Advertisement

Chittapur: ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾಧಿಕಾರಿ ಭೇಟಿ; ಪರಿಶೀಲನೆ

08:09 PM Oct 15, 2024 | Team Udayavani |

ಚಿತ್ತಾಪುರ: ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾಧಿಕಾರಿ ಫೌಜೀಯಾ ತರನ್ನುಮ್ ಅವರು ಅ.15ರ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ನಂತರ ಮಾತನಾಡಿದ ಅವರು, ವೈದ್ಯರು ಆಸ್ಪತ್ರೆಗೆ ಸರಿಯಾದ ಸಮಯಕ್ಕೆ ಬಂದು ರೋಗಿಗಳ ಆರೋಗ್ಯ ವಿಚಾರಿಸಬೇಕು. ಸರ್ಕಾರಿ ಆಸ್ಪತ್ರೆಗೆ ಬಡವರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಅವರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

content-img

ನಂತರ ಆಸ್ಪತ್ರೆಯ ಪ್ರತಿಯೊಂದು ಕೋಣೆಗಳನ್ನು ವೀಕ್ಷಿಸಿದರು. ಬಾಣಂತಿಯರ ಕೋಣೆಗೆ ಹೋಗಿ ಅವರ ಜೊತೆ ಕೆಲ ಕಾಲ ಕಳೆದು ಅವರ ಆರೋಗ್ಯವನ್ನು ವಿಚಾರಿಸಿದರು.

ಈ ಸಂದರ್ಭದಲ್ಲಿ ಸಿಇಓ ಭಂವ್ಹಾರಸಿಂಗ್ ಮೀನಾ, ತಹಶೀಲ್ದಾರ್ ನಾಗಯ್ಯ ಹಿರೇಮಠ, ಡಿಎಚ್.ಓ ಡಾ. ಶರಣು ಕದ್ನಾಳ, ಸಿಡಿಪಿಓ ಆರತಿ ತುಪ್ಪದ್,  ತಾಲೂಕು ಆರೋಗ್ಯ ಅಧಿಕಾರಿ ಡಾ. ರಜೀವುಲ್ಲಾ ಖಾದ್ರಿ, ತಾಲೂಕು ಆಡಳಿತಾಧಿಕಾರಿ ಡಾ. ಮುಬಾಶೀರ್, ವೈದ್ಯರಾದ, ಶ್ರೀಧರ ಲಾಕೆ, ಡಾ. ಖಾಜೀಂ ಅಲಿ, ಡಾ.ಪ್ರೇರಣಾ, ಡಾ. ಮಾಧುರಿ, ಡಾ. ನಸರುನ್ನಿಸಾ ಸೇರಿದಂತೆ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.