Advertisement

ಇಮ್ರಾನ್ ಖಾನ್ ಬೆಂಬಲಿಗರ ರಾಲಿಯಲ್ಲಿ ‘ಚೌಕಿದಾರ್ ಚೋರ್ ಹೇ’ ಘೋಷಣೆ!

08:52 AM Apr 11, 2022 | Team Udayavani |

ಇಸ್ಲಮಾಬಾದ್: ಪಾಕಿಸ್ಥಾನದಲ್ಲಿ ನಡೆದ ರಾಜಕೀಯ ಬದಲಾವಣೆಯಲ್ಲಿ ಇಮ್ರಾನ್ ಖಾನ್ ಪ್ರಧಾನಿ ಪಟ್ಟವನ್ನು ಕಳೆದುಕೊಂಡಿದ್ದಾರೆ. ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಅವರ ಸರ್ಕಾರದ ವಿರುದ್ಧ ಅವಿಶ್ವಾಸ ಮತವನ್ನು ಕಳೆದುಕೊಂಡ ನಂತರ ಇಮ್ರಾನ್ ಖಾನ್ ಬೆಂಬಲಿಗರು ಭಾನುವಾರ ದೇಶಾದ್ಯಂತ ರಾಲಿಗಳನ್ನು ನಡೆಸಿದರು.

Advertisement

ಅಂತಹ ಒಂದು ರಾಲಿಯಲ್ಲಿ, ಪಾಕಿಸ್ತಾನದ ಮಾಜಿ ಆಂತರಿಕ ಸಚಿವ ಶೇಖ್ ರಶೀದ್ ಅಹ್ಮದ್ ಅವರು ಮಾತನಾಡುತ್ತಿದ್ದಾಗ ‘ಚೌಕಿದಾರ್ ಚೋರ್ ಹೈ’ ಎಂಬ ಘೋಷಣೆ ಜನರ ನಡುವಿನಿಂದ ಕೇಳಿಬಂತು. ಇಮ್ರಾನ್ ಖಾನ್ ಅವರ ಜನಾದೇಶವನ್ನು ವಿರುದ್ಧದ ನಡೆಗಾಗಿ ಪಾಕಿಸ್ತಾನ ಸೇನೆಯ ವಿರುದ್ಧ ಘೋಷಣೆಯನ್ನು ಕೂಗಲಾಗಿದೆ.

ಶೇಖ್ ರಶೀದ್ ಅಹ್ಮದ್ ಅವರು ಕೂಡಲೇ ಅಂತಹ ಘೋಷಣೆಗಳನ್ನು ಕೂಗದಂತೆ ಗುಂಪನ್ನು ಕೇಳಿಕೊಂಡರು, ನಾವು “ಶಾಂತಿಯಿಂದ ಹೋರಾಡೋಣ” ಎಂದು ಒತ್ತಿ ಹೇಳಿದರು.

ಇದನ್ನೂ ಓದಿ:ಧೈರ್ಯ ಅಂದರೆ ಇದು! ಯುದ್ಧ ಭೀತಿ ನಡುವೆಯೂ ಉಕ್ರೇನ್‌ಗೆ ಭೇಟಿ ನೀಡಿದ ಬ್ರಿಟನ್‌ ಪ್ರಧಾನಿ

‘ಚೌಕಿದಾರ್ ಚೋರ್ ಹೈ’ ಎಂಬ ಘೋಷಣೆಯನ್ನು ಈ ಹಿಂದೆ ಭಾರತದಲ್ಲಿ 2019 ರ ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಬಳಸಿತ್ತು.

Advertisement

ಭಾನುವಾರ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಶೇಖ್ ರಶೀದ್ ಅಹ್ಮದ್, ಈ ತಿಂಗಳು ಪರಿಸ್ಥಿತಿಗಳು ಬದಲಾಗುತ್ತವೆ. ಇಮ್ರಾನ್ ಖಾನ್ ಅವರ ಆಡಳಿತವನ್ನು ಬದಲಿಸಿದ “ಆಮದು ಸರ್ಕಾರ”ವನ್ನು ಕೊನೆಗೊಳಿಸುವುದಾಗಿ ಪ್ರತಿಜ್ಞೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next