Advertisement

ಚರ್ಚ್‌ ಹಣ ದುರ್ಬಕೆ ಫಾದರ್‌  ವಿರುದ್ಧ ಕ್ರಮಕ್ಕೆ ಆಗ್ರಹ

03:25 PM Mar 16, 2022 | Team Udayavani |

ಬೇಲೂರು: ಚರ್ಚ್‌ ಅಭಿವೃದ್ಧಿಗೆ ಸರಕಾರ ಬಿಡುಗಡೆ ಮಾಡಿದ್ದ ಹಣ ದುರ್ಬಳಕೆ ಮಾಡಿಕೊಂಡಿರುವಫಾದರ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಅರೆಹಳ್ಳಿ ಚರ್ಚ್‌ ಮುಂಭಾಗ ಕ್ರೈಸ್ತ ಸಮುದಾಯದ ಮುಖಂಡರು ಜಮಾಯಿಸಿ ಒತ್ತಾಯಿಸಿದ ಘಟನೆ ನಡೆದಿದೆ.

Advertisement

ಚರ್ಚ್‌ಗಳ ಜೀರ್ಣೋದ್ಧಾರಕ್ಕೆ ಸರ್ಕಾರ ಬಿಡುಗಡೆ ಮಾಡಿದ್ದ ಹಣವನ್ನು ಚರ್ಚ್‌ನ ಫಾದರ್‌ ದುರು ಪಯೋಗ ಪಡಿಸಿಕೊಂಡಿದ್ದಾರೆ ಎಂದು ಕ್ರೈಸ್ತ ಮುಖಂಡರು ಆರೋಪ ಮಾಡಿದ್ದಾರೆ. ತಾಲೂಕಿನ ಅರೇಹಳ್ಳಿ ಚರ್ಚ್‌ ಫಾದರ್‌, ವಿಸೆಂಟ್‌ ಮರ್ಸೆಲ್‌ ಪಿಂಟು ವಿರುದ್ಧ ಕ್ರೈಸ್ತ ಸಮುದಾಯದವರೇ ಆರೋಪ ಮಾಡುತ್ತಿದ್ದು, ಹಣದ ಬಗ್ಗೆ ಲೆಕ್ಕ ಕೇಳಿದ್ದಕ್ಕೆ ಕಳೆದ ಐದು ದಿನಗಳಿಂದ ಫಾದರ್‌ ನಾಪತ್ತೆಯಾಗಿದ್ದು, ಫೋನ್‌ ಸ್ವಿಚ್‌ ಆಫ್ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

1 ಕೋಟಿಗೂ ಹೆಚ್ಚು ಹಣ ದುರುಪಯೋಗ:

ಅರೇಹಳ್ಳಿಯಲ್ಲಿರುವ ಚರ್ಚ್‌ ಅಭಿವೃದ್ಧಿಗೆ ಕಳೆದ ಒಂದು ವರ್ಷದ ಹಿಂದೆ ಸರ್ಕಾರ ಮೂರು ಕೋಟಿಹಣ ಬಿಡುಗಡೆ ಮಾಡಿತ್ತು. ಇದಲ್ಲದೇ ಅರೇಹಳ್ಳಿಚರ್ಚ್‌ನ ಉಪಕೇಂದ್ರಗಳಾದ ಹೊಸಮನೆ, ಮಲಸಾವರ, ಬಿಕ್ಕೋಡು ಗ್ರಾಮಗಳಲ್ಲಿರುವ ಚರ್ಚ್ ಗಳ ಜೀರ್ಣೋ ದ್ಧಾರಕ್ಕೂ ಸರ್ಕಾರ ಹಣ ನೀಡಿತ್ತು. ಆದರೆ, ಚರ್ಚ್‌ನ ಫಾದರ್‌ ವಿಸೆಂಟ್‌ ಮರ್ಸೆಲ್‌ಪಿಂಟು ಅರ್ಧದಷ್ಟು ಹಣ ಮಾತ್ರ ಚರ್ಚ್‌ ಅಭಿವೃದ್ಧಿಗೆ ಬಳಕೆ ಮಾಡಿದ್ದು, ಸುಮಾರು ಒಂದುಕೋಟಿಗೂ ಹೆಚ್ಚು ಹಣ ಕಬಳಿಸಿದ್ದಾರೆ ಎಂದು ಕ್ರೈಸ್ತ ಸಮುದಾಯದವರು ಆರೋಪಿಸಿದ್ದಾರೆ.

ಫಾದರ್‌ ನಾಪತ್ತೆ: ಚರ್ಚ್‌ನ ಕಾರ್ಯದರ್ಶಿ ಲಿಯೋ ಪಿಂಟೋ ಅವರಿಂದ ಸುಮಾರು ಐದಕ್ಕೂಹೆಚ್ಚು ಖಾಲಿ ಚೆಕ್‌ಗಳಿಗೆ ಸಹಿ ಹಾಕಿಸಿಕೊಂಡು ಹಣ ಡ್ರಾ ಮಾಡಿದ್ದಾರೆ. ಅಲ್ಲದೇ ಚರ್ಚ್‌ಗಳ ಕಾಮ ಗಾರಿತಮ್ಮ ಸ್ವಂತ ತಮ್ಮನಿಗೆ ಗುತ್ತಿಗೆ ನೀಡಿದ್ದು ಕಾಮಗಾರಿ ಕಳಪೆಯಿಂದ ಕೂಡಿದ್ದು, ಈ ಬಗ್ಗೆ ಸಮುದಾಯದವರು ಫಾದರ್‌ ಬಳಿ ಹಣದ ಲೆಕ್ಕ ಕೇಳಿದ್ದಕ್ಕೆ ಅರೇಹಳ್ಳಿ ಪೊಲೀಸ್‌ ಠಾಣೆಯಲ್ಲಿ ಕ್ರೈಸ್ತ ಸಮುದಾಯದವರ ಮೇಲೆ ದೂರು ನೀಡಿದ್ದಾರೆ.

Advertisement

ಈ ವಿಷಯ ತಿಳಿದ ನಂತರ ಸಮುದಾಯದವರು ತಮ್ಮ ವಿರುದ್ಧ ತಿರುಗಿಬೀಳುವ ಆತಂಕದಿಂದ ಕಳೆದ ಐದು ದಿನಗಳಿಂದನಾಪತ್ತೆಯಾಗಿದ್ದಾರೆ ಎಂದು ಕ್ರೈಸ್ತ ಸಮುದಾಯದವರು ಫಾದರ್‌ ವಿರುದ್ಧ ಆರೋಪಿಸಿದ್ದಾರೆ.

ಹಣ ವಸೂಲು ಮಾಡಿ: ಕ್ರೈಸ್ತ ಸಮುದಾಯದ ಮುಖಂಡ ಸ್ಟಾನಿ ಮಾತನಾಡಿ, ಹಣ ದುರಪಯೋಗಅಗಿರುವ ಬಗ್ಗೆ ಚರ್ಚ್‌ನ ಧರ್ಮಾಧ್ಯಕ್ಷರಿಗೆ ದೂರುನೀಡಲಾಗಿದೆ. ಕೂಡಲೇ ಫಾದರ್‌ ಬಳಿ ಹಣ ವಸೂಲು ಮಾಡಬೇಕೆಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next