Advertisement

ಕ್ರಿಸ್ಮಸ್‌ ಸಾಮ್ರಾಜ್ಯ:ರಂಗೇರಿದ ರಾಜಧಾನಿ 

03:09 PM Dec 22, 2018 | |

ಬದುಕಿನ ಜೋಳಿಗೆಯಲ್ಲಿ ಕನಸನ್ನು ತುಂಬುವ ಸಾಂತಾಕ್ಲಾಸ್‌, ಬಾಯಿ ಸಿಹಿ ಮಾಡುವ ಕೇಕ್‌… ಕ್ರಿಸ್ಮಸ್‌ನ ರಂಗಿಗೆ ಇಷ್ಟೇ ಕಾರಣವೇ? ಮೈತುಂಬಾ ಬೆಳಕನ್ನು ಹೊದ್ದು, ಶಾಂತಿಯನ್ನು ಪಸರಿಸುವ ಟ್ರೀ, ಅಲಂಕಾರಿಕ ವಸ್ತು, ಬಗೆಬಗೆಯ ಶಾಪಿಂಗ್‌, ಚಳಿಯಲ್ಲಿ ನಾಲಿಗೆಗೆ ಹಿತ ಉಣಿಸುವ ಹೊಸ ಸ್ವಾದ… ಪಟ್ಟಿಮಾಡುತ್ತಾ ಹೋದರೆ, ಕ್ರಿಸ್ಮಸ್‌ನ ವೈಯ್ನಾರ ಮುಗಿಯುವುದೇ ಇಲ್ಲ. ಈಗ ಇಡೀ ರಾಜಧಾನಿಯ ಯಾವ ದಿಕ್ಕಿಗೇ ಹೋದರೂ, ಕ್ರಿಸ್ಮಸ್‌ನ ಹೊನಲು ಆಕರ್ಷಣೆಯಾಗಿ ತೋರುತಿದೆ. ಎಲ್ಲೆಲ್ಲಿ ಏನೇನು ವಿಶೇಷಗಳಿವೆ?

Advertisement

“ಕ್ರಿಸ್ಮಸ್‌ ವರ್ಲ್ಡ್’ಗೆ ಬನ್ನಿ
ಈ ಲೋಕದೊಳಗೆ ಹೋದವರಿಗೆ, ಎಲ್ಲಿಗೆ ಬಂದೆವಪ್ಪಾ ನಾವು ಎಂದು ಅಚ್ಚರಿಯಾಗಬಹುದು. ಇಲ್ಲಿನ ವಾತಾವರಣದ ತುಂಬ ಕ್ರಿಸ್ಮಸ್‌ ಸಂಭ್ರಮ ಮನೆ ಮಾಡಿದ್ದು, ಗಾಳಿಯಲ್ಲೆಲ್ಲಾ ಕೇಕ್‌ನ ಘಮ ತುಂಬಿದೆ. ಕ್ರಿಸ್ಮಸ್‌ ಟ್ರೀ, ಕ್ಯಾಂಡಲ್‌, ಅಲಂಕಾರಿಕ ವಸ್ತುಗಳು, ಸಾಂತಾ ಕ್ಲಾಸ್‌, ಗೊಂಬೆ, ಉಡುಗೊರೆಗಳು, ಬಗೆಬಗೆಯ ಕೇಕ್‌ಗಳು…ಹೀಗೆ ಕ್ರಿಸ್ಮಸ್‌ ಶಾಪಿಂಗ್‌ ವಸ್ತುಗಳೆಲ್ಲಾ ಒಂದೇ ಸೂರಿನಡಿಯಲ್ಲಿ ದೊರೆಯುವ, “ವರ್ಲ್ಡ್ ಆಫ್ ಕ್ರಿಸ್ಮಸ್‌’ ಮಳಿಗೆ ಹಬ್ಬದ ಸಂಭ್ರಮವನ್ನು ಹೆಚ್ಚಿಸಲಿದೆ. ಇದೇ ಮೊದಲ ಬಾರಿಗೆ ಭಾರತದಲ್ಲಿ, ಸಂಪೂರ್ಣವಾಗಿ ಯುರೋಪಿಯನ್‌ ಶೈಲಿಯಲ್ಲಿ ಶುರುವಾದ ಮಾರುಕಟ್ಟೆ ಇದಾಗಿದ್ದು, ವಿಶ್ವಾದ್ಯಂತದ ಕ್ರಿಸ್ಮಸ್‌ ಖಾದ್ಯಗಳನ್ನು ಸವಿಯುವ ಅವಕಾಶ ಲಭಿಸಲಿದೆ. ಪ್ರಸಿದ್ಧ ಶೆಫ್ಗಳು ಬಗೆಬಗೆಯ ತಿನಿಸುಗಳನ್ನು ಬಡಿಸಲಿದ್ದಾರೆ. 35 ವಿಶಿಷ್ಟ ಮಳಿಗೆಗಳ ಜೊತೆಗೆ, ವೈವಿಧ್ಯಮಯ ಲೈವ್‌ ಶೋಗಳು ಕೂಡ ನಡೆಯಲಿವೆ.

ಎಲ್ಲಿ?:ಫೀನಿಕ್ಸ್‌ ಮಾರ್ಕೆಟ್‌ ಸಿಟಿ, ವೈಟ್‌ಫೀಲ್ಡ್‌
ಯಾವಾಗ?: ಡಿ.22-25, ಮಧ್ಯಾಹ್ನ 1-10
ಪ್ರವೇಶ ದರ: 100 ರೂ.

ಜಿಂಗಲ್‌- ಮಿಂಗಲ್‌ನಲ್ಲಿ ಸ್ನೋ ಫಾಲ್‌! 
ಬೆಂಗಳೂರಿನಲ್ಲಿ ಸ್ನೋ ಫಾಲ್‌ ಆಗ್ತಾ ಇದೆ! ಅರೆ, ಎಲ್ಲಿ ಅಂತಿದ್ದೀರಾ? ಕಿಡ್ಸ್‌ ಅಡ್ಡಾದಲ್ಲಿ ಮಕ್ಕಳಿಗಾಗಿ, ಜಿಂಗಲ್‌- ಮಿಂಗಲ್‌ ಕ್ರಿಸ್ಮಸ್‌ ಪಾರ್ಟಿ ನಡೆಯುತ್ತಿದ್ದು, ಅದರ ಪ್ರಮುಖ ಆಕರ್ಷಣೆಯೇ ಸ್ನೋ ಫಾಲ್‌. ಚುಮುಚುಮು ಚಳಿಯಲ್ಲಿ, ಹಾಲ್ಬಿಳುಪಿನ ಮಂಜಿನಲ್ಲಿ ಆಟ ಆಡೋ ಅವಕಾಶ ಮಕ್ಕಳಿಗಿ ಸಿಗಲಿದೆ. ಈ ಪಾರ್ಟಿ ದೊಡ್ಡವರ ಪಾರ್ಟಿಗಿಂತ ಭಿನ್ನವಾಗಿದ್ದು, ವೈವಿಧ್ಯಮಯ ಚಟುವಟಿಕೆಗಳನ್ನು ಹೊಂದಿದೆ. ಸ್ನೋ ಫಾಲ್‌, ಮ್ಯಾಜಿಕ್‌ ಶೋ, ಫ‌ನ್‌ ಗೇಮ್ಸ್‌, ಫೋಟೊ ಬೂತ್‌, ಸಾಂತಾನಿಗೆ ಪತ್ರ ಬರೆಯುವ ಸ್ಪರ್ಧೆ ಹೀಗೆ ಹತ್ತು ಹಲವು ಬಗೆಯಲ್ಲಿ ಮಕ್ಕಳು ಮೋಜು ಮಾಡಬಹುದು. ಅಷ್ಟೇ ಅಲ್ಲದೆ, ಸಾಂತಾನನ್ನು ಭೇಟಿಯಾಗಿ, ಅವನಿಂದ ಗಿಫ್ಟ್ ಕೂಡಾ ಪಡೆಯಬಹುದು. 

ಎಲ್ಲಿ?:ಕಿಡ್ಸ್‌ಅಡ್ಡಾ, 980, 13ನೇ ಕ್ರಾಸ್‌, ಬನಶಂಕರಿ 2ನೇ ಘಟ್ಟ
ಯಾವಾಗ?: ಡಿ.23, ಭಾನುವಾರ ಸಂಜೆ 5.30-8.30
ಟಿಕೆಟ್‌ ದರ: 600 ರೂ. (1 ಮಗು+ ಇಬ್ಬರು ಪೋಷಕರು)

Advertisement

ಮಾಲ್‌ ಮಾಯಾಲೋಕ!
ಶಾಪಿಂಗ್‌, ಸಿನಿಮಾ, ಊಟದ ನೆಪದಲ್ಲಿ ಮಾಲ್‌ಗ‌ಳಿಗೆ ಹೋಗುತ್ತಿರುತ್ತೀರಾ? ಹಾಗಾದ್ರೆ ಈ ವಾರಾಂತ್ಯ ಖಂಡಿತಾ ಅದನ್ನು ತಪ್ಪಿಸಬೇಡಿ. ಕ್ರಿಸ್ಮಸ್‌ ನೆಪದಲ್ಲಿ, ಬಾಣಸವಾಡಿ ಹಾಗೂ ರಾಜಾಜಿನಗರದ ಒರಾಯನ್‌ ಮಾಲ್‌ಗ‌ಳಲ್ಲಿ ಹೊಸದೊಂದು ಲೋಕವೇ ಸೃಷ್ಟಿಯಾಗಿದೆ. ಝಗಮಗಿಸುವ ದೀಪಗಳು, ಕ್ರಿಸ್ಮಸ್‌ ಟ್ರೀ, ಸಾಂತಾ ಕ್ಲಾಸ್‌ ಗೊಂಬೆಗಳು, ದೀಪದ ಅಲಂಕಾರ, ಅಲಂಕಾರಿಕ ನಕ್ಷತ್ರಗಳು, ಕೆರೋಲ್‌ ಸಂಗೀತ ಆಕರ್ಷಣೀಯವಾಗಿದೆ.ಮಾಲ್‌ನ ಪ್ರವೇಶದ್ವಾರದಲ್ಲೇ , 40 ಅಡಿ ಎತ್ತರದ ಆಕರ್ಷಕ ಕ್ರಿಸ್‌¾ಮಸ್‌ ಮರವನ್ನು ಸೃಷ್ಟಿಸಿ, ಅದ್ದೂರಿಯಾಗಿ ಅಲಂಕರಿಸಲಾಗಿದೆ. ಇದು ಮಾಲೋ, ಮಾಯಾಲೋಕವೋ ಎಂದು ಅನುಮಾನ ಹುಟ್ಟಿಸುವ ಅಲಂಕಾರ, ಮಕ್ಕಳಾದಿಯಾಗಿ ಎಲ್ಲರಿಗೂ ಇಷ್ಟವಾಗಬಹುದು. 
ಎಲ್ಲಿ?: ಬಾಣಸವಾಡಿ ಹಾಗೂ ರಾಜಾಜಿನಗರದ ಒರಾಯನ್‌ ಮಾಲ್‌  
ಯಾವಾಗ? : ಡಿ. 22ರಿಂದ 25

ಮಮ್ಮಿ-ಪಪ್ಪ  ಹಾಗೂ ಪೆಪ್ಪ
ಮುದ್ದುದ್ದಾಗಿರುವ ಪೆಪ್ಪ ಹಂದಿಮರಿ ಗೊಂಬೆಗಳನ್ನು ನೀವು ನೋಡಿರಬಹುದು. ಈ ಬಾರಿ ಪೆಪ್ಪ, ತನ್ನ ಮಮ್ಮಿ, ಪಪ್ಪ ಹಾಗೂ ಜಾರ್ಜ್‌ ಜೊತೆಗೆ ಸೇರಿ, ಹೊಸ ಕತೆಯೊಂದನ್ನು ತರುತ್ತಿದ್ದಾಳೆ. ಕ್ರಿಸ್ಮಸ್‌ ಪ್ರಯುಕ್ತ ಮಕ್ಕಳಿಗಾಗಿ, ಪಪೆಟ್‌ಗಳನ್ನು ಬಳಸಿ ಕತೆ ಹೇಳುವ ಕಾರ್ಯಕ್ರಮ ಆಯೋಜನೆಯಾಗಿದೆ. 4-8 ವರ್ಷದೊಳಗಿನ ಮಕ್ಕಳ ಮನರಂಜಿಸುವ ಹಲವಾರು ಚಟುವಟಿಕೆಗಳೂ ಜೊತೆಗೆ ಇರಲಿವೆ. ಕ್ರಿಸ್ಮಸ್‌ ಪರಿಕಲ್ಪನೆಯಲ್ಲಿ ಮಣ್ಣಿನ ಮಾದರಿ ತಯಾರಿಕೆ, ಮಕ್ಕಳ ಪದ್ಯಗಳ ಗಾಯನ, ಕತೆಯನ್ನು ಆಧರಿಸಿದ ಕ್ವಿಝ್ ಹೀಗೆ ವೈವಿಧ್ಯಮಯ ಚಟುವಟಿಕೆಗಳು ಮಕ್ಕಳನ್ನು ರಂಜಿಸಲಿವೆ. ಟಿಕೆಟ್‌ಗಳು ಬುಕ್‌ ಮೈ ಶೋನಲ್ಲಿ ಲಭ್ಯ.
ಎಲ್ಲಿ?: ಮಂಚಿRನ್ಸ್‌ ಮಾಂಟೆಸರಿ, 890, 20ನೇ ಮೇನ್‌, ಜಯನಗರ 4ನೇ ಬ್ಲಾಕ್‌
ಯಾವಾಗ?: ಡಿ.22, ಶನಿವಾರ ಮಧ್ಯಾಹ್ನ 3-4.30
ಟಿಕೆಟ್‌ ದರ: 650 ರೂ.

ಕ್ರಿಸ್ಮಸ್‌ ಅಡುಗೆ ಕ್ಲಾಸ್‌!
ಪ್ರೀತಿಪಾತ್ರರಿಗಾಗಿ ಕ್ರಿಸ್ಮಸ್‌ ಪಾರ್ಟಿ ಹಮ್ಮಿಕೊಂಡಿದ್ದೀರ? ಹಾಗಾದ್ರೆ, ಕೇಕ್‌ ತರೋಕೆ ಬೇಕರಿಗೆ ಹೋಗಬೇಡಿ. ಮನೆಯಲ್ಲೇ ಕೇಕ್‌, ಪ್ಲಮ್‌ ಕೇಕ್‌, ಮಫಿನ್ಸ್‌ ತಯಾರಿಸಿ, ಗೆಳೆಯರಿಂದ ಭೇಷ್‌ ಅನಿಸಿಕೊಳ್ಳಿ. ಬೇಕಿಂಗ್‌ ಎಕ್ಸ್‌ಪರ್ಟ್‌ ಚಂದನ್‌ ಜೈನ್‌, ನಿಮಗಾಗಿ ಫೆಸ್ಟಿವ್‌ ಬೇಕಿಂಗ್‌ ಕಾರ್ಯಾಗಾರವನ್ನು ನಡೆಸುತ್ತಿದ್ದಾರೆ. ಈ ಕ್ರಿಸ್ಮಸ್‌ನಲ್ಲಿ, ಮನೆಯಲ್ಲೇ ಸುಲಭವಾಗಿ ಸಿಹಿ ತಿನಿಸುಗಳನ್ನು ತಯಾರಿಸೋದು ಹೇಗೆ ಅಂತ ಅವರು ಕಲಿಸುತ್ತಾರೆ. ಅಡುಗೆಯಲ್ಲಿ ಆಸಕ್ತಿಯುಳ್ಳ ಯಾರು ಬೇಕಾದರೂ ಭಾಗವಹಿಸಬಹುದು. ಸಾಮಗ್ರಿಗಳನ್ನು ಒದಗಿಸಲಾಗುತ್ತದೆ. ಟಿಕೆಟ್‌ಗಳು ಇವೆಂಟ್ಸ್‌ ಹೈನಲ್ಲಿ ಲಭ್ಯ.

ಎಲ್ಲಿ?: ಪ್ಯಾನಸೋನಿಕ್‌ ಲಿವಿಂಗ್‌ ಶೋರೂಂ, 40/1 ಗ್ರೌಂಡ್‌ ಫ್ಲೋರ್‌, ವಿಠuಲ್‌ ಮಲ್ಯ ರಸ್ತೆ, ಶಾಂತಲ ನಗರ
ಯಾವಾಗ?: ಡಿ.22, ಶನಿವಾರ ಬೆಳಗ್ಗೆ 11-1
ಟಿಕೆಟ್‌ ದರ: 100 ರೂ.
ಅರ್ಬನ್‌ ಬಜಾರ್‌ನ ಕ್ರಿಸ್ಮಸ್‌ ಖದರ್‌
ಹೊಸತನ್ನು ತನ್ನ ಜೋಳಿಗೆಯಲ್ಲಿ ಹೊತ್ತು ತರುವುದು ಕ್ರಿಸ್ಮಸ್‌ನ ಸ್ಪೆಷಾಲಿಟಿ. ಸಿಕೆಪಿಯಲ್ಲಿ ತೆರೆದಿರುವ ಅರ್ಬನ್‌ ಬಜಾರ್‌ ಕೂಡ ಅಂಥದ್ದೇ ಹೊಸತುಗಳ ಆಕರ್ಷಣೆ. ಕ್ರಿಸ್ಮಸ್‌ ನೆಪದಲ್ಲಿ ಇಲ್ಲಿ ದೊಡ್ಡ ಶಾಪಿಂಗ್‌ ರಸದೌತಣವೇ ನಡೆಯುತ್ತಿದೆ. ಆರ್ಟ್‌, ಕ್ರಾಫ್ಟ್, ಹ್ಯಾಂಡ್‌ಲೂಮ್‌ ಎಕ್ಸಿಬಿಶನ್‌ ಮಾತ್ರವಲ್ಲದೇ, ವರ್ಕ್‌ಶಾಪ್‌, ಫ‌ುಡ್‌ಸ್ಟಾಲ್‌ಗ‌ಳೂ ಗ್ರಾಹಕರಲ್ಲಿ ವಿಶಿಷ್ಟ ಸೆಳೆತ ಹುಟ್ಟುಹಾಕಿದೆ.
ಯಾವಾಗ?: ಡಿ.30ರ ವರೆಗೆ, ಬೆ.11- ರಾ.7.30
ಎಲ್ಲಿದೆ?: ಚಿತ್ರಕಲಾ ಪರಿಷತ್‌, ಕುಮಾರಕೃಪಾ ರಸ್ತೆ

ಮಕ್ಕಳಿಗೆ ಕ್ರಿಸ್ಮಸ್‌ ಕತೆಗಳು
ಓದಿನಲ್ಲಿ ಮುಳುಗಿರುವ ಮಕ್ಕಳಿಗೆ ಕತೆಗಳು ಮನಸ್ಸಿಗೆ ಬೇಗನೆ ಹಿಡಿಸುತ್ತವೆ. ಅದರಲ್ಲೂ ಹಾಡಿನ ಮೂಲಕ ಕತೆಗಳನ್ನು ಕಲಿಯುವುದೆಂದರೆ ಪುಟಾಣಿಗಳಿಗೆ ಬಲು ಇಷ್ಟ. ಕ್ರಿಸ್ಮಸ್‌ ಹಿನ್ನೆಲೆಯಲ್ಲಿ ಜಿಂಗಲ್‌ ಬೆಲ್ಸ್‌, ಸಂತಾ ಇಸ್‌ ಆನ್‌ ಹಿಸ್‌ ವೇ, ಇಟ್ಸ್‌ ಟೈಮ್‌ ಫಾರ್‌ ಕ್ರಿಸ್ಮಸ್‌… ಮುಂತಾದ ಕತೆಗಳಿಗೆ ಕಿವಿಕೊಡುವ, ಇದೇ ಮಾದರಿಯ ಕತೆಗಳನ್ನು ಹೇಳುವ ಅವಕಾಶವನ್ನು ಡೈಲಾಗ್ಸ್‌ ಕೆಫೆ ಒದಗಿಸಿದೆ. ಇಲ್ಲಿ ಮಕ್ಕಳಿಗೆ ಆಟಿಕೆಗಳ ಮೂಲಕ ಕಥಾ ಪ್ರಪಂಚವನ್ನೇ ಸೃಷ್ಟಿಸಲಾಗಿದೆ. ವಿವಿಧ ಆಟಗಳೂ ಮನರಂಜಿಸಲಿವೆ. ಕತೆ ಹೇಳುವ ಕಲೆಯನ್ನೂ ಈ ಕಾರ್ಯಕ್ರಮ ಪ್ರೇರೇಪಿಸಲಿದೆ.

ಯಾವಾಗ?: ಡಿ.23, ಭಾನುವಾರ, ಸಂ.4
ಎಲ್ಲಿ?: ಡೈಲಾಗ್ಸ್‌ ಕೆಫೆ, 17ನೇ ಮುಖ್ಯರಸ್ತೆ, ಕೋರಮಂಗಲ
ಪ್ರವೇಶ: 250 ರೂ.

Advertisement

Udayavani is now on Telegram. Click here to join our channel and stay updated with the latest news.

Next