Advertisement

ಥಿಯೇಟರ್‌ನತ್ತ ಚೌ ಚೌ ಬಾತ್‌; ಹೈಪರ್‌ ಲಿಂಕ್‌ ರೊಮ್ಯಾಂಟಿಕ್‌ ಕಾಮಿಡಿ ಸಿನಿಮಾ

06:44 PM Mar 11, 2024 | Team Udayavani |

ಕೇಂಜ ಚೇತನ್‌ ಕುಮಾರ್‌ ನಿರ್ದೇಶನದ ಹೈಪರ್‌ಲಿಂಕ್‌ ರೊಮ್ಯಾಂಟಿಕ್‌ -ಕಾಮಿಡಿ ಕಥಾಹಂದರದ “ಚೌ ಚೌ ಬಾತ್‌’ ಸಿನಿಮಾ ಮಾ.15ರಂದು ತೆರೆಕಾಣುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್‌ಗೆ ಮೆಚ್ಚುಗೆ ವ್ಯಕ್ತವಾಗುವ ಮೂಲಕ ಚಿತ್ರತಂಡ ಖುಷಿಯಾಗಿದೆ.

Advertisement

“”ಚೌ ಚೌ ಬಾತ್‌’ ಕನ್ನಡದಲ್ಲಿ ಬರುತ್ತಿರುವ ಹೈಪರ್‌ಲಿಂಕ್‌ ರೊಮ್ಯಾಂಟಿಕ್‌-ಕಾಮಿಡಿ ಶೈಲಿಯ ಸಿನಿಮಾ. ಸಿನಿಮಾದಲ್ಲಿ ಮೂರು ವಿಭಿನ್ನ ಕಥೆಗಳಿದ್ದು, ಎಲ್ಲವೂ ಒಟ್ಟಿಗೇ ಸಾಗುತ್ತದೆ. ಕನ್ನಡದಲ್ಲಿ ಈ ರೀತಿಯ ಸಿನಿಮಾಗಳು ಬಂದಿದ್ದು ತುಂಬ ಕಡಿಮೆ. ಹೊಸತನದ ಕಥೆ, ಹೊಸ ನಿರೂಪಣೆಯಿರುವ ಈ ಸಿನಿಮಾ, ಕನ್ನಡ ಪ್ರೇಕ್ಷಕರಿಗೆ ಹೊಸ ಅನುಭವ ಕೊಡಲಿದೆ. ಚೌ ಚೌ ಬಾತ್‌ ನಲ್ಲಿ ಮೂವರು ನಾಯಕರು ಮತ್ತು ನಾಯಕಿಯರಿದ್ದಾರೆ. ಆ ಜೋಡಿಗಳ ಸುತ್ತ ಚಲಿಸುವ ಕಥೆ ಎಲ್ಲರೊಂದಿಗೂ ಲಿಂಕು ಹೊಂದಿರುತ್ತದೆ. ಕ್ಷಣ ಕ್ಷಣವೂ ಎದುರಾಗೋ ತಿರುವುಗಳು, ಅಚ್ಚರಿಗಳ ಮೂಲಕ ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂತೆ ಈ ಚಿತ್ರ ಮೂಡಿ ಬಂದಿದೆ’ ಎಂಬುದು ನಿರ್ದೇಶಕ ಕೇಂಜ ಚೇತನ್‌ ಕುಮಾರ್‌ ಮಾತು.

“ಚೌ ಚೌ ಬಾತ್‌’ ಸಿನಿಮಾದಲ್ಲಿ ಯುವ ನಟ ಸಾಗರ್‌ ಗೌಡ, ಸಂಕಲ್ಪ್ ಶರ್ಮಾ, ಸುಶ್ಮಿತಾ ಭಟ್‌, ಅರುಣಾ ಬಾಲರಾಜ್‌, ಧನುಶ್‌ ಬೈಕಂಪಾಡಿ, ಗೀತಾ ಬಂಗೇರ, ಪ್ರಕರ್ಷ ಶಾಸ್ತ್ರಿ ಮುಂತಾದವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. “ಸನಾತನಯ್‌ ಪಿಕ್ಚರ್’ ಮತ್ತು “ಕಾಮಧೇನು ಫಿಲಂಸ್‌’ ಅರ್ಪಿಸುವ ಈ ಸಿನಿಮಾ “ಹಾರಿಜಾನ್‌ ಮೂವೀಸ್‌’ ಬ್ಯಾನರಿನಡಿಯಲ್ಲಿ ನಿರ್ಮಾಣವಾಗಿರುವ “ಚೌ ಚೌ ಬಾತ್‌’ ಸಿನಿಮಾದ ಹಾಡುಗಳಿಗೆ ಹೇಮಂತ್‌ ಜೋಯ್ಸ ಸಂಗೀತ ಸಂಯೋಜಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next