Advertisement

ರಿಲಯನ್ಸ್‌ ಫೌಂಡೇಶನ್‌ನಿಂದ ಕ್ರಿಸ್‌ಮಸ್‌ ಸಂಭ್ರಮ

10:48 PM Dec 27, 2019 | Lakshmi GovindaRaj |

ಮುಂಬೈ: ರಿಲಯನ್ಸ್‌ ಫೌಂಡೇಶನ್‌ನ ಸ್ಥಾಪಕ ಮತ್ತು ಅಧ್ಯಕ್ಷೆ ನೀತಾ ಅಂಬಾನಿ ಅವರು 4000 ಬಡ ಮಕ್ಕಳಿಗಾಗಿ ನೂತನ ಜಿಯೋ ವೊಂಡರ್‌ಲ್ಯಾಂಡ್‌ನ‌ಲ್ಲಿ ಅದ್ಧೂರಿ ಕ್ರಿಸ್‌ ಮಸ್‌ ಸಂಭ್ರಮ ವನ್ನು ಆಯೋಜನೆ ಮಾಡಿದ್ದರು. ಮಕ್ಕಳು ಈ ಸಮಯದಲ್ಲಿ ಕುಣಿದು- ಕುಪ್ಪಳಿಸಿದ್ದಾರೆ, ಸಂಭ್ರಮವನ್ನು ಆನಂದಿಸಿದ್ದಾರೆ. ಈ ಹಿನ್ನಲೆಯಲ್ಲಿ ಮುಂಬೈನ ಹೊಸ ಹಬ್ಬದ ಉತ್ಸಾಹ ನಿರ್ಮಾಣವಾಗಿದ್ದು, ಜಿಯೋ ವಂಡರ್‌ಲ್ಯಾಂಡ್‌ ಮುಂಬೈ ನಗರದ ವಾರ್ಷಿಕ ಮೆಗಾ- ಉತ್ಸಾಹ ಕಾರ್ಯಕ್ರಮದಲ್ಲಿ ಒಂದಾಗಲಿದೆ.

Advertisement

ಅಂತಾರಾಷ್ಟ್ರೀಯ ಕಾರ್ನಿವೆಲ್‌ಗ‌ಳಿಗೆ ಸಮನಾದ ರೀತಿಯಲ್ಲಿಯೇ ಜಿಯೋ ವಂಡರ್‌ಲ್ಯಾಂಡ್‌ ನಿರ್ಮಾಣವಾಗಿದ್ದು, ಇಲ್ಲಿ ಮಕ್ಕಳಿಗೆ ಡ್ರೋನ್‌ ಶೋಗಳು, ಮ್ಯಾಜಿಕ್‌ ಆಕ್ಟ್ಗಳು, ಫೆರ್ರಿಸ್‌ ವೀಲ್‌, ವಿವಿಧ ಪಾರ್ಕ್‌ಗಳು, ಸಾಂತಾ ಕ್ಲಾಸ್‌, ಫೋಟೋ ಬೂತ್‌ಗಳು ಮತ್ತು ಇನ್ನಿತರ ಮನರಂಜನೆಯ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು, ಇದಲ್ಲದೇ ಹ್ಯಾಮ್ಲಿಸ್‌ ಫ್ಯಾಮಿಲಿಯ ಹ್ಯಾಮ್ಲೆ ಮತ್ತು ಹ್ಯಾಟ್ಟಿ ಬಿರ್‌ ಸೇರಿ ವಿಶೇಷ ಪಾತ್ರಗಳ ಮೆರವಣಿಗೆ ಹೆಚ್ಚುವರಿ ಮೆರಗು ತಂದಿತು. ಇದೇ ವೇಳೆ ನಿತಾ ಅಂಬಾನಿ ಮತ್ತು ಸಾಂತಾ ಮಕ್ಕಳಿಗೆ ವಿಶೇಷ ಉಡುಗೊರೆ ವಿತರಿಸಿದರು.

ರಿಲಯನ್ಸ್‌ ಫೌಂಡೇಶನ್‌ನ ಸ್ಥಾಪಕ ಮತ್ತು ಅಧ್ಯಕ್ಷೆ ನೀತಾ ಅಂಬಾನಿ ಮಾತ ನಾಡಿ, ಇದು ಅತ್ಯಂತ ಸಂತೋಷದ ಕ್ಷಣವಾಗಿದೆ. ಮಕ್ಕಳೊಂದಿಗೆ ಖುಷಿ ಯನ್ನು ಹಂಚಿಕೊಳ್ಳ ಬೇಕು. ಮಕ್ಕಳು ಸಮಗ್ರ ಜೀವನ ದೃಷ್ಟಿಕೋನಕ್ಕೆ ಅರ್ಹ ರಾಗಿದ್ದಾರೆ ಮತ್ತು ಹಬ್ಬದ ಋತುವಿನ ಸಂತೋಷ ಸೇರಿದಂತೆ ಪ್ರತಿ ಮಗುವು ಆಡುವ ಹಕ್ಕನ್ನು ಹೊಂದಿರಬೇಕು. ಇದಕ್ಕಾಗಿಯೇ ರಿಲಯನ್ಸ… ಫೌಂಡೇಶನ್‌ 4000 ಬಡ ಮಕ್ಕಳಿಗೆ ಹೊಸ ಜಿಯೋ ವಂಡರ್‌ಲ್ಯಾಂಡ್‌ ಅನುಭವದ ಅವಕಾಶ ಮಾಡಿಕೊಟ್ಟಿದೆ ಎಂದರು.

ನೀತಾ ಅಂಬಾನಿ ಅವರೊಂದಿಗೆ ಇಶಾ ಅಂಬಾನಿ ಪಿರಮಾಲ್‌ ಅವರು ಜಿಯೋ ವಂಡರ್‌ಲ್ಯಾಂಡ್‌ ಪ್ರಾರಂಭ ವನ್ನು ನೆನಪಿನಲ್ಲಿ ಇರಿಸುವ ಸಲುವಾಗಿ ಭಾರತದ ಅತಿ ಎತ್ತರದ ಸುಸ್ಥಿರ ಕ್ರಿಸ್ಮಸ್‌ ವೃಕ್ಷದ ದೀಪಗಳನ್ನು ಬೆಳಗಿಸುವುದು ಮೂಲಕ ಚಾಲನೆ ನೀಡಿದರು. ರಿಸೈಕಲ್‌ 4 ಲೈಫ್‌ ಕ್ರಿಸ್‌ಮಸ್‌ ಟ್ರೀ’ ಎನ್ನುವ ಸಂದೇಶವನ್ನು ಸಾರಿಸಿದರು. ನೀತಾ ಅಂಬಾನಿ ಅವರ ನಾಯಕತ್ವದಲ್ಲಿ ರಿಲಯನ್ಸ್‌ ಫೌಂಡೇಶನ್‌ 2012 ರಿಂದ ಹಿಂದುಳಿದ ಮಕ್ಕಳಿಗಾಗಿ ಕ್ರಿಸ್‌ಮಸ್‌ ಆಚರಣೆಯನ್ನು ಆಯೋಜಿಸುತ್ತಿದೆ. ರಿಲಯನ್ಸ್‌ ಫೌಂಡೇಶನ್‌ ಹ್ಯಾಮ್ಲಿಸ್‌ ಟಾಯ್‌ ಡೋನೆಷನ್‌ ಡ್ರೈವ್‌ ಅನ್ನು ಸಹ ಬೆಂಬಲಿಸುತ್ತದೆ. ಈ ವರ್ಷ ಭಾರತದಾದ್ಯಂತ 5000ಕ್ಕೂ ಹೆಚ್ಚು ಆಟಿಕೆಗಳನ್ನು ಮಕ್ಕಳಿಗೆ ವಿತರಿಸಿದೆ ಎಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next