Advertisement
ಮನುಷ್ಯತ್ವವನ್ನು ಮರೆತು ದಾನವ ರಾಗಲು ಹೊರಟವರಿಗೆ ಮಾನವರಾಗಿ ಜೀವಿಸಲು ಕಲಿಸಲು ದೇವರು ಭೂಮಿ ಯಲ್ಲಿ ಜನ್ಮ ತಾಳಿದರು. ಅವರು ಜಗತ್ತಿಗೆ ಶಾಂತಿ-ಸಮಾಧಾನವನ್ನು ಕಾಣಿಕೆಯಾಗಿ ನೀಡಿದ್ದಾರೆ. ಆದರೆ ಇಂದು ಸಮಾಜದಲ್ಲಿ ಅಶಾಂತಿ, ಅಸಮಾನತೆ, ಅನ್ಯಾಯ, ಬಡತನ, ನಿರುದ್ಯೋಗ, ಹಿಂಸೆ, ಶೋಷಣೆ, ರೋಗರುಜಿನ, ದ್ವೇಷ, ಯುದ್ಧ, ಅತ್ಯಾಚಾರ, ಮತಾಂಧತೆ, ಪರಮತ ಅಸಹಿಷ್ಣುತೆಗಳನ್ನು ಕಾಣುತ್ತಿದ್ದೇವೆ. ಇದಕ್ಕೆ ಉತ್ತರ ಪ್ರತೀಕಾರ ಖಂಡಿತ ಅಲ್ಲ. ಬದಲಾಗಿ ಪ್ರೀತಿ ಮಾತ್ರ. ಇದನ್ನು ಜನರಿಗೆ ಅರ್ಥ ಮಾಡಿಸಲು ಯೇಸು ಕ್ರಿಸ್ತರು ಈ ಧರೆಯಲ್ಲಿ ಜನ್ಮ ತಾಳಿದ್ದು.
ಸರ್ವೇಜನಾಃ ಸುಖೀನೋಭವಂತು! ವಾಲೈಕುಮ್‌ಸಲಾಮ್! ಒಬ್ಬರ ನ್ನೊಬ್ಬರು ಪ್ರೀತಿಸಿರಿ – ಇವೆಲ್ಲದರ ತಾತ್ಪರ್ಯ ಒಂದೇ – ಎಲ್ಲರೂ ಸುಖ, ಶಾಂತಿ, ಪ್ರೀತಿಯಿಂದ ಬಾಳಲಿ ಎಂಬುದು. ಇದೇ ಕ್ರಿಸ್ತ ಜಯಂತಿಯ ಸಂದೇಶ. ತಮಗೆಲ್ಲರಿಗೂ ಕ್ರಿಸ್ತ ಜಯಂತಿಯ ಶುಭಾಶಯಗಳು.
ರೈ| ರೆ| ಡಾ| ಜೆರಾಲ್ಡ್ ಐಸಾಕ್ ಲೋಬೊ, ಬಿಷಪ್, ಉಡುಪಿ
Related Articles
ಬೆಳ್ತಂಗಡಿ: ಪಾಪಾಂಧಕಾರದಲ್ಲಿ ಮುಳುಗಿದ್ದ ಮಾನವ ಕುಲಕ್ಕೆ ರಕ್ಷಣೆಯ ನ್ನೀಯಲು ದೇವ ಪುತ್ರ ಶ್ರೀ ಯೇಸು ಸ್ವಾಮಿ ಕ್ರಿಸ್ತರು ಜನಿಸಿದರು ಇದು ಸರ್ವ ಮನುಷ್ಯರಿಗೂ ಸಂತೋಷವನ್ನು ಕೊಡುವ ಸುದ್ದಿಯಾಗಿದೆ. ಈ ಸುದ್ದಿಯು ನಮಗೆ ಸಿಹಿಯಾಗಬೇಕಿದ್ದರೆ ಯೇಸುಕ್ರಿಸ್ತರನ್ನು ಸ್ವೀಕರಿಸಿ ಅವರು ತೋರಿಸಿಕೊಟ್ಟ ಪರಿಶುದ್ಧತೆಯ ಮತ್ತು ಪರಪ್ರೀತಿಯ ಮಾರ್ಗದಲ್ಲಿ ಸಂಚರಿಸಬೇಕು.
Advertisement
ನಾವೆಲ್ಲ ದ್ವೇಷವನ್ನೂ ಕಲಹವನ್ನೂ ತ್ಯಜಿಸಿ ಪ್ರೀತಿಯ ಮತ್ತು ಶಾಂತಿಯ ದಾರಿಯಲ್ಲಿ ಸಾಗಬೇಕು. ಕ್ರಿಸ್ಮಸ್ ಆಚರಣೆಯ ಸಂದರ್ಭ ನಾಡಿನ ಸಮಸ್ತರಿಗೂ ಪ್ರಭು ಕ್ರಿಸ್ತರ ಆರ್ಶೀವಾದ ವನ್ನೂ ಪ್ರಾರ್ಥಿಸುತ್ತೇನೆ. ನಮ್ಮ ನಾಡು ಶಾಂತಿಯ ಮತ್ತು ಸಮೃದ್ಧಿಯ ನೆಲೆಬೀಡಾಗಲಿ ಎಂದು ಹಾರೈಸುತ್ತೇನೆ. 2020ರ ಹೊಸ ವರ್ಷದ ಶುಭವನ್ನು ಸರ್ವರಿಗೂ ಕೋರುತ್ತೇನೆ.– ವಂ| ಲಾರೆನ್ಸ್ ಮುಕ್ಕುಯಿ, ಧರ್ಮಾಧ್ಯಕ್ಷರು, ಬೆಳ್ತಂಗಡಿ