Advertisement

ದುಷ್ಕರ್ಮಿಗಳಿಂದ ಚರ್ಚ್ ಮೇಲೆ ದಾಳಿ ; ಮಾಜಿ ಶಾಸಕ ಕೆ.ವೆಂಕಟೇಶ್ ಭೇಟಿ

09:21 PM Dec 28, 2022 | Team Udayavani |

ಪಿರಿಯಾಪಟ್ಟಣ : ಮಂಗಳವಾರ ರಾತ್ರಿ ಅಪರಿಚಿತ ದುಷ್ಕರ್ಮಿಗಳಿಂದ ಚರ್ಚ್ ನ ಬಾಲಯೇಸು ಪ್ರತಿಮೆ ಸೇರಿದಂತೆ ಹಲವಾರು ಉಪಕರಣಗಳನ್ನು ಧ್ವಂಸ ಗೊಳಿಸಿರುವ ಘಟನೆ ಬೆಳಕಿಗೆ ಬಂದಿದೆ.

Advertisement

ಪಟ್ಟಣದಲ್ಲಿ ಗೋಣಿಕೊಪ್ಪ ರಸ್ತೆಯಲ್ಲಿ ಹೊಂದಿಕೊಂಡಂತೆ ಇರುವ ಸೆಂಟ್ ಮೇರಿ ಚರ್ಚ್ ನಲ್ಲಿ ಈ ಕೃತ್ಯ ವೆಸಗಿದ್ದು ಉದ್ದೇಶಪೂರ್ವಕವಾಗಿ ನಡೆಸಲಾಗಿದೆ ಎಂದು ತಿಳಿಸಲಾಗಿದೆ.

ಭಾನುವಾರದಂದು ನಡೆದ ಕ್ರಿಸ್ಮಸ್ ಪ್ರಯುಕ್ತ ಬಂದು ಹೋಗುವ ಭಕ್ತರಿಗೆ ಅನುಕೂಲವಾಗಲೆಂದು ಹಲವಾರು ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಆದರೆ ಫಾದರ್ ಜಾನ್ ಪೌಲ್ ಒಳಗೆ ಹೋಗಿ ನೋಡಿದಾಗ ಎಂಟು ಧ್ವನಿ ವರ್ಧಕಗಳು, ಟೇಬಲ್ ಮತ್ತು ಹೂಕುಂಡಗಳು. ಸೀರಿಯಲ್ ಸೆಟ್ ಗಳನ್ನು ನಾಶಪಡಿಸಲಾಗಿತ್ತು ಎಂದು ತಿಳಿಸಿದ್ದಾರೆ.

ಮಾಜಿ ಶಾಸಕ ಕೆ.ವೆಂಕಟೇಶ್ ಭೇಟಿ
ಘಟನೆ ವಿಷಯ ತಿಳಿದು ಬುಧವಾರ ಮಧ್ಯಾಹ್ನ ಚರ್ಚ್ ಗೆ ಭೇಟಿ ನೀಡಿದ ಮಾಜಿ ಶಾಸಕ ಕೆ.ವೆಂಕಟೇಶ್ ಅವರು ಫಾದರ್ ಜಾನ್ ಪೌಲ್ ಅವರೊಂದಿಗೆ ಮಾತುಕತೆ ನಡೆಸಿ ಸ್ಥಳದಲ್ಲಿದ್ದ ಪೊಲೀಸರಿಂದ ಮಾಹಿತಿ ಪಡೆದುಕೊಂಡರು, ಇವಳೆ ಮಾತನಾಡಿದ ಅವರು ಕೃತ್ಯ ಎಸಗಿದವರು ಯಾರೇ ಆಗಿದ್ದರೂ ಪೊಲೀಸರು ಶೀಘ್ರ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ನನ್ನ 35 ವರ್ಷಗಳ ರಾಜಕೀಯ ಅವಧಿಯಲ್ಲಿ ಈ ರೀತಿಯ ಯಾವುದೇ ಕೃತ್ಯಗಳು ನಡೆದಿರಲಿಲ್ಲ, ಸಮಾಜದಲ್ಲಿ ಶಾಂತಿ ವಾತಾವರಣ ನಿರ್ಮಿಸಲು ಪೊಲೀಸರು ಅಗತ್ಯ ಕ್ರಮ ಕೈಗೊಳ್ಳಬೇಕು, ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಸೇರಿದಂತೆ ಸರ್ವ ಧರ್ಮದವರು ಸಮನ್ವಯದಿಂದ ಬಾಳಿ ತಾಲೂಕಿನಲ್ಲಿ ಶಾಂತಿ ವಾತಾವರಣ ಉಂಟಾಗಬೇಕು, ಘಟನೆ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಹಿತಿ ನೀಡಿ ಕಾನೂನು ಕ್ರಮಕ್ಕೆ ಆಗ್ರಹಿಸುವುದಾಗಿ ತಿಳಿಸಿದರು.

Advertisement

ಈ ಸಂದರ್ಭ ಫಾದರ್ ಜಾನ್ ಪೌಲ್, ಪುರಸಭಾ ಸದಸ್ಯರಾದ ಮಂಜುನಾಥ್, ರವಿ, ಮುಖಂಡರಾದ ಹೊಲದಪ್ಪ, ಕೆಲ್ಲೂರು ನಾಗರಾಜ್, ಅಶೋಕ್ ಕುಮಾರ್ ಗೌಡ, ಎಂ.ಮಂಜು, ವಕೀಲ ಭಾಸ್ಕರ್, ರಾಜೇಶ್, ಗೋವಿಂದ್, ಲೋಕೇಶ್, ವಸಂತ್ ಕುಮಾರ್ ಕ್ರಿಶ್ಚಿಯನ್ ಮುಖಂಡರಾದ ಅಣ್ಣಮ್ಮ, ರಾಜಣ್ಣ, ವರ್ಕಿ ಮ್ಯಾಥ್ಯು, ಜಾನ್ಸನ್, ವರ್ಗಿಸ್ ಮತ್ತಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next