Advertisement

ಕ್ರಿಸ್‌ ಮೋರಿಸ್‌ ಓವರ್‌ನಲ್ಲಿ 7 ಎಸೆತ !

12:19 AM Jun 26, 2019 | sudhir |

ಲಂಡನ್‌ : ಈಗಾಗಲೇ ವಿಶ್ವಕಪ್‌ ಕೂಟದ ಕಳಪೆ ಅಂಪಾಯರಿಂಗ್‌ ಸರ್ವತ್ರ ಟೀಕೆಗೆ ಗುರಿಯಾಗಿದೆ. ಇದಕ್ಕೆ ಇನ್ನೊಂದು ಸೇರ್ಪಡೆ ರವಿವಾರ ಲಾರ್ಡ್ಸ್‌ನಲ್ಲಿ ನಡೆದ ಪಾಕಿಸ್ಥಾನ-ದಕ್ಷಿಣ ಆಫ್ರಿಕಾ ಪಂದ್ಯದಲ್ಲಿ ಆಗಿರುವ ಯಡವಟ್ಟು.
ದಕ್ಷಿಣ ಆಫ್ರಿಕಾದ ಆಲ್‌ರೌಂಡರ್‌ ಕ್ರಿಸ್‌ ಮೋರಿಸ್‌ ಓವರ್‌ನಲ್ಲಿ ಹೆಚ್ಚುವರಿಯಾಗಿ ಒಂದು ಬಾಲ್‌ ಎಸೆದಿದ್ದು, ಆದರೆ ಈ 7ನೇ ಬಾಲ್‌ ಅಂಪಾಯರ್‌ಗಳ ಗಮನಕ್ಕೆ ಬಂದಿರಲಿಲ್ಲ.

Advertisement

ಶ್ರೀಲಂಕಾದ ಕುಮಾರ್‌ ಧರ್ಮಸೇನ ಮತ್ತು ವೆಸ್ಟ್‌ ಇಂಡೀಸ್‌ನ ಜೋಯಲ್‌ ವಿಲ್ಸನ್‌ ಈ ಪಂದ್ಯದ ಅಂಪಾಯರ್‌ಗಳಾಗಿದ್ದರು.

14ನೇ ಓವರ್‌ನಲ್ಲಿ ಕ್ರಿಸ್‌ ಮೋರಿಸ್‌ ಒಂದು ಹೆಚ್ಚುವರಿ ಬಾಲ್‌ ಎಸೆದಿದ್ದಾರೆ.
ಈ ಸಂದರ್ಭದಲ್ಲಿ ಇಮಾಮ್‌-ಉಲ್‌-ಹಕ್‌ ಮತ್ತು ಫ‌ಕರ್‌ ಜಮಾನ್‌ ಕ್ರೀಸಿನಲ್ಲಿದ್ದರು.

ಅದೃಷ್ಟಕ್ಕೆ ಈ ಹೆಚ್ಚುವರಿ ಬಾಲ್‌ನಲ್ಲಿ ರನ್‌ ಬರಲಿಲ್ಲ ಮತ್ತು ವಿಕೆಟ್‌ ಉದುರಲಿಲ್ಲ. ಹೀಗಾಗಿ ಇದು ಹೆಚ್ಚು ವಿವಾದಕ್ಕೆಡೆಯಾಗಲಿಲ್ಲ.
ಆದರೂ ಅಂಪಾಯರ್‌ಗಳ ನಿರ್ಲಕ್ಷ್ಯಕ್ಕೆ ತೀಕ್ಷ್ಣ ಟೀಕೆ ವ್ಯಕ್ತವಾಗಿದೆ.

ನಿಯಮ ಏನು ಹೇಳುತ್ತದೆ?
ಕ್ರಿಕೆಟ್‌ ನಿಯಮ 17.5 ಪ್ರಕಾರ ಅಂಪಾಯರ್‌ಗಳ ಗಮನಕ್ಕೆ ಬಾರದೆ ಹೆಚ್ಚುವರಿ ಬಾಲ್‌ ಎಸೆದರೆ ಅದು ಸಿಂಧು ಎಂದೇ ಪರಿಗಣಿಸಲ್ಪಡುತ್ತದೆ. ಈ ಬಾಲ್‌ನಲ್ಲಿ ರನ್‌ ಬಂದರೆ ಅಥವಾ ವಿಕೆಟ್‌ ಉರುಳಿದರೆ ಆಯಾಯ ತಂಡಗಳ ಅದೃಷ್ಟ.

Advertisement
Advertisement

Udayavani is now on Telegram. Click here to join our channel and stay updated with the latest news.

Next