Advertisement
ನಗರದ ಜೆ.ಎಂ.ಐ.ಟಿ ವೃತ್ತದಲ್ಲಿ ಅಪಘಾತದಲ್ಲಿ ಬಲಿಯಾದ ವಿದ್ಯಾರ್ಥಿನಿ ಅಮೃತಾಳ ಆತ್ಮಕ್ಕೆ ಶಾಂತಿ ಕೋರಿ ರೋಟರಿ ಬಾಲಭವನದ ಮುಂಭಾಗದಲ್ಲಿ ವಿಜ್ಞಾನ ಕೇಂದ್ರ, ರೋಟರಿ ಕ್ಲಬ್, ಸಾಮಾಜಿಕ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಮಂಗಳವಾರ ಹಮ್ಮಿಕೊಂಡಿದ್ದ ರಸ್ತೆ ಅಪಘಾತಗಳ ವಿರುದ್ಧ ಸಹಿ ಸಂಗ್ರಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Related Articles
Advertisement
ಸಾಮಾಜಿಕ ಕಾರ್ಯಕರ್ತೆ ರೀನಾ ವೀರಭದ್ರಪ್ಪ ಮಾತನಾಡಿ, ಸಂಚಾರಿ ನಿಯಮ ಉಲ್ಲಂಘಿಸಿ ಅಡ್ಡಾ ದಿಡ್ಡಿಯಾಗಿ ಚಾಲನೆ ಮಾಡುವುದರಿಂದ ಅಪಘಾತಗಳು ಸಂಭವಿಸುವುತ್ತವೆ. ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಾಲನೆ ಮಾಡುವವರನ್ನು ಕಾನೂನಿನ ಅಡಿ ಶಿಕ್ಷಿಸಬೇಕು. ಏಕೆಂದರೆ ಸಾಕಷ್ಟು ಅಪಘಾತಗಳಲ್ಲಿ ತಲೆಗೆ ಪೆಟ್ಟು ಬೀಳುತ್ತದೆ. ಇದರಿಂದ ಪ್ರಾಣಕ್ಕೆ ಕುತ್ತು ಬರುತ್ತದೆ. ಅತಿಯಾದ ವೇಗದ ಚಾಲನೆ ಮನಸ್ಸಿಗೆ ಮುದ ನೀಡಬಹುದು. ಆಕಸ್ಮಿಕವಾಗಿ ಅಪಘಾತವಾಗಿ ಕೈಕಾಲುಗಳನ್ನು ಕಳೆದುಕೊಂಡು ಬದುಕಿದರೆ ತಂದೆ-ತಾಯಿ ನೋವು ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪರಿಸರವಾದಿ ಡಾ| ಎಚ್.ಎಸ್.ಕೆ. ಸ್ವಾಮಿ ಮಾತನಾಡಿ, ಹೆದ್ದಾರಿಗಳಲ್ಲಿ ಯಾವುದೇ ಸುರಕ್ಷತೆ ಇಲ್ಲದ ಪರಿಣಾಮ ಅಪಘಾತಗಳು ಮೇಲಿಂದ ಮೇಲೆ ಸಂಭವಿಸುತ್ತಿರುತ್ತವೆ. ಜೆ.ಎಂ.ಐ.ಟಿ ಬಳಿ ಸಂಭವಿಸಿದ ಅಪಘಾತದಲ್ಲಿ ಹನ್ನೆರಡು ವರ್ಷದ ಬಾಲಕಿ ಅಮೃತಾ ಬಲಿಯಾಗಿರುವುದು ಅತ್ಯಂತ ನೋವಿನ ಸಂಗತಿ. ಇನ್ನು ಮುಂದೆ ಅಂತಹ ಘಟನೆಗಳು ಮರಕಳಿಸಬಾರದೆಂದರೆ ಹೆದ್ದಾರಿಗಳಲ್ಲಿ ರೋಡ್ ಹಂಪ್ಸ್‌ಗಳನ್ನು ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ವೈ. ಚಂದ್ರಶೇಖರ್, ಬ್ರಹ್ಮಾನಂದ ಗುಪ್ತ, ಡಾ| ಹರಿಣಿ, ವಾಣಿ ಜಯದೇವ್, ಕವಿತಾ ಜೈನ್, ರೋಟರಿ ಶಾಲೆ ವಿದ್ಯಾರ್ಥಿಗಳು ಇದ್ದರು.