Advertisement

ವಿಷಯಗಳನ್ನು ಆರಿಸಿಕೊಂಡು “ವರ್ಡ್ಸ್‌ಮಿತ್‌’ಆಗಬೇಕು

12:30 AM Feb 05, 2019 | |

ಉಡುಪಿ: ಗೋಲ್ಡ್‌ಸ್ಮಿತ್‌ ಕುಸುರಿ ಕೆಲಸಗಳನ್ನು ಮಾಡುವಂತೆ, ಲೇಖಕ ಸಣ್ಣ ಸಣ್ಣ ವಿಷಯಗಳನ್ನು ಆರಿಸಿಕೊಂಡು “ವರ್ಡ್ಸ್‌ಮಿತ್‌’ ಆಗಬೇಕು ಎಂದು ಕುಂದಾಪುರ ಭಂಡಾರ್‌ಕಾರ್ ಕಾಲೇಜಿನ ಇಂಗ್ಲಿಷ್‌ ವಿಭಾಗ ಮುಖ್ಯಸ್ಥ ಡಾ| ಹಯವದನ ಉಪಾಧ್ಯ ಆಶಿಸಿದರು.

Advertisement

ಕಿದಿಯೂರು ಹೊಟೇಲ್‌ ಸಭಾಂಗಣದಲ್ಲಿ ರವಿವಾರ ಸುಹಾಸಂ ಆಯೋಜಿಸಿದ ವಕ್ವಾಡಿ ಶ್ರೀರಾಜ್‌ ಎಸ್‌. ಆಚಾರ್ಯರ  “ಕತ್ತಲೆಯ ಬೆತ್ತಲು’ ಕಥಾ ಸಂಕಲನ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಲೇಖಕನಾದವನು ತನ್ನ ಮಾಧ್ಯಮ ಯಾವುದು? ಕತೆಗಾರನೋ? ಕಾದಂಬರಿಕಾರನೋ? ಕವಿಯೋ ಎಂದು ನಿಶ್ಚಯಿಸಿಕೊಂಡು ಮುಂದುವರಿಯಬೇಕು. ಭೈರಪ್ಪನವರು ಕಾದಂಬರಿಕಾರನೆಂದೇ ಗುರುತಿಸಿಕೊಂಡು ಮುಂದುವರಿದಂತೆ ಮುನ್ನಡೆಯಬೇಕು ಎಂದರು. 

ಪುಸ್ತಕ ಬಿಡುಗಡೆಗೊಳಿಸಿದ ವಿಮರ್ಶಕ ಪ್ರೊ| ಮುರಳೀಧರ ಉಪಾಧ್ಯ ಹಿರಿಯಡಕ  ಮಾತನಾಡಿದರು. ಕುಂದಾಪುರ ಭಂಡಾರ್‌ಕಾರ್ ಕಾಲೇಜಿನ ವಿದ್ಯಾರ್ಥಿನಿ ಕೀರ್ತಿ ಭಟ್‌ ಕೃತಿ ಪರಿಚಯಿಸಿದರು. ಸುಹಾಸಂ ಅಧ್ಯಕ್ಷ ಎಚ್‌. ಶಾಂತರಾಜ ಐತಾಳ್‌ ಸ್ವಾಗತಿಸಿ ಸಹ ಕಾರ್ಯದರ್ಶಿ ಶ್ರೀನಿವಾಸ ಉಪಾಧ್ಯ ನಿರ್ವಹಿಸಿದರು. ಸಂಧ್ಯಾ ಶೆಣೈ ವಂದಿಸಿದರು. ಶ್ರೀರಾಜ್‌ ಎಸ್‌. ಆಚಾರ್ಯರ ತಂದೆ, ತಾಯಿ ಉಪಸ್ಥಿತರಿದ್ದರು. 

ಸರಕಾರದಿಂದ  8 ಕೋ.ರೂ. ಅನುದಾನ 
ನಾನು ಅನೇಕ ಸಾಹಿತ್ಯ ಸಮ್ಮೇಳನಗಳಲ್ಲಿ ಯೂಟ್ಯೂಬ್‌ ಮೂಲಕ ಭಾಗವಹಿಸಿದ್ದೇನೆ. ಧಾರವಾಡದ ರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನ ವರದಿಯನ್ನು ಯೂಟ್ಯೂಬ್‌ ಮೂಲಕ ನೇರ ಪ್ರಸಾರ ಮಾಡಬೇಕೆಂದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ್‌ ಅವರಿಗೆ ದೂರವಾಣಿ ಕರೆ ಮೂಲಕ ವಿನಂತಿಸಿದಾಗ ಅವರಿಗೆ ಇದರ ಕುರಿತು ಏನೂ ಗೊತ್ತಿರಲಿಲ್ಲ. ನಾನು ಧಾರವಾಡ ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದು ಸರಕಾರ 8 ಕೋ.ರೂ. ಅನುದಾನ ನೀಡುತ್ತಿದೆ. ನೀವು ಯೂಟ್ಯೂಬ್‌ನಲ್ಲಿ ಕಲಾಪಗಳನ್ನು ಬಿತ್ತರಿಸುವಂತೆ ಆದೇಶಿಸಬೇಕು ಎಂದು ಕೇಳಿಕೊಂಡೆ. ಇದು ಸಾಧ್ಯವಾಯಿತು.                  
– ಪ್ರೊ| ಮುರಳೀಧರ ಉಪಾಧ್ಯ ಹಿರಿಯಡಕ

Advertisement

Udayavani is now on Telegram. Click here to join our channel and stay updated with the latest news.

Next