Advertisement
ಇಪ್ಪತ್ತು ಶತಮಾನಗಳು ಕಳೆದು ನಾವಿಂದು ಇಪ್ಪತ್ತೂಂದನೇ ಶತಮಾನದಲ್ಲಿದ್ದೇವೆ. ಇಷ್ಟೊಂದು ಸುದೀರ್ಘಾವಧಿಯಲ್ಲಿ ಹಲವು ವೈರಸ್‌ಗಳು ಕಾಣಿಸಿಕೊಂಡು ಮಾನವ ಬದುಕನ್ನು ಸತತವಾಗಿ ಗೋಳುಹೊಯ್ದುಕೊಳ್ಳುತ್ತಿವೆ. ಯುದ್ಧಗಳು, ಚಿತ್ರ ಹಿಂಸೆ, ಬಡವರನ್ನು ಒಕ್ಕಲೆಬ್ಬಿಸಿ ಬೀದಿಪಾಲಾಗಿಸಿ ನಿತ್ಯವಲಸಿಗರನ್ನಾಗಿ ಮಾಡುವ ಹುನ್ನಾರಗಳು, ಭಯೋತ್ಪಾದನೆ, ಹಸಿವು, ಉಗ್ರವಾದ ಮುಂತಾದ ಕಣ್ಣಿಗೆ ಹೊಡೆಯುವ ಹಿಂಸಾರತಿಗಳೊಂದಿಗೆ ಹೆಗಲನ್ನು ಹೊಸೆಯುತ್ತ ಸಮಾಜವು ತನ್ನ ಬಗಲಿಗೆ ಕಟ್ಟಿಕೊಂಡಿರುವ ಕೆಲವೊಂದು ಕಂದಾಚಾರಗಳಿಂದಾಗಿ ಮುಖ್ಯವಾಹಿನಿಯಿಂದ ಬದಿಗೆ ತಳ್ಳಲ್ಪಟ್ಟಿರುವ ಜನರ ಬದುಕು-ಬವಣೆಗಳು ಮಾನವ ಸಮಾಜಕ್ಕೆ ಸೋಂಕುರೋಗಗಳಂತೆ ಅಂಟಿಕೊಂಡು ಬಂದಿರುವ ಇನ್ನಿತರ ಹಲವು ವೈರಸ್‌ಗಳಾಗಿವೆ.
Related Articles
ತೃಣದಲ್ಲಾಗಲಿ ಕಣದಲ್ಲಾಗಲಿ, ಭ್ರೂಣದಲ್ಲಾಗಲಿ ತ್ರಾಣದಲ್ಲಾಗಲಿ ಇರುವ ಜೀವ, ನಡೆಯುವ, ಹರಿದಾಡುವ, ಹಾರುವ, ಜಿಗಿಯುವ, ವಿಲವಿಲ ಒದ್ದಾಡುವ ಜೀವವೆಲ್ಲ ಒಂದೇ ಮೂಲದಿಂದ ಬಂದಿವೆ. ವರ್ಣ, ಜಾತಿ ಕಟ್ಟುಪಾಡುಗಳನ್ನೆಲ್ಲ ಮೀರಿ ಕಲುಷಿತ ಮನಗಳ ವ್ಯವಸ್ಥೆಯನ್ನು ಹಿಸುಕಿ ಹಾಕಿ, “ಇವ ನಮ್ಮವ’ ಎಂಬ ಭಾವನೆಯನ್ನು ಸಮಾಜದಲ್ಲಿ ಸಾಕಾರಗೊಳಿಸುವ ದೈವಿಕ ದಿವ್ಯ ಏರ್ಪಾಡು ಕ್ರಿಸ್ಮಸ್ ಹಬ್ಬದ ಧ್ವನಿತಾರ್ಥ ಎನ್ನಬಹುದು. ದೇವಮಾನವ ಯೇಸುವಿನ ಜನ್ಮದಿನ ವನ್ನು ಸ್ಮರಿಸುವ, ಸೇವಾ ಮನೋಭಾವವನ್ನು ಉದ್ದೀಪಿಸುವ ಹಬ್ಬವೇ ಕ್ರಿಸ್ಮಸ್.
Advertisement
ಚರಿತ್ರೆಯ ಮೇಲೆ ಅತ್ಯಂತ ದಟ್ಟ ಪ್ರಭಾವ ಬೀರಿದ ಚೇತನದ ಜನನ ದನದ ಹಟ್ಟಿಯಲ್ಲಾಯಿತು ಎಂಬುದೇ ಮಾನವ ಚರಿತ್ರೆಯ ಒಂದು ರೋಚಕ ಘಟನೆ. ಇಂತಹ ಸರಳ ಘಟನೆಯನ್ನು ಮೆಲು ಕಾಡುವ ರೋಮಾಂಚಕ ನೆನಪೇ ಕ್ರಿಸ್ಮಸ್. ಅದೊಂದು ಮಗು ಹುಟ್ಟಿದ ಕಥೆ, ಪುಣ್ಯ ಕಥೆ. ಆದುದರಿಂದಲೇ ಅತ್ಯಂತ ಆಪ್ತ, ನಿಸ್ವಾರ್ಥ, ಗಾಢ, ಮಮತಾಪೂರ್ಣ ಸಂಬಂಧವನ್ನು ಸೂಚಿಸಲು ತಾಯಿ-ಮಗುವಿನ ರೂಪಕವನ್ನೇ ಕ್ರಿಸ್ಮಸ್ ಹಬ್ಬದಲ್ಲಿ ಬಳಸುವುದು ವಾಡಿಕೆ. ಇಂತಹ ಹೆಂಗರುಳಿನ ಸಂಬಂಧವನ್ನು ಸೂಚಿಸುವ ಹಬ್ಬವೇ ಕ್ರಿಸ್ಮಸ್. ಪ್ರತಿಯೊಬ್ಬನೂ ತನ್ನಲ್ಲಿ ಒಂದು ಹೆಂಗರುಳನ್ನು ಮೂಡಿಸಿ, ತನ್ನವರಲ್ಲ ದವರನ್ನು, ಹತಭಾಗ್ಯರನ್ನು ಕೂಡ ತನ್ನ ಸ್ವಂತ ಕರುಳಿನಲ್ಲಿಟ್ಟು ಅವರ ನೋವು, ಸಂಕಷ್ಟಗಳಿಗೆ ಮಮತಾಪೂರ್ಣವಾಗಿ ಸ್ಪಂದಿಸಬೇಕು. ಇನ್ನೊಬ್ಬನು ತನಗೆ ಪ್ರತಿಸ್ಪರ್ಧಿಯಲ್ಲ, ಶತ್ರುವಲ್ಲ, ತನಗಿಂತ ಕೀಳಲ್ಲ, ಇತರರು ತನ್ನ ಲಾಲನೆಪಾಲನೆಗೊಳಗಾಗುವ ಮಗುವಾಗಬೇಕು ಎಂಬ ಆಶಯವನ್ನು ಹೊಂದಿ ರುವ ಹಬ್ಬವೇ ಕ್ರಿಸ್ಮಸ್.
ಯೇಸುವಿನ ಕೊಡುಗೆ ಅನನ್ಯಯೇಸು ಬೋಧನೆಯಂತೆಯೇ, ಅವನ ಬದುಕು ಸಹಾ ನಿತ್ಯ ಪ್ರಸ್ತುತವೆನ್ನಬಹುದು. ಚರಿತ್ರೆ ಯನ್ನು ನಿರ್ಮಿಸುವುದು ಗಡಿಯಾರವಲ್ಲ, ಮಾನವ. ಚರಿತ್ರೆಯು ಯಾಂತ್ರಿಕಗತಿಯಲ್ಲ. ಮಾನವನು ಅರಳುವುದು, ಬೆಳೆಯುವುದು ಮಾನವೀಯ ಕ್ಷಣಗಳಲ್ಲಿ. ಸೊಬಗನ್ನೂ ಪ್ರೇಮವನ್ನೂ ಅನು ಭವಿಸುವ ವ್ಯಕ್ತಿಗೆ ಒಂದು ತಾಸು ಒಂದು ಕ್ಷಣವೆ ನಿಸುತ್ತದೆ. ಅದೇ ಮಾನವೀಯ ಕಾಲ. ಯಾಂತ್ರಿಕ ಕಾಲಕ್ಕೆ ಸುಂದರ ಕ್ಷಣಗಳು ಮಾನವೀಯ ಆಯಾ ಮವನ್ನು ಒದಗಿಸುತ್ತವೆೆ. ಚರಿತ್ರೆಯು ಮಾನ ವೀಯ ಕಾಲವಾಗಬೇಕು. ಸ್ನೇಹ, ಬಂಧುತ್ವ, ಪ್ರೇಮ, ನ್ಯಾಯದ ಕ್ಷಣಗಳೇ ಚರಿತ್ರೆಯಾದಾಗ, ಅದೇ ಯೇಸು ಬೋಧಿಸಿದ ದೇವರಾಜ್ಯ. ಮನುಷ್ಯ ರೆಲ್ಲ ಒಡಗೂಡಿ ಕಾಲವನ್ನು ಮಾನವೀಯ ಚರಿತ್ರೆ ಯನ್ನಾಗಿ ಮಾಡಲು ಹವಣಿಸುತ್ತಾರೋ ಅಂದೇ ಮುಕ್ತಿ. ಎಲ್ಲರ ಹೊಟ್ಟೆಯು ತಣ್ಣಗಿರಬೇಕು ಎಂಬ ಮಾನವೀಯ ಆಶಯವೇ ಯೇಸು ಬೋಧನೆಯ ಸಾರಸರ್ವಸ್ವ. ಮಾನವನ ಅರಳುವಿಕೆಯಲ್ಲಿ ಯೇಸುವಿನ ಕೊಡುಗೆಯು ಅನನ್ಯ. ಚರಿತ್ರೆಯ ಪುಟಗಳಲ್ಲಿ ಸಾಲುಗಟ್ಟಿ ಹೋದ ಸೈನ್ಯಗಳು, ರಾಜರು, ಸಂಸತ್ತುಗಳಲ್ಲಿ ಸಭೆ ಸೇರಿದ ಕಾನೂನು ರೂಪಕರು, ಇವರೆಲ್ಲ ಸೇರಿಯೂ ಯಾವನು ಕೂಡ ಲೋಕದ ಜನರನ್ನು ಈ ಓರ್ವ ವ್ಯಕ್ತಿಯಷ್ಟು ಬದಲಾಯಿಸಲಿಲ್ಲ. ಕರುಣಾಳು ಬಾ ಬೆಳಕೇ! ಫಾ| ಪ್ರಶಾಂತ್ ಮಾಡ್ತ