Advertisement
ಅಂದಾಜು 4 ಕೋ.ರೂ. ವೆಚ್ಚದಲ್ಲಿ ಹೆದ್ದಾರಿಯಿಂದ ಬೀಚ್‌ಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ವಿಸ್ತರಣೆ, ಕಾಂಕ್ರೀಟ್ ಕಾಮಗಾರಿ, ತಡೆಗೋಡೆ ಮತ್ತಿತರ ಕೆಲಸ ಕಾರ್ಯ, ಬೀದಿ ದೀಪದ ಅಳವಡಿಕೆ ನಡೆಯಲಿದೆ.
Related Articles
Advertisement
ಸಮುದ್ರ ತೀರದ ಉದ್ದಕ್ಕೂ ಹಸುರು, ತೆಂಗಿನ ಮರಗಳ ಸಾಲು ಸಾಲು, ಉತ್ತಮ ಗಾಳಿ ಮನಸ್ಸಿಗೆ ಮುದ ನೀಡುತ್ತವೆ. ಮೂಲಸೌಕರ್ಯ ಅಭಿವೃದ್ಧಿಯ ಬಳಿಕ ಪುಣ್ಯಕ್ಷೇತ್ರ ಪ್ರವಾಸೋದ್ಯಮ ಹಾಗೂ ಬೀಚ್ ಟೂರಿಸಂಗೆ ಹೊಸ ಕೇಂದ್ರವಾಗಿ ಸೇರ್ಪಡೆ ಆಗುವುದರಲ್ಲಿ ಸಂಶಯವಿಲ್ಲ. ಸಿಆರ್‌ಝಡ್‌ವಲಯದ ಸರಳೀಕರಣದ ಬಳಿಕ ರಾಜ್ಯದ ಪ್ರವಾಸೋದ್ಯಮ ಇಲಾಖೆ ಹೊಸ ಪ್ರವಾಸಿ ಸ್ಥಳಗಳನ್ನು ಗುರುತಿಸುವಲ್ಲಿ ಗಮನ ಹರಿಸಲಿದೆ.
ರೆಸಾರ್ಟ್, ಹೊಟೇಲ್ ಮತ್ತಿತರ ವ್ಯವಸ್ಥೆಗಳು ಸಮೀಪದಲ್ಲೇ ಇದ್ದರೆ, ಭವಿಷ್ಯದಲ್ಲಿ ಸಿಆರ್‌ಝಡ್ ಸರಳೀಕರಣದಿಂದ ಹೋಮ್ ಸ್ಟೇ ಸೌಲಭ್ಯ ಪ್ರವರ್ಧಮಾನಕ್ಕೆ ಬರುವ ಸಾಧ್ಯತೆಯಿದೆ. ಇಲ್ಲಿನ ಬೀಚ್‌ನ ಉದ್ದಕ್ಕೂ ಪಾರ್ಕಿಂಗ್, ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಸೂರ್ಯಾಸ್ತ ವೀಕ್ಷಣೆಗೆ ಬೇಕಾದ ಸೌಲಭ್ಯ ಕಲ್ಪಿಸಿದಲ್ಲಿ ಪಣಂಬೂರು, ಸುರತ್ಕಲ್ ಬೀಚ್‌ಗೆ ಪರ್ಯಾಯವಾಗಿ ಚಿತ್ರಾಪುರ ಬೀಚ್ ಪ್ರವಾಸಿಗರ ಆಕರ್ಷಕವಾ ಗಿ ಹೊರಹೊಮ್ಮಲಿದೆ.
ದೇವಸ್ಥಾನ ಅಭಿವೃದ್ಧಿ
ಸ್ಥಳೀಯವಾಗಿ ಐತಿಹಾಸಿಕ ಹಿನ್ನೆಲೆ ಹೊಂದಿರುವ ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನವೂ ಅಂದಾಜು 8 ಕೋ.ರೂ. ವೆಚ್ಚದಲ್ಲಿ ಅಭಿವೃದ್ಧಿಯಾಗುತ್ತಿದ್ದು, ರಾಜ್ಯದ ಗಮನ ಸೆಳೆಯಲು ಸಿದ್ಧಗೊಳ್ಳುತ್ತಿದೆ. ಸಮುದ್ರಾಭಿಮುಖವಾಗಿ ಇಲ್ಲಿನ ಜಲದುರ್ಗೆ ವಿರಾಜಮಾನಳಾಗಿದ್ದಾಳೆ.
ಬೀಚ್ ಟೂರಿಸಂಗೆ ಹೆಚ್ಚಿನ ಆದ್ಯತೆ: ಸಿಆರ್‌ಝೆಡ್ ಕಾಯಿದೆಯಲ್ಲಿ ತಿದ್ದುಪಡಿ ಮಾಡಿದ್ದರಿಂದ ಬೀಚ್ ಟೂರಿಸಂಗೆ ಹೆಚ್ಚಿನ ಆದ್ಯತೆ ಸಿಗಲಿದೆ. ಬೀಚ್ ತೀರದಲ್ಲಿ ವಾಸಿಸುವ ಹಲವಾರು ಕುಟುಂಬಗಳಿಗೂ ಸ್ವಾವಲಂಬಿ ಜೀವನ ನಡೆಸಲು ಪ್ರವಾಸೋದ್ಯಮ ಸಹಕಾರಿಯಾಗಲಿದೆ. ತಣ್ಣೀರುಬಾವಿ ಬ್ಲೂ ಫ್ಲ್ಯಾಗ್ ಬೀಚ್ ಅಭಿವೃದ್ಧಿಯ ಜತೆಗೆ ಇತರ ಬೀಚ್‌ಗಳನ್ನು ಸ್ಥಳೀಯವಾಗಿ ಆಕರ್ಷಣೆಯ ಕೇಂದ್ರವಾಗಿ ಮಾಡಲಾಗುವುದು. –ಡಾ| ಭರತ್ ಶೆಟ್ಟಿ ವೈ., ಶಾಸಕರು