Advertisement

ಕ್ರಿಸಾಲಿಸ್‌ ಥಿಂಕ್‌ರೂಂ ವಸ್ತು ಪ್ರದರ್ಶನ

12:49 PM Dec 23, 2018 | Team Udayavani |

ಕಲಬುರಗಿ: ಹೈಕ ಭಾಗದ ಪ್ರತಿಷ್ಠಿತ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಶರಣಬಸವೇಶ್ವರ ವಸತಿ ಪಬ್ಲಿಕ್‌ ಶಾಲೆಯಲ್ಲಿ ಎರಡು ದಿನಗಳ ಕಾಲ ಕ್ರಿಸಾಲಿಸ್‌ ವೈಚಾರಿಕ ವಸ್ತುಪ್ರದರ್ಶನ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳಲ್ಲಿನ ವಿಜ್ಞಾನ ವಿಚಾರ ಅನಾವರಣಗೊಂಡಿತು.

Advertisement

ವಿದ್ಯಾರ್ಥಿಗಳು ಪಠ್ಯಕ್ಕೆ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸ್ವಂತ ಆಲೋಚಿಸುವ ಅಭಿರುಚಿ ಬೆಳೆಸುವ ನಿಟ್ಟಿನಲ್ಲಿ ಶರಣಬಸವೇಶ್ವರ ವಸತಿ ಪಬ್ಲಿಕ್‌ ಶಾಲೆ ಹಾಗೂ ಕ್ರಿಸಾಲಿಸ್‌ ತಂಡದ ಸಹಯೋಗದಲ್ಲಿ ವೈಚಾರಿಕ ವಸ್ತು ಪ್ರದರ್ಶನವನ್ನು ಮಾಂಟೆಸರಿಯಿಂದ 4ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿತ್ತು.

ಮೊದಲನೆ ದಿನದ ವಸ್ತುಪ್ರದರ್ಶನವನ್ನು ಎಸ್‌ಪಿ ಶಶಿಕುಮಾರ ಅವರ ತಾಯಿ ಲೋಕಮಾತಾ ಉದ್ಘಾಟಿಸಿದರು. ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು ಪತ್ನಿ ಜಯಶ್ರೀ ಬಿ. ಮತ್ತಿಮಡು ಮೂಡ ಅತಿಥಿಯಾಗಿ ಆಗಮಿಸಿದ್ದರು.

ಎರಡನೇ ದಿನದ ವಸ್ತುಪ್ರದರ್ಶನವನ್ನು ಶರಣಬಸವ ವಿವಿ ಇಂಜಿನೀಯರಿಂಗ್‌ ಮತ್ತು ತಾಂತ್ರಿಕ ವಿಭಾಗದ ಜಯಸುಧಾ ಎನ್‌. ನೀಲಿ ಉದ್ಘಾಟಿಸಿದರು. ಗೋದುತಾಯಿ ಮಹಿಳಾ ವಿಭಾಗದ ಇಂಜಿನೀಯರಿಂಗ್‌ ಕಾಲೇಜಿನ ಪ್ರೊ| ಶೀತಲ್‌ ಎಸ್‌. ಪಾಟೀಲ ಅತಿಥಿಯಾಗಿದ್ದರು. ಪ್ರಾಥಮಿಕ ವಿಭಾಗದ ಮುಖ್ಯಸ್ಥರಾದ ಶಾರದಾ ರಾಂಪೂರೆ, ನಂದಾ ಪಾಟೀಲ, ಸಂಗೀತಾ ಸಾಹು, ಸುರೇಖಾ ಖೇಣಿ, ಕ್ರಿಸಾಲಿಸ್‌ ತಂಡದ ಸಂಯೋಜಕರಾದ ವೈದಿಶ್ವರನ್‌, ವಿಪಿನ್‌ದಾಸ್‌ ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next