹಾಗೂ ಸಿದ್ದಾರೂಢ ರೂಗಿ, ಹತ್ಯೆ ಆರೋಪ ಹೊತ್ತಿರುವ ಹನುಮಂತ ಪೂಜಾರಿ ಹಾಗೂ ಸಿದ್ಧಗೊಂಡ ತಿಕ್ಕುಂಡಿ ಅವರನ್ನು ಸಿಐಡಿ ಪೊಲೀಸರು ತನಿಖೆಗಾಗಿ ತಮ್ಮ ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ತಮ್ಮ ವಶಕ್ಕೆ ಪಡೆದ ಬಳಿಕ ಅಜ್ಞಾನ ಸ್ಥಳಕ್ಕೆ ತೆರಳಿರುವ ಸಿಐಡಿ
ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

3 ತಿಂಗಳಲ್ಲಿ ಪೂರ್ಣ
ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಸಿಐಡಿ ಎಡಿಜಿಪಿ ಚರಣರಡ್ಡಿ, ಮೂರು ದಿನಗಳ ಹಿಂದಷ್ಟೇ ತನಿಖೆ ಆರಂಭಿಸಿದ್ದಾರೆ. ತನಿಖೆ ಕ್ರಮ ಬದಟಛಿವಾಗಿ ನಡೆದಿದ್ದು, ಮೂರು ತಿಂಗಳಲ್ಲಿ ಪೂರ್ಣಗೊಳ್ಳುವ ವಿಶ್ವಾಸವಿದೆ. ಸದರಿ ಪ್ರಕರಣದ ಕುರಿತು ಮಾಹಿತಿ ಇದ್ದಲ್ಲಿ ಯಾರು
ಬೇಕಾದರೂ ಸಿಐಡಿ ಹಾಗೂ ಎಸ್ಪಿ ಅವರಿಗೆ ಮಾಹಿತಿ ನೀಡಬಹುದು. ಇಲಾಖೆ ಅಧಿಕಾರಿ, ಸಿಬ್ಬಂದಿ ಇದ್ದರೂ ಎಲ್ಲಾ ಆರೋಪಿಗಳಂತೆಯೇ ಪರಿಗಣಿಸಲಾಗುತ್ತದೆ. ಕೊಲೆ ಆರೋಪಿಗೆ ಇರುವ ಸ್ಥಾನಮಾನವೇ ಇರುತ್ತದೆ. ಬಂಧಿತ ಆರೋಪಿಗಳನ್ನು ನಮ್ಮ ವಶಕ್ಕೆ ಪಡೆದ ನಂತರ ವಿಚಾರಣೆ ಮಾಡಿ ಸಮಗ್ರ ತನಿಖೆ ನಡೆಸಲಾಗುತ್ತದೆ ಎಂದಿದ್ದಾರೆ.

ಪೊಲೀಸ್‌ ಇಲಾಖೆ ಅಧಿಕಾರಿ, ಸಿಬ್ಬಂದಿ ಇದ್ದರೂ ಎಲ್ಲರನ್ನೂ ಇತರೆ ಕೊಲೆ ಪ್ರಕರಣದ ಆರೋಪಿಗಳಂತೆಯೇ ಪರಿಗಣಿಸಲಾಗುತ್ತದೆ. ಕೊಲೆ ಆರೋಪಿಗೆ ಇರುವ ಸ್ಥಾನಮಾನವೇ ಇರುತ್ತದೆ. ಬಂಧಿತ ಆರೋಪಿಗಳನ್ನು ನಮ್ಮ ವಶಕ್ಕೆ ಪಡೆದ ನಂತರ ವಿಚಾರಣೆ ಮಾಡಿ ಸಮಗ್ರ ತನಿಖೆ ನಡೆಸಲಾಗುತ್ತದೆ.
ಚರಣರಡ್ಡಿ, ಸಿಐಡಿ ಎಡಿಜಿಪಿ

Advertisement
Advertisement

Udayavani is now on Telegram. Click here to join our channel and stay updated with the latest news.

Next