Advertisement

ಜೇಟ್ಲಿ ಪುತ್ರಿಗೆ ಲಂಚ ಕೊಟ್ಟ ಚೋಸ್ಕಿ: ರಾಹುಲ್‌ ಟೀಕೆ

06:00 AM Oct 23, 2018 | |

ಹೊಸದಿಲ್ಲಿ: ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ಪುತ್ರಿ ಹೆಸರು ಪಿಎನ್‌ಬಿ ಹಗರಣದ ಆರೋಪಿ ಮೆಹುಲ್‌ ಚೋಸ್ಕಿಯ ಪಾವತಿ ಪಟ್ಟಿಯಲ್ಲಿ ಕಂಡು ಬಂದಿದೆ. ಹೀಗಾಗಿ ಜೇಟ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಒತ್ತಾಯಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ಜೇಟ್ಲಿ ಪುತ್ರಿಗೆ ಹಣ ಪಾವತಿಯಾಗುತ್ತಿತ್ತು ಎಂದು ಹೇಳಲಾಗಿರುವ ಖಾಸಗಿ ಬ್ಯಾಂಕ್‌ನ ಖಾತೆ ಸಂಖ್ಯೆಯನ್ನೂ ನೀಡಿದ್ದಾರೆ. ಹೀಗಾಗಿಯೇ ಚೋಸ್ಕಿ ವಿರುದ್ಧ ಯಾವುದೇ ಕ್ರಮಕ್ಕೆ ಅವಕಾಶ ಕೊಡದೆ ಪರಾರಿಯಾಗಲು ಅನುಕೂಲ ಕಲ್ಪಿಸಲಾಗಿದೆ ಎಂದು ದೂರಿದ್ದಾರೆ. 

Advertisement

ಇದೇ ವೇಳೆ ಜೇಟ್ಲಿ ಪುತ್ರಿ- ಅಳಿಯ ಪಿಎನ್‌ಬಿಗೆ ವಂಚಿಸಿದ ಮೆಹುಲ್‌ ಚೋಸ್ಕಿಯಿಂದ 24 ಲಕ್ಷ ರೂ. ಸ್ವೀಕರಿಸಿದ್ದಾರೆ. ಈ ಮೂಲಕ ವಂಚಕರಿಗೆ ನೆರವಾಗಿದ್ದಾರೆ. ಜನವರಿಯಿಂದ ಇಲ್ಲಿಯವರೆಗೆ 19 ಸಾವಿರ ಬ್ಯಾಂಕ್‌ ವಂಚನೆ ಪ್ರಕರಣಗಳಿಂದ 90 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಕಾಂಗ್ರೆಸ್‌ ನಾಯಕ ಸಚಿನ್‌ ಪೈಲಟ್‌ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next