ಚಿತ್ರದುರ್ಗ: ಕೃಷಿ, ಶಿಕ್ಷಣ, ಉದ್ದಿಮೆ ಸ್ಥಾಪನೆ, ಮನೆನಿರ್ಮಾಣ, ವಾಹನ ಹೀಗೆ ಮುಖ್ಯವಾಗಿ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ಹೇಗೆ ಪಡೆಯಬೇಕು,ಇದಕ್ಕೆ ಯಾರು ಅರ್ಹರು, ಯಾವ ರೀತಿ ಬ್ಯಾಂಕ್‌ವ್ಯವಸ್ಥಾಪಕರು ತಮ್ಮ ಯೋಜನೆ ಪ್ರಸ್ತುತಪಡಿಸಬೇಕು ಎಂಬ ವಿಚಾರದ ಕುರಿತು ಗ್ರಾಹಕರು, ಸಾಲಗಾರರಲ್ಲಿ ಜಾಗೃತಿ ಮೂಡಿಸಲಾಯಿತು.
ನಗರದ ಗಾಯತ್ರಿ ಕಲ್ಯಾಣಮಂಟಪದಲ್ಲಿಜಿಲ್ಲಾ ಮಾರ್ಗದರ್ಶಿ ಬ್ಯಾಂಕ್, ರಾಜ್ಯ ಮಟ್ಟದಬ್ಯಾಂಕುಗಳ ಸಮಿತಿ ಹಾಗೂ ಎಲ್ಲಾ ಬ್ಯಾಂಕುಗಳಆಶ್ರಯದಲ್ಲಿ ಆಯೋಜಿಸಿದ್ದ ಸಾಲ ಸಂಪರ್ಕಕಾರ್ಯಕ್ರಮದಲ್ಲಿ ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಯಿತು.
ಸಾಲದ ಜತೆಯಲ್ಲಿ ಪ್ರಧಾನಮಂತ್ರಿ ಸುರûಾವಿಮಾ ಯೋಜನೆ (ಪಿಎಂಎಸ್‌ಬಿವೈ), ಅಪಘಾತವಿಮಾ ಯೋಜನೆ, ಪ್ರಧಾನಮಂತ್ರಿ ಜೀವನ ಜ್ಯೋತಿಬಿಮಾ ಯೋಜನೆ (ಪಿಎಂಜೆಜೆಬಿವೈ), ಅಟಲ್‌ಪಿಂಚಣಿ ಯೋಜನೆ, ಪರಿಶಿಷ್ಟ ಜಾತಿ, ಪರಿಶಿಷ್ಟಪಂಗಡ ಹಾಗೂ ಮಹಿಳೆಯರಿಗೆ ಸಾಲ ಸೌಲಭ್ಯ,ಹೊಸ ಉದ್ಯಮ ಸ್ಥಾಪಿಸುವವರಿಗೆ 10 ಲಕ್ಷದಿಂದ1 ಕೋಟಿಯವರೆಗೂ ಸಾಲ ಸೇರಿದಂತೆ ಅನೇಕವಿಷಯಗಳ ಕುರಿತು ಅರಿವು ಮೂಡಿಸಲಾಯಿತು.
ಇದೇ ವೇಳೆ ಈ ಹಿಂದೆ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದಬೀದಿಬದಿ ವ್ಯಾಪಾರಿಗಳಿಗೆ ಸಾಲ, ಕೆನರಾ ಎಂಎಸ್‌ಎಂಇ ಸಾಲ, ಮುದ್ರಾ ಸಾಲ, ಪಿಎಂಇಜಿಪಿಸಾಲ, ವಾಹನ ಸಾಲ, ಗೃಹ ಸಾಲ, ಇತರೆಸಾಲಗಳ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾಬ್ಯಾಂಕ್, ಕರ್ನಾಟಕ ಬ್ಯಾಂಕ್, ಕರ್ನಾಟಕಗ್ರಾಮೀಣ ಬ್ಯಾಂಕ್, ಯೂನಿಯನ್ ಬ್ಯಾಂಕ್,ಐಸಿಐಸಿಐ, ಬ್ಯಾಂಕ್ ಆಫ್ ಬರೋಡ ಸೇರಿ ಒಟ್ಟುಎಂಟು ಮಳಿಗೆ ತೆರೆಯಲಾಗಿತ್ತು. ಅನೇಕರುಮಳಿಗೆಗಳ ಬಳಿಗೆ ಹೋಗಿ ಮಾಹಿತಿಯ ಜತೆಗೆಸಾಲ ಪಡೆಯುವ ಕುರಿತು ಅಧಿ ಕಾರಿಗಳೊಂದಿಗೆಕೆಲ ಕಾಲ ಚರ್ಚಿಸಿದರು.
ಮೇಳ ಉದ್ಘಾಟಿಸಿದ ಕೇಂದ್ರ ಹಣಕಾಸುಸೇವೆಗಳ ಇಲಾಖೆ ಕಾರ್ಯದರ್ಶಿ ದೇಬಶಿಶ್‌ಪಾಂಡೆ ಮಾತನಾಡಿ, ಕೇಂದ್ರ ಸರ್ಕಾರದ ವಿವಿಧಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಎಲ್ಲಾಬ್ಯಾಂಕುಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕುಎಂದು ಕರೆ ನೀಡಿದರು. ಪ್ರಧಾನಮಂತ್ರಿಸ್ವನಿಧಿ , ಅಟಲ್ ಪಿಂಚಣಿ, ಮುದ್ರಾ, ಸ್ಟಾಂಡ್‌ಅಪ್ ಇಂಡಿಯಾ, ಪ್ರಧಾನ ಮಂತ್ರಿ ಸುರûಾಜೀವನ ಜ್ಯೋತಿ ಬಿಮಾ ಯೋಜನೆ ಸೇರಿ ಇತರಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವಜವಾಬ್ದಾರಿ ಬ್ಯಾಂಕುಗಳ ಅಧಿ ಕಾರಿಗಳದ್ದಾಗಿದೆ ಎಂದರು.
ಕೆನರಾ ಬ್ಯಾಂಕ್ ಕಾರ್ಯನಿರ್ವಾಹಕನಿರ್ದೇಶಕಿ ಎ. ಮಣಿಮೆಕಾಲೈ, ಕರ್ನಾಟಕ ಎಸ್‌ಎಲ್‌ಬಿಸಿ ಕನ್ವಿನರ್ ಬಿ. ಚಂದ್ರಶೇಖರರಾವ್,ಪ್ರಧಾನ ವ್ಯವಸ್ಥಾಪಕ ರಮಾ ನಾಯ್ಕ, ಬ್ಯಾಂಕ್‌ಅ ಧಿಕಾರಿಗಳಾದ ರಘುರಾಜ್, ಶ್ರೀನಾಥ್ ಜೋಷಿ,ಮಹಾದೇವಯ್ಯ, ನಬಾರ್ಡ್‌ನ ಕವಿತಾ, ಸತೀಶ್,ಅಮರೇಶಿ, ಸುರೇಂದರ್, ಚಂದ್ರಯ್ಯ, ಪಿ.ವಿ.ಸಿಂಧು ಇದ್ದರು