Advertisement

ಚಿತ್ತಗಾಂಗ್‌ ಟೆಸ್ಟ್‌: 374 ರನ್‌ ಮುನ್ನಡೆಯಲ್ಲಿ ಅಫ್ಘಾನಿಸ್ಥಾನ

12:01 AM Sep 08, 2019 | Team Udayavani |

ಚಿತ್ತಗಾಂಗ್‌: ಆತಿಥೇಯ ಬಾಂಗ್ಲಾದೇಶ ವಿರುದ್ಧದ ಚಿತ್ತಗಾಂಗ್‌ ಟೆಸ್ಟ್‌ ಪಂದ್ಯದ 3ನೇ ದಿನದಾಟದ ಅಂತ್ಯಕ್ಕೆ ಅಫ್ಘಾನಿಸ್ಥಾನ 374 ರನ್ನುಗಳ ಭಾರೀ ಮುನ್ನಡೆ ಸಾಧಿಸಿದೆ.
ಅಫ್ಘಾನಿಸ್ಥಾನದ 342 ರನ್ನುಗಳ ಮೊದಲ ಇನ್ನಿಂಗ್ಸಿಗೆ ಜವಾಬಾಗಿ ಬಾಂಗ್ಲಾ 205ಕ್ಕೆ ಕುಸಿದಿತ್ತು. ರಶೀದ್‌ ಖಾನ್‌ 55ಕ್ಕೆ 5, ಮೊಹಮ್ಮದ್‌ ನಬಿ 56ಕ್ಕೆ 3 ವಿಕೆಟ್‌ ಕಿತ್ತು ಆತಿಥೇಯರನ್ನು ಕಾಡಿದರು. ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿರುವ ಅಫ್ಘಾನಿಸ್ಥಾನ, ಶನಿವಾರದ ಆಟದ ಕೊನೆಯಲ್ಲಿ 8 ವಿಕೆಟಿಗೆ 237 ರನ್‌ ಮಾಡಿದೆ. ಆರಂಭಕಾರ ಇಬ್ರಾಹಿಂ ಜದ್ರಾನ್‌ 87, ಅಸYರ್‌ ಅಫ್ಘಾನ್‌ 50 ರನ್‌ ಬಾರಿಸಿ ಮಿಂಚಿದರು.

Advertisement

ಪಂದ್ಯವಿನ್ನೂ 2 ದಿನ ಕಾಣಲಿಕ್ಕಿರುವುದರಿಂದ ಬಾಂಗ್ಲಾದೇಶ ಸೋಲು ತಪ್ಪಿಸಿಕೊಳ್ಳಲು ಭಾರೀ ಹೋರಾಟ ಮಾಡಬೇಕಾದುದು ಅನಿವಾರ್ಯ.

Advertisement

Udayavani is now on Telegram. Click here to join our channel and stay updated with the latest news.

Next