Advertisement

ಓಬಣ್ಣ ನಾಯಕರ ಸಮಾಧಿ ನಾಶ: ಕ್ರಮಕ್ಕೆ ಆಗ್ರಹ

02:54 PM Sep 28, 2021 | Team Udayavani |

ಚಿತ್ರದುರ್ಗ: ತಾಲೂಕಿನ ಹಳಿಯೂರುಬಳಿ ಪಾಳೇಗಾರ ಓಬಣ್ಣ ನಾಯಕರಸಮಾ ಧಿಯನ್ನು ನಾಶ ಮಾಡಿದವರವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆಒತ್ತಾಯಿಸಿ ರಾಜನಹಳ್ಳಿ ಶ್ರೀ ವಾಲ್ಮೀಕಿಪ್ರಸನ್ನಾನಂದ ಸ್ವಾಮೀಜಿಯವರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

Advertisement

ಹಿರೇಗುಂಟನೂರು ಹೋಬಳಿ,ಹಳಿಯೂರು ಗ್ರಾಮದ ಸರ್ವೆನಂ:105/2ರಲ್ಲಿ ಓಬಣ್ಣ ನಾಯಕರಸಮಾ ಧಿಯನ್ನು ನಾಶ ಪಡಿಸಿದ ಬಿ.ಆರ್‌.ರುದ್ರಾಣಿ ಗಂಗಾಧರ ಹಾಗೂ ಇತರರವಿರುದ್ಧ ಗ್ರಾಮಾಂತರ ಪೊಲೀಸ್‌ಠಾಣೆಯಲ್ಲಿ ಚಿತ್ರನಾಯಕ ವೇದಿಕೆಸಂಸ್ಥಾಪಕ ಅಧ್ಯಕ್ಷ ಕೆ.ಟಿ. ಪ್ರಶಾಂತ್‌ಕುಮಾರ್‌ ಸೆ. 20 ರಂದು ದೂರುದಾಖಲಿಸಿದ್ದಾರೆ. ಆದರೆ ಈವರೆಗೂತಪ್ಪಿತಸ್ಥರನ್ನು ಬಂ ಧಿಸದಿರುವುದು ಖಂಡನೀಯ ಎಂದು ಆಕ್ಷೇಪಿಸಿದರು.

ಚಿನ್ಮೂಲಾದ್ರಿ ಸಂಸ್ಥಾನದ ಮೂಲಪುರುಷ ಚಿತ್ರನಾಯಕರ ನಂತರದಲ್ಲಿಆಳ್ವಿಕೆ ಮಾಡಿದಂತಹ ದೊರೆಗಳಲ್ಲಿಪ್ರಮುಖರಾದ ಓಬಣ್ಣ ನಾಯಕಕಾಲವಾದ ನಂತರ ಚಿತ್ರದುರ್ಗತಾಲೂಕಿನ ಹಳಿಯೂರು ಗ್ರಾಮದಜಮೀನಿನಲ್ಲಿ ಸ್ಮಾರಕ ಮಾಡಲಾಗಿತ್ತು.ಪ್ರಜೆಗಳಿಗಾಗಿ ಕೆರೆ ಕಟ್ಟೆ, ಗುಡಿಗೋಪುರಗಳು, ರಕ್ಷಣೆಗಾಗಿ ಕೋಟೆಕೊತ್ತಲಗಳನ್ನು ನಿರ್ಮಿಸಿದ ಜಾತ್ಯತೀಯಸಂಸ್ಥಾನದ ದೊರೆಗಳ ಸ್ಮಾರಕ ಹಾಳುಮಾಡಿರುವುದು ಸರಿಯಲ್ಲ.

ಈಘಟನೆಯ ಕುರಿತು ನಾಯಕ ಸಮಾಜದಮುಖಂಡರ ಜೊತೆ ಖುದ್ದು ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ್ದು, ಸಮಾಧಿಯಿಂದ ಹೊರ ತೆಗೆದ ಬೃಹದಾಕಾರದದೊರೆ ಓಬಣ್ಣ ನಾಯಕರ ಆಡಳಿತವೈಖರಿಯ ಕುರಿತಾದ ಸಾಹಸಗಳಶಿಲ್ಪಕಲೆಗಳ ಕೆತ್ತನೆಯ ಕಲ್ಲುಗಳುಜಮೀನಿನ ಪಕ್ಕದಲ್ಲಿವೆ. ಈ ಸಂಬಂಧಅ ಧಿಕಾರಿಗಳಿಗೆ ಅನೇಕ ಬಾರಿ ದೂರುನೀಡಿದ್ದರೂ ಇಲ್ಲಿಯವರೆಗೂ ಯಾವುದೇಕಾನೂನು ಕ್ರಮ ಕೈಗೊಂಡಿಲ್ಲ ಎಂದುಆರೋಪಿಸಿದರು. ಈ ಹಿನ್ನೆಲೆಯಲ್ಲಿಜಿಲ್ಲಾ ಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿತನಿಖೆ ಮಾಡಿಸಿ ಆರೋಪಿಗಳ ವಿರುದ್ಧಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ನಾಯಕ ಸಮಾಜದಮುಖಂಡರಾದ ಬಿ.ಕಾಂತರಾಜು,ಎಚ್‌.ಜೆ. ಕೃಷ್ಣಮೂರ್ತಿ, ಕೆ.ಟಿ.ಪ್ರಶಾಂತ್‌ಕುಮಾರ್‌, ಪಿ. ಬಸವರಾಜ್‌ಬಚ್ಚಬೋರನಹಟ್ಟಿ, ಪಿ. ತಿಪ್ಪೇಸ್ವಾಮಿಮದಕರಿ ಸಂತು, ಮಹಂತೇಶ್‌ಪಾಳೇಗಾರ್‌, ವಸಂತ್‌ ಲಕ್ಷ್ಮೀಸಾಗರ,ವೀರೇಂದ್ರಸಿಂಹ, ನಗರಸಭೆ ಸದಸ್ಯವೆಂಕಟೇಶ್‌ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next