Advertisement

ಏನಿದು ಸಿಬಿಲ್‌ ಸ್ಕೋರ್‌? ಕಾಸಿನ ಮಾತು

02:27 AM Feb 14, 2021 | Team Udayavani |

ಬ್ಯಾಂಕ್‌ ಗ್ರಾಹಕನೊಬ್ಬನ, ಸಾಲ ತೀರಿಸುವ ಸಾಮರ್ಥ್ಯ ಅಳೆಯುವ ಮಾನದಂಡವೇ “ಕ್ರೆಡಿಟ್‌ ಸ್ಕೋರ್‌’. ಅದನ್ನು “ಸಿಬಿಲ್‌ ಸ್ಕೋರ್‌’ ಎಂದೂ ಕರೆಯಲಾಗುತ್ತದೆ. ಗ್ರಾಹಕನ ಹಿಂದಿನ 6 ತಿಂಗಳುಗಳ ಬ್ಯಾಂಕ್‌ ಚಟುವಟಿಕೆ ಗಳು, ಕ್ರೆಡಿಟ್‌ ಕಾರ್ಡ್‌ ಅರ್ಜಿಗಳು, ಹಳೆಯ ಸಾಲದ ಕಂತು ಕಟ್ಟಿದ ದಿನಾಂಕ ಗಳ ಸಹಿತ ಹಲವು ಸಂಗತಿಗಳನ್ನು ಆಧರಿಸಿ ಕ್ರೆಡಿಟ್‌ ಸ್ಕೋರ್‌ ನಿಗದಿಯಾ ಗುತ್ತದೆ. ಅದನ್ನು ಲೆಕ್ಕ ಹಾಕಲು, ಖಾಸಗಿ ಥರ್ಡ್‌ ಪಾರ್ಟಿ ಸಂಸ್ಥೆಗಳೇ ಇವೆ.

Advertisement

ಬ್ಯಾಂಕ್‌ಗಳು ಇವುಗಳೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತವೆ. ಈ ಥರ್ಡ್‌ ಪಾರ್ಟಿ ಸಂಸ್ಥೆಗಳು ಅಥವಾ ಬ್ಯೂರೋ ಗಳು, ಅಂತಾರಾಷ್ಟ್ರೀಯ ಮಾನದಂಡ ಗಳಿಗೆ ಅನುಗುಣವಾಗಿ ಬ್ಯಾಂಕ್‌ ಗ್ರಾಹಕರ ಕ್ರೆಡಿಟ್‌ ಸ್ಕೋರನ್ನು ಲೆಕ್ಕ ಹಾಕುತ್ತವೆ. ಅನಂತರ ಆ ಮಾಹಿತಿ ಯನ್ನು ಬ್ಯಾಂಕ್‌ಗೆ ನೀಡುತ್ತವೆ. ಸಾಲ ನೀಡುವ ಸಂದರ್ಭದಲ್ಲಿ ಬ್ಯಾಂಕ್‌ಗಳು ಈ ಕ್ರೆಡಿಟ್‌ ರೇಟನ್ನು ಪರಿಶೀಲಿಸಿ, ಅದರ ಆಧಾರದಲ್ಲಿ ಸಾಲ ಮಂಜೂರು ಮಾಡುತ್ತವೆ. 740 ಕ್ರೆಡಿಟ್‌ ಸ್ಕೋರ್‌ ನಾವು ಶಾಲೆಗಳಲ್ಲಿ ಎದುರಿಸುವ ಪರೀಕ್ಷೆಯ ಡಿಸ್ಟಿಂಕ್ಷನ್‌ಗೆ ಸಮ. ಅದರಿಂದ ಬಹುತೇಕ ಪ್ರಯೋಜನ ಗಳನ್ನು ಪಡೆದುಕೊಳ್ಳಬಹುದು. ಅದೇ ರೀತಿ ಯಾವನೇ ವ್ಯಕ್ತಿ ಪಡೆಯಬಹು ದಾದ ಗರಿಷ್ಠ ಕ್ರೆಡಿಟ್‌ ಸ್ಕೋರ್‌ 850.

ಹೆಚ್ಚಿನ ಗ್ರಾಹಕರು, ಕ್ರೆಡಿಟ್‌ ಸ್ಕೋರ್‌ ಕಡೆಗೆ ಗಮನವನ್ನೇ ನೀಡುವುದಿಲ್ಲ. ಕ್ರೆಡಿಟ್‌ ಸ್ಕೋರ್‌ ಬಗೆಗೆನ ನಿರ್ಲಕ್ಷ್ಯ ದಿಂದ ಎದುರಾಗುವ ಸಮಸ್ಯೆಗಳತ್ತ ಕೊಂಚ ಗಮನ ಹರಿಸೋಣ.

ಕ್ರೆಡಿಟ್‌ ಕಾರ್ಡ್‌ ಕಷ್ಟ
ಕ್ರೆಡಿಟ್‌ ಕಾರ್ಡುಗಳನ್ನು ನೀಡುವಾ ಗಲೂ ಕ್ರೆಡಿಟ್‌ ಸ್ಕೋರು ಸಹಾಯಕ್ಕೆ ಬರುತ್ತದೆ. ಕಡಿಮೆ ಕ್ರೆಡಿಟ್‌ ಸ್ಕೋರ್‌ ಹೊಂದಿದವರ ಕ್ರೆಡಿಟ್‌ ಕಾರ್ಡ್‌ ಅರ್ಜಿ ತಿರಸ್ಕೃತಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಅಂದಹಾಗೆ ಕ್ರೆಡಿಟ್‌ ಕಾರ್ಡ್‌ಗಳಿಂದ ತತ್‌ಕ್ಷಣದ ಸಾಲವನ್ನು ಮಾತ್ರವಲ್ಲ; ವಸ್ತುಗಳನ್ನು ಖರೀದಿಸುವಾಗ ರಿವಾರ್ಡ್‌ ಪಾಯಿಂಟ್‌ಗಳ ಆಧಾರ ದಲ್ಲಿ ಡಿಸ್ಕೌಂಟ್‌ ಅನ್ನೂ, ಕ್ಯಾಷ್‌ ಬ್ಯಾಕ್‌, ಉಚಿತ ಉಡುಗೊರೆ, ಕೂಪನ್‌ಗಳನ್ನೂ ಪಡೆದುಕೊಳ್ಳಬಹುದು.

ಸಾಲಕ್ಕೆ ಹೆಚ್ಚಿನ ಬಡ್ಡಿ ದರ
ಕ್ರೆಡಿಟ್‌ ಸ್ಕೋರ್‌ 700 ಅಥವಾ 725ಕ್ಕಿಂತ ಕಡಿಮೆ ಇದ್ದರೆ ಸಾಲದ ಅರ್ಜಿಗೆ ಒಪ್ಪಿಗೆ ಲಭಿಸುವುದು ಕಷ್ಟ. ಒಂದು ವೇಳೆ ಬ್ಯಾಂಕ್‌ನವರು ಅರ್ಜಿಗೆ ಒಪ್ಪಿಗೆ ಸೂಚಿಸಿದರೂ ಆ ಸಾಲಕ್ಕೆ ಹೆಚ್ಚಿನ ಬಡ್ಡಿ ವಿಧಿಸುವ ಸಾಧ್ಯತೆಯಿರುತ್ತದೆ.

Advertisement

ಹೆಚ್ಚಿನ ಪ್ರೊಸೆಸಿಂಗ್‌ ಶುಲ್ಕ
ಬಡ್ಡಿ ದರವನ್ನು ಕ್ರೆಡಿಟ್‌ ಸ್ಕೋರ್‌ ಆಧಾರದಲ್ಲಿ ನಿಗದಿ ಪಡಿಸುವಂತೆಯೇ ಬ್ಯಾಂಕ್‌ಗಳು ತಮ್ಮ ಪ್ರೊಸೆಸಿಂಗ್‌ ಶುಲ್ಕವನ್ನು ಕ್ರೆಡಿಟ್‌ ಸ್ಕೋರಿನ ಆಧಾರ ದಲ್ಲಿ ಕಡಿಮೆ ಮಾಡಬಹುದು. ಸಾಲದ ಮೊತ್ತ ಹೆಚ್ಚಿದ್ದಲ್ಲಿ ಪ್ರೊಸೆಸಿಂಗ್‌ ಶುಲ್ಕವೂ ಹೆಚ್ಚಿರುತ್ತದೆ. ಉತ್ತಮ ಕ್ರೆಡಿಟ್‌ ಸ್ಕೋರ್‌ ಕಾಪಾಡಿಕೊಂಡರೆ ಗಣನೀಯ ಮೊತ್ತ ವನ್ನು ಉಳಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next