Advertisement

ಸಲಿಂಗ ದಂಪತಿಗೆ  ಪ್ರಾರ್ಥನೆಗೆ ಅವಕಾಶ

10:50 PM Feb 09, 2023 | Team Udayavani |

ಲಂಡನ್‌: ಇತಿಹಾಸದಲ್ಲಿ ಮೊದಲ ಬಾರಿಗೆ ಚರ್ಚ್‌ ಆಫ್ ಇಂಗ್ಲೆಂಡ್‌ ವಿನೂತನ ಬದಲಾವಣೆಗೆ ಸಾಕ್ಷಿಯಾಗಿದ್ದು,  ಸಲಿಂಗ ದಂಪತಿಗಳು ತಮ್ಮ ವಿವಾಹದ ಬಳಿಕ ಚರ್ಚ್‌ ನಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡುವ ಪ್ರಸ್ತಾವ‌ದ ಪರ ಚರ್ಚ್‌ ಮತಚಲಾಯಿಸಿದೆ.

Advertisement

ದೇವರನ್ನು ಪ್ರಾರ್ಥಿಸುವ ಜಾಗದಲ್ಲಿ ತಾರತಮ್ಯ,ಲಿಂಗಬೇಧದಂಥ ಅಸಮಾನತೆ ಇರಬಾರದೆಂಬ ಉದ್ದೇಶದಿಂದ ಲಂಡನ್‌ ಬಿಷಪ್‌ ಡೇಮಾ ಸಾರಾ, ಈ ಪ್ರಸ್ತಾವ‌ವನ್ನು ಮಂಡಿಸಿದ್ದರು. ವಿಚಾರ ಸಂಬಂಧಿಸಿದಂತೆ 8 ಗಂಟೆಗಳ ಅವಧಿಯ ಭಾವುಕ ಭಾಷಣದ ಬಳಿಕ ಕ್ಯಾಂಟರ್ಬರಿಯ ಆರ್ಚ್‌ಬಿಷಪ್‌ ಜಸ್ಟಿನ್‌ ವೆಲ್ಬಿ ಪ್ರಸ್ತಾವ‌ವನ್ನು ಬೆಂಬಲಿಸಿದರು. ಅನಂತರ ಚರ್ಚ್‌ ಆಫ್ ಇಂಗ್ಲೆಂಡ್‌ ಪ್ರಸ್ತಾವದ ಪರ ಮತ ಚಲಾಯಿಸಿದೆ.

ಈ ಮೂಲಕ ಸಲಿಂಗ ದಂಪ ತಿಗಳು ಇನ್ನುಮುಂದೆ ಮದುವೆ ಬಳಿಕ ಪ್ರಾರ್ಥನೆ ಸಲ್ಲಿಸಲು ಚರ್ಚ್‌ಗೆ ತೆರಳಬಹುದು.ಆದಾಗ್ಯೂ ಚರ್ಚ್‌ನಲ್ಲಿ ವಿವಾಹವಾಗಲು ಅವರಿಗೆ ಅವಕಾಶವಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next