Advertisement

Christmas, ಹೊಸ ವರ್ಷಾಚರಣೆ; ಪ್ರವಾಸಿಗರ ಸಂಖ್ಯೆ ಹೆಚ್ಚಳ; ಗೋವಾ ಪ್ರಯಾಣ ದರ ಏರಿಕೆ

12:29 PM Dec 12, 2023 | Team Udayavani |

ಪಣಜಿ: ಕ್ರಿಸ್ಮಸ್ ಹಬ್ಬ ಹಾಗೂ ಹೊಸ ವರ್ಷವನ್ನು ಸ್ವಾಗತಿಸಲು ದೇಶ-ವಿದೇಶಗಳಿಂದ ಪ್ರವಾಸಿಗರು ಪ್ರತಿ ವರ್ಷ ಡಿಸೆಂಬರ್‍ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗೋವಾಕ್ಕೆ ಆಗಮಿಸುತ್ತಾರೆ.

Advertisement

ಈ ಅವಧಿಯಲ್ಲಿ ವಿಮಾನ ಪ್ರಯಾಣ, ಬಸ್ ಪ್ರಯಾಣ ಮತ್ತು ಹೋಟೆಲ್ ರೂಂ ದರಗಳು ಸಹ ಹೆಚ್ಚಾಗುತ್ತವೆ. ಕಳೆದ ವರ್ಷವೂ ವಿಮಾನ ಟಿಕೆಟ್‍ ದರ ಹೆಚ್ಚಳವಾಗಿತ್ತು. ಲಭ್ಯವಿರುವ ಮಾಹಿತಿ ಪ್ರಕಾರ ಈ ವರ್ಷ ವಿಮಾನ ಪ್ರಯಾಣದ ಟಿಕೇಟ್ ದರ ಶೇ.17ರಷ್ಟು ಏರಿಕೆಯಾಗಿದೆ.

ದೆಹಲಿ-ಬೆಂಗಳೂರು, ದೆಹಲಿ-ಶ್ರೀನಗರ ಜೊತೆಗೆ ಗೋವಾ ವಿಮಾನ ಪ್ರಯಾಣ ದುಬಾರಿಯಾಗಿದೆ. ಕ್ರಿಸ್ಮಸ್ ಮತ್ತು ಹೊಸ ವರ್ಷವನ್ನು ಸ್ವಾಗತಿಸಲು ಗೋವಾ ಪ್ರತಿಯೊಬ್ಬರ ನೆಚ್ಚಿನ ಪ್ರವಾಸಿ ತಾಣವಾಗಿದೆ.

ಇತರ ಪ್ರಮುಖ ನಗರಗಳಲ್ಲಿ ದೆಹಲಿಯಿಂದ ಗೋವಾ ವಿಮಾನ ಟಿಕೆಟ್ ದುಬಾರಿಯಾಗಿದೆ. ದೇಶೀಯ ಪ್ರವಾಸಿಗರಲ್ಲಿ ದೆಹಲಿ ಪ್ರವಾಸಿಗರು ಗೋವಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವುದೇ ಇದಕ್ಕೆ ಕಾರಣ. ಇದರಿಂದಾಗಿ ದೆಹಲಿ ಪ್ರಯಾಣ ಶೇ.17ರಷ್ಟು ದುಬಾರಿಯಾಗಿದೆ.

ಕ್ರಿಸ್‍ಮಸ್ ಮತ್ತು ಹೊಸ ವರ್ಷದ ಹೊರತಾಗಿ ಈ ತಿಂಗಳು ಗೋವಾದಲ್ಲಿ ಹಲವು ಕಾರ್ಯಕ್ರಮಗಳು ನಡೆಯಲಿವೆ. ಮುಖ್ಯವಾಗಿ ಕರಾವಳಿ ಪ್ರದೇಶಗಳಲ್ಲಿ ವಿವಿಧ ನೃತ್ಯ ಮತ್ತು ಸಂಗೀತ ಕಾರ್ಯಕ್ರಮಗಳು ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆಯಾಗಿದೆ.

Advertisement

ಡಿಸೆಂಬರ್ 15 ರಿಂದ ಪಣಜಿಯಲ್ಲಿ ಸೆರೆಂಡಿಪಿಟಿ ಆಟ್ರ್ಸ್ ಫೆಸ್ಟಿವಲ್ ಪ್ರಾರಂಭವಾಗಲಿದೆ. ಇದರಲ್ಲಿ ನೀವು ವಿವಿಧ ರೀತಿಯ ಕಲೆಯ ಅನುಭವವನ್ನು ಪಡೆಯುತ್ತೀರಿ. ಇದರೊಂದಿಗೆ ಕೊನೆಯ ವಾರದಲ್ಲಿ ಸನ್ ಬರ್ನ್ ಫೆಸ್ಟಿವಲ್ ಕೂಡ ನಡೆಯಲಿದೆ.

ಹೊಸ ವರ್ಷದ ಸಂಭ್ರಮಾಚರಣೆಗೆ ಗೋವಾದ ವಿವಿದೆಡೆ ಕಾರ್ಯಕ್ರಮಗಳು ಕೂಡ ನಡೆಯಲಿದೆ. ಆದರೆ ಈ ತಿಂಗಳು ಗೋವಾಕ್ಕೆ ಆಗಮಿಸುವ ಪ್ರವಾಸಿಗರು ಹೆಚ್ಚಿನ ಪ್ರಯಾಣ ದರ ಖರ್ಚು ಮಾಡುವುದು ಅನಿವಾರ್ಯ ಎಂಬಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next